
ಆಚರಣೆಗೆ ಯೋಗ್ಯವಾಗದ ವಿಧಾನಗಳನ್ನು ಕೈಬಿಡಿ : ಎಲ್‌ಐಸಿ ಪ್ರತಿನಿಧಿಗಳಿಂದ ಮನವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 10- ಆಚರಣೆಗೆ ಪಾಲಿಸಲು ಯೋಗ್ಯವಾಗದ ವಿಧಾನಗಳನ್ನು ಅಳವಡಿಸಲು ಪ್ರಯತ್ನಿಸುತ್ತಿರುವ, ಭಾರತೀಯ ವಿಮೆ ಸಂಸ್ಥೆ ಕೂಡಲೇ ಕೈಬಿಡಬೇಕೆಂದು, ಬಳ್ಳಾರಿ ಬ್ರಾಂಚ್ ೨ನೇ ವಿಭಾಗದ, ಪ್ರತಿನಿಧಿಗಳ ಸಂಘದ ವತಿಯಿಂದ (ಲಿಯಾಫಿ) ಲೈಫ್ ಇನ್ಸೂರೆನ್ಸ್ ಏಜೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ಪ್ರತಿನಿಧಿಗಳ ವತಿಯಿಂದ ಬಳ್ಳಾರಿ ೨ನೇ ಬ್ರಾಂಚಿನ ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ವಿಶ್ವನಾಥ್, ಸುರೇಶ್, ಗಂಗಾಧರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸರ್ದಾರ್ ಸದಾಶಿವ ಮಾತನಾಡುತ್ತಾ, ಎಲ್‌ಐಸಿ ಸಂಸ್ಥೆಯ ಮೇಲೆ ದೇಶ ದ ಜನತೆಗೆ ಅಪಾರವಾದ ವಿಶ್ವಾಸವಿರುವುದರಿಂದ ಪ್ರತಿ ವರ್ಷ ವ್ಯಾಪಾರ ವಹಿವಾಟುಗಳು ಹೆಚ್ಚುತ್ತವೆ ಎಂದರು.
ಇತ್ತೀಚಿಗೆ ಎಲ್‌ಐಸಿ ಮ್ಯಾನೇಜ್ಮೆಂಟ್ ಪಾಲಸಿದಾರರ ಮತ್ತು ಪ್ರತಿನಿಧಿಗಳ ಸಂಕ್ಷೇಮವನ್ನು ಎದೆಗಾಡುಸುವ ವಿಧಾನಗಳನ್ನು ಅಳವಡಿಸಲು ಪ್ರಯತ್ನಿಸುತ್ತಿದೆ ಎಂದರು.
ಐಆರ್‌ಡಿಎ ಸಂಸ್ಥೆ ಅನುಷ್ಠಾನಗೊಳಿಸುವ ವಿಧಾನಗಳನ್ನು ಗಾಳಿಗೆ ತೂರುವದು ಎಷ್ಟು ಸಮರ್ಥನಿಯಾ ಎಂದು ಪ್ರಶ್ನಿಸಿದರು. ಏಜೆಂಟುಗಳಿಗೆ ಕೊಡುವ ಕಮಿಷನ್ನಲ್ಲಿ ಕಡಿತ, ಪಾಲಸೀದಾರರಿಗೆ ಕೊಡುವ ಬೋನಸ್ನಲ್ಲಿ ಕಡಿತ, ಈ ರೀತಿಯಾದಂತಹ ವಿಧಾನಗಳು ಜಾರಿಗೊಳಿಸಿದರೆ ತಾವು ವಿರೋಧಿಸುತ್ತಿರುವದಾಗಿ ಸ್ಪಷ್ಟ ಮಾಡಿದರು. ರಾಷ್ಟ್ರಾದ್ಯಂತ ಇಂದು ತಮ್ಮ ಪ್ರತಿನಿಧಿಗಳ ಸಂಘದ ವತಿಯಿಂದ ಧರಣಿ ಮತ್ತು ಪ್ರತಿಘಟನಾ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ತಿಳಿಸಿದರು.
ಇನ್ನು ಮುಂದಾದರೂ ಜೀವಿತ ವಿಮೆ ಸಮಸ್ತೆ ಏಜೆಂಟರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಪಾಲಸೀದಾರರ ಹಿತರಕ್ಷಣಗ ಉಪಯೋಗವಾಗುವ, ವಿಧಾನಗಳನ್ನು ಅನುಷ್ಠಾನಗೊಳಿಸಬೇಕೆಂದು ಮನವಿ ಮಾಡಿದರು.
ಕಾರ್ಯದರ್ಶಿ ಕೆ.ಎಂ.ಕೊಟ್ರೇಶ್ ಮಾತನಾಡುತ್ತಾ, ಎಲ್‌ಐಸಿ ಮ್ಯಾನೇಜ್ಮೆಂಟ್ ತಮ್ಮ ಡಿಮ್ಯಾಂಡುಗಳನ್ನು ಒಪ್ಪದಿದ್ದರೆ ಮುಂದಿನ ದಿನಗಳಲ್ಲಿ ಹೊಸ ವ್ಯಾಪಾರವನ್ನು ಕೈ ಬಿಟ್ಟು ಹೋರಾಟವನ್ನು ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿ ರಾಘವೇಂದ್ರ, ಗೌರಿಶಂಕರ್, ಶಶಿಧರ್ ಅಬ್ದುಲ್ ಮಜೀದ್, ಕಾಸಿಂಸಾಬ್, ಸುದರ್ಶನ್ ರೆಡ್ಡಿ, ಮಹದೇವ್ ಬಸವರಾಜ್, ಶಿವರಾಜ್, ರಮೇಶ್ ಜಂಗಡಿ ಜೊತೆಗೆ ಹಲವಾರು ಮಂದಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.