KB

ವಕ್ಫ್ ಬೋರ್ಡ್ : ಸಾಮಾನ್ಯ ಸದಸ್ಯರ ನೋಂದಣಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 4- ನಗರದ ವಕ್ಫ್ ಸಂಸ್ಥೆ ಈದ್ಗಾ (ಸುನ್ನಿ), ಬ್ರೂಸ್‌ಪೇಟ್ ಸಾಮಾನ್ಯ ಸದಸ್ಯರ ದಾಖಾಲಾತಿ ನೋಂದಣಿಗೆ ಅಧಿಸೂಚನೆ ಪ್ರಕಟವಾಗಿದ್ದು, ಸಾಮಾನ್ಯ ಸದಸ್ಯರ ನೊಂದಣಿ ಇದೇ ಅಕ್ಟೋಬರ್ ೦೫ ರಿಂದ ಅಕ್ಟೋಬರ್ ೧೬ ರವರೆಗೆ ನಡೆಯಲಿದ್ದು, ಸದಸ್ಯರ ದಾಖಲಾತಿಗಾಗಿ ಅರ್ಜಿ ನಮೂನೆಗಳನ್ನು ವಿತರಿಸಲಾಗುತ್ತಿದೆ ಎಂದು ಈದ್ಗಾ (ಸುನ್ನಿ), ಬ್ರೂಸ್‌ಪೇಟೆಯ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.

ಭರ್ತಿ ಮಾಡಿದ ಅರ್ಜಿ ನಮೂನೆಗಳೊಂದಿಗೆ ೩ ಇತ್ತೀಚಿನ ಭಾವಚಿತ್ರಗಳು ಹಾಗೂ ರೂ.೩೦೦ ಶುಲ್ಕ ಹಾಗೂ ಅಧಿಕೃತ ವಿಳಾಸದ ೦೨ ಗುರುತಿನ ಚೀಟಿಗಳೊಂದಿಗೆ ಅಕ್ಟೋಬರ್ ೧೬ ರೊಳಗೆ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ನೋಂದಣಿ ಅಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು.

ದಾಖಲಾದ ಸದಸ್ಯರ ಕರಡು ಪಟ್ಟಿಯನ್ನು ಅ.೨೧ ರಂದು ಪ್ರಕಟಿಸಲಾಗುತ್ತದೆ. ಕರಡು ಪಟ್ಟಿಗೆ ಸಂಬ0ಧಿಸಿದ0ತೆ ಆಕ್ಷೇಪಣೆಗಳು ಹಾಗೂ ಸಲಹೆ-ಸೂಚನೆಗಳಿದ್ದಲ್ಲಿ ಅ.೨೨ ರಂದು ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೨ ಗಂಟೆಯೊಳಗೆ ಸಲ್ಲಿಸಬಹುದು. ಆಕ್ಷೇಪಣೆಗಳ ವಿಚಾರಣೆ ಅ.೨೩ ರಂದು ನಡೆಸಲಾಗುತ್ತದೆ.

ದಾಖಲಾದ ಸಾಮಾನ್ಯ ಸದಸ್ಯರ ಅಂತಿಮ ಪಟ್ಟಿಯನ್ನು ಅ.೨೫ ರಂದು ಮಧ್ಯಾಹ್ನ ೩.೩೦ ಗಂಟೆಗೆ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಪ್ರಕಟಿಸಲಾಗುವುದು ಮತ್ತು ಸಾಮಾನ್ಯ ಸದಸ್ಯರಿಗೆ ಅ.೨೯ ರಿಂದ ಅ.೩೦ ರವರೆಗೆ ಗುರುತಿನ ಚೀಟಿ (ಐಡಿ ಕಾರ್ಡ್) ಗಳನ್ನು ವಿತರಿಸಲಾಗುತ್ತದೆ.

ಈಗಾಗಲೇ ೨೦೧೯ರಲ್ಲಿ ಅರ್ಜಿ ಸಲ್ಲಿಸಿದ ಅರ್ಭ್ಯಥಿಗಳು ಚಂದಾದಾರಿಕೆ ಶುಲ್ಕ ರೂ. ೨೦೦/- ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಈದ್ಗಾ (ಸುನ್ನಿ), ಬ್ರೂಸ್‌ಪೇಟೆಯ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!