
ಅನಾಮಧೇಯ ವ್ಯಕ್ತಿ ಮೃತ : ವಾರಸುದಾರರ ಪತ್ತೆಗೆ ಮನವಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 26- ಹೊಸಪೇಟೆಯಿಂದ ಕೂಡ್ಲಿಗಿ ಕಡೆಗೆ ಹೋಗುವ ರಸ್ತೆಯ ಟೋನಲ್ ಬಳಿ ಇರುವ ದೊಡ್ಡ ಚರಂಡಿಯಲ್ಲಿ ಸುಮಾರು 55-60 ವರ್ಷದ ಅನಾಮಧೇಯ ಮೃತ ವ್ಯಕ್ತಿಯ ದೇಹ ಪತ್ತೆಯಾದ ಬಗ್ಗೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಯುಡಿಆರ್ ನಂ: 06/2024 ಕಲಂ:174ರ ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಅನಾಮಧೇಯ ವ್ಯಕ್ತಿಯು ಅಂಗಾತವಾಗಿ ಬಿದ್ದು ಮೃತಪಟ್ಟಿದ್ದು, ಮೃತನ ದೇಹವೆಲ್ಲಾ ಬಿಸಿಲಿಗೆ ಸುಟ್ಟು ಕರಕಲಾಗಿ ಗುರುತು ಸಿಗದಂತಾಗಿದೆ. ಕಾರಣ ಯಾವುದೋ ಅನಾಮಧೇಯ ವ್ಯಕ್ತಿ ಅಥವಾ ಭಿಕ್ಷುಕ ವ್ಯಕ್ತಿಯು ಯಾವುದೋ ಕಾರಣಕ್ಕೋ ಬಿದ್ದು ಮೃತಪಟ್ಟಿರಬಹುದು ಎಂದು ದೂರು ದಾಖಲಾಗಿದೆ.
ಚಹರೆ : ದುಂಡನೆ ಮುಖ ಹೊಂದಿದ್ದು, ಕಪ್ಪು ಮೈಬಣ್ಣ ಹೊಂದಿರುತ್ತಾನೆ. ಅಂದಾಜು 5.6 ಅಡಿ ಎತ್ತರ, ಕಪ್ಪು ಬಣ್ಣದ ಪ್ಯಾಂಟ್, ತುಂಬು ತೋಳಿನ ಬಿಳಿ ಬನಿಯನ್, ಕಪ್ಪು ಬಣ್ಣದ ಡ್ರಾಯರ್ ಧರಿಸಿರುತ್ತಾನೆ.
ಈ ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಹಾಗೂ ವಾರಸುದಾರರು ಪತ್ತೆಯಾದಲ್ಲಿ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಪಿಎಸ್ ದೂ.ಸಂ: 08394-244030, ಎಸ್‌ಡಿಪಿಒ ದೂ.ಸಂ: 08397-238477, ಡಿಪಿಒ ದೂ.ಸಂ: 08391-220333 ಗೆ ತಿಳಿಸಿ ಎಂದು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.