
18 ವರ್ಷ ಮೇಲ್ಪಟ್ಟ ಯುವ ಮತದಾರರನ್ನು ಹೆಚ್ಚು ನೋಂದಾಯಿಸಿ : ಎಚ್.ವಿಶ್ವನಾಥ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 20- ಭಾರತ ಚುನಾವಣಾ ಆಯೋಗ ನವ ದೆಹಲಿಯ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಕರ್ನಾಟಕ ಚುನಾವಣಾ ಆಯೋಗ ಬೆಂಗಳೂರು ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳು ಇವರ ಆದೇಶ ಅನ್ವಯ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ೨೦೨೫ರ ನಿಮಿತ್ತ ೯೨- ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರಲ್ಲಿ ತಹಸಿಲ್ದಾರ್ ಎಚ್ ವಿಶ್ವನಾಥ ತಿಳಿಸಿದ್ದಾರೆ.
ತಾಲೂಕ ಆಡಳಿತ ಕಚೇರಿಯ ಕಾರ್ಯಾಲಯದ ಸಭಾಭವನದಲ್ಲಿ ಅವರು ಮಾತನಾಡಿ, ೨೯ ಅಕ್ಟೋಬರ್ ೨೦೨೪ ರಿಂದ ೨೮ ನವೆಂಬರ್ ೨೦೨೪ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರುಗಳ ಸೇರ್ಪಡೆ ತಿದ್ದುಪಡಿ ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸುವ ಕುರಿತಂತೆ ೨೩ ನವಂಬರ್ ೨೦೨೪ ಶನಿವಾರ ಮತ್ತು ೨೪ ನವಂಬರ್ ೨೦೨೪ ಭಾನುವಾರಗಳೆಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಎಲ್ಲಾ ಮತಗಟ್ಟೆಗಳಲ್ಲಿ ಮತಗಟ್ಟೆ ಅಧಿಕಾರಿಗಳ ಹತ್ತಿರ ೧ ಜನವರಿ ೨೦೨೫ಕ್ಕೆ ೧೮ ವರ್ಷ ಪೂರ್ಣಗೊಳಿಸುವವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ನಮೂನೆ-೬ರಲ್ಲಿ ಅರ್ಜಿಗಳಲ್ಲಿ ಸಲ್ಲಿಸುವುದು ಅದೇ ರೀತಿ ಯಾರಾದರೂ ಮರಣ ಹೊಂದಿದ್ದಲ್ಲಿ ಹೆಣ್ಣು ಮಕ್ಕಳು ಮದುವೆಯಾಗಿ ಹೋಗಿದ್ದಲ್ಲಿ ಮತ್ತು ಯಾವುದೇ ಮತದಾರರು ಬೇರೆ ಸ್ಥಳಗಳಿಗೆ ಶಾಶ್ವತವಾಗಿ ವಲಸೆ ಹೋಗಿದ್ದಲ್ಲಿ ನಮೂನೆ-೭ ರಲ್ಲಿ ಅರ್ಜಿ ಸಲ್ಲಿಸಲು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ವಯಸ್ಸು ಇತರೆ ಯಾವುದೇ ತಿದ್ದುಪಡಿ ಇದ್ದಲ್ಲಿ ಮತ್ತು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಬೇರೆ ಮತಗಟ್ಟೆಗಳಿಗೆ ವರ್ಗಾವಣೆ ಗೊಳ್ಳುವವರಿದ್ದಲ್ಲಿ ನಮೂನೆ-೮ ರಲ್ಲಿ ಅರ್ಜಿ ಸಲ್ಲಿಸಲು ೯೨-ಸಿರುಗುಪ್ಪ ಮತಕ್ಷೇತ್ರದ ಸಾರ್ವಜನಿಕರು ಈ ಅಭಿಯಾನದಲ್ಲಿ ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಿರುಗುಪ್ಪ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ೯೨-ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರ ನೊಂದನಾಧಿಕಾರಿ ತಹಾಶಿಲ್ದಾರ್ ಹೆಚ್ ವಿಶ್ವನಾಥ ಅವರು ಕೋರಿದರು.