WhatsApp Image 2024-08-05 at 5.59.09 PM

ವೇದವತಿ ಹಗರಿ ನದಿಗೆ ನೀರು ಬಿಡುವ ಬಗ್ಗೆ ಮತ್ತು ನದಿ ಜೋಡಣೆ ಆಗುವಂತೆ ಮನವಿ 

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ ತಾಲೂಕಿನಲ್ಲಿ ಹರಿಯುವ ವೇದವತಿ ಹಗರಿ ನದಿಗೆ ನೀರು ಬಿಡುವ ಬಗ್ಗೆ ಮತ್ತು ನದಿ ಜೋಡಣೆ ಮಾಡುವ ಬಗ್ಗೆ ಒತ್ತಾಯ ಪತ್ರವನ್ನು ನಗರದ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಒಂದು ಗಂಟೆ ಸಮಯದಲ್ಲಿ ಸಲ್ಲಿಸಿದರು.

ಒತ್ತಾಯ ಪತ್ರದಲ್ಲಿ ನಮ್ಮ ತಾಲೂಕಿನಲ್ಲಿ ವೇದಾವತಿ ಹಗರಿ ನದಿ ಹರಿಯುತ್ತದೆ. ಈ ನದಿಯಿಂದ ತಾಲೂಕಿನ ಹಲವಾರು ಹಳ್ಳಿಗಳ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಬೆಳೆ ಬೆಳೆಯಲು ಅನುಕೂಲವಿದೆ. ಆದರೆ ಈಗ ಈ ನದಿ ಬಹಳ ಬತ್ತಿ ಹೋಗಿರುತ್ತದೆ ರೈತರ ಬೆಳೆಗಳಿಗೆ ನೀರು ಹರಿಸಲು ಬಹಳ ಕಷ್ಟವಾಗಿದೆ. ಆದ್ದರಿಂದ ಈ ನದಿಗೆ ನೀರು ಬಿಡಬೇಕು ಹಾಗೂ ತುಂಗಭದ್ರ ನದಿಯಿಂದ ನದಿ ಜೋಡಣೆ ಮಾಡಬೇಕು ಮಣ್ಣೂರು ಸೂಗೂರು ಹಳ್ಳದ ಮಾರ್ಗದಿಂದ ಭೈರಾಪುರ ಮಾರ್ಗವಾಗಿ ವೇದಾವತಿ ನದಿಗೆ ಜೋಡಣೆ ಮಾಡಬೇಕು ಇದರಿಂದ ಗೋಸಬಾಳ, ಮೈಲಾಪುರ, ಬಲಕುಂದಿ, ಅರಳಿಗನೂರು, ಬಗ್ಗೂರು, ಶ್ರೀನಗರ ಕ್ಯಾಂಪ್, ಚಾಣಕನೂರು, ಕರ್ಚಿಗನೂರು, ಗಜಗಿನಾಳು, ಕುಡುದರಹಾಳು, ನಾಗಲಾಪುರ, ಕುರುವಳ್ಳಿ, ಟಿ.ರಾಂಪುರ, ತೊಂಡೆಹಾಳ್, ರಾರಾವಿ, ಶಾಲಿಗನೂರು, ಕೋಟೆಹಾಳು ಕೆ.ಸೂಗೂರು, ಮುದೇನೂರು, ಬೆಂಚಿಕ್ಯಾಂಪ್ ಹಾಗೂ ಮುಂತಾದ ಹಳ್ಳಿಗಳಿಗೆ ಜನ ಜಾನುವಾರುಗಳಿಗೆ ತುಂಬಾ ಅನುಕೂಲವಾಗುತ್ತದೆ, ಆದ್ದರಿಂದ ಈ ಕೂಡಲೇ ಈ ಕೆಲಸವನ್ನು ಮಾಡಿ ಕೊಡಬೇಕೆಂದು ಒತ್ತಾಯಿಸುತ್ತೇವೆ, ಇಲ್ಲವಾದರೆ ಮುಂದಿನ ದಿನಗಳಲ್ಲಿ ಅನಿವಾರ್ಯವಾಗಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಪತ್ರ ಮುಖೇನ ಒತ್ತಾಯಿಸಿದ್ದಾರೆ .

ಸ್ವೀಕರಿಸಿದ ತಹಸಿಲ್ದಾರ್ ಹೆಚ್ ವಿಶ್ವನಾಥ್ ಈ ಕೂಡಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ರಾಮನಗೌಡ ರಾಜೇಶ ಮಲ್ಲಿಕಾರ್ಜುನ ಗೌಡ ಭೀಮನಗೌಡ ವೀರೇಶ ಎಂ ಚಂದ್ರು ಎಂಡಿ ಬಸವನಗೌಡ ಸೇರಿದಂತೆ ಅನೇಕ ರೈತರು ಇದ್ದರು

Leave a Reply

Your email address will not be published. Required fields are marked *

error: Content is protected !!