2

ಸೊಳ್ಳೆಗಳನ್ನು ನಿಯಂತ್ರಣ ಮಾಡುವ ಜವಬ್ದಾರಿ, ಜಾಗೃತಿ ಕಾರ್ಯಕ್ರಮ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 27- ರಾಷ್ಟ್ರೀಯ ರೋಗವಾಹಕ ಆಶ್ರಿಕ ರೋಗಗಳ ನಿಯಂತ್ರಣ ಎನ್ ವಿಬಿಡಿಸಿಡಿ ಕಾರ್ಯಕ್ರಮದಡಿಯಲ್ಲಿ ಆಶಾ ಕಾಯ೯ಕರ್ತೆಯರಿಗೆ ಎರಡು ದಿನದ ತರಬೇತಿ ಕಾರ್ಯಕ್ರಮವನ್ನು ಎಸ್ಎಲ್ ವಿ ಸಭಾಂಗಣ ಸಿರುಗುಪ್ಪದಲ್ಲಿ ಹಮ್ಮಿಕೊಳ್ಳಲಾಗಿತ್ತು.

ತರಭೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಅಬ್ದುಲ್ ಜಿಲ್ಲಾ ರೋಗವಾಹಕಗಳ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ಅಧಿಕಾರಿಗಳು ಬಳ್ಳಾರಿ, ಇವರ ಅಧ್ಯಕ್ಷತೆಯಲ್ಲಿ ಹಾಗೂ ಡಾ. ಈರಣ್ಣ ತಾಲೂಕು ಆರೋಗ್ಯಧಿಕಾರಿಗಳು ಸಿರುಗುಪ್ಪ ಇವರುಗಳ ಸಹ ಅಧ್ಯಕ್ಷತೆಯಲ್ಲಿ, ನಂದಾ ಕಡಿ ಜಿಲ್ಲಾ ಕೀಟಶಾಸ್ತ್ರಜ್ಞರು ಬಳ್ಳಾರಿ, ಪ್ರಹ್ಲಾದ ಬಿ ಪಿ ಎಂ ರವರು ತರಭೇತಿ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ಟಿ ಹೆಚ್ ಓ ಸಾರ್ ರವರು ಪ್ರಸ್ತಾವಿಕ ನುಡಿಗಳಲ್ಲಿ ಮಲೇರಿಯ, ಡೆಂಗೀ, ಚಿಕುನ್ ಗುನ್ಯಾ, ಮೆದುಳು ಜ್ವರ ಹಾಗೂ ಅನೆಕಾಲು ರೋಗಗಳು ವಿವಿಧ ಜಾತಿಯ ಸೊಳ್ಳೆಗಳು ರೋಗವಾಹಕವಾಗಿದ್ದು ಈ ಸೊಳ್ಳೆಗಳನ್ನು ನಿಯಂತ್ರಣ ಮಾಡುವ ಜವಬ್ದಾರಿ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿಳಿಸಿದರು.

ಡಿ ಎಂ ಓ ರವರು ಸಕ್ರಿಯ ಜ್ವರ ಸಮೀಕ್ಷೆ, ಮನೆ ಮನೆ ಭೇಟಿ ನೀಡುವುದು, ಮಲೇರಿಯ ಹರಡುವ ಬಗ್ಗೆ, ರೋಗ ಲಕ್ಷಣಗಳು, ಪತ್ತೆ ಹೆಚ್ಚುವ ವಿಧಾನಗಳು, ಆರ್. ಡಿ. ಟಿ ಕಿಟ್ ಬಗ್ಗೆ, ರಕ್ತ ಲೇಪನಗಳನ್ನು ಸಂಗ್ರಹಿಸುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಜಿಲ್ಲಾ ಕೀಟ ಶಾಸ್ತ್ರಜ್ಞರಾದ ನಂದಾಕಡಿ ರವರು ಕೀಟ ನಾಶಕ ಸಿಂಪಡಣಾ ಕಾರ್ಯ, ಕೀಟ ಸಂಪಡಣೆಗೆ ಉಪಯೋಗಿಸುತ್ತಿರುವ ಕೀಟ ನಾಶಕಗಳಾದ ಡಿ.ಡಿ,ಟಿ. ಮೆಲಾಥಿಯಾನ್, ಸಿಂಥೆಟಿಕ್ ಪೈರಾಥ್ರಾಯ್ಡ್ ಬಗ್ಗೆ ಮಾಹಿತಿ ನೀಡಿದರು.

ಕೀಟನಾಶಕ ಸಿಂಪಡಣೆ ಮಾಡಬೇಕಾದ ಸ್ಥಳಗಳು. ಸಿಂಪಡನೆ ಕಾರ್ಯದಲ್ಲಿ ಆಶಾ ಹಾಗೂ ಹಳ್ಳಿಯ ಮುಖಂಡರ ಪಾತ್ರ ಬಗ್ಗೆ ವಿವರವಾದ ಮಾಹಿತಿ ಯನ್ನು ನೀಡಿದರು.

ಸದರಿ ತರಭೇತಿ ಕಾರ್ಯಕ್ರಮದಲ್ಲಿ ಬಿ ಪಿ ಎಂ , ಎಸ್ ಆರ್ ಎಚ್ ಐ ಓ ಎಂ ಟಿ ಎಸ್ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿ ತರಬೇತಿಯನ್ನು ಸದುಪಯೋಗ ಪಡಿಸಿಕೊಂಡರು.

Leave a Reply

Your email address will not be published. Required fields are marked *

error: Content is protected !!