6

ರಸ್ತೆ ಅಪಘಾತ ಅಂಗವಿಕಲ ಸಗಣಿ ಬಸ್ಯಾ ಸಾವು

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 26- ಟಾಟಾಎಸ್ ವಾಹನ ಮೈಮೇಲೆ ಹರಿದು ಅಂಗವಿಕಲ ವ್ಯಕ್ತಿಯೊಬ್ಬ ಸಾವೀಗೀಡಾದ ಘಟನೆ ಹೊಳಲು ಸಮೀಪದ ಬೂದನೂರು ಬಳಿ ಸಂಭವಿಸಿದೆ.

ಎರಡು ಕಾಲು ಅಂಗ ವೈಕಲ್ಯಾದಿಂದ ಬಳಲುತ್ತಿದ್ದ ವ್ಯಕ್ತಿ ಸಗಣಿ ಬಸ್ಯಾ ಪ್ರತಿದಿನ ಬೇರಿಂಗ್ ತಳ್ಳುಗಾಡಿಯಲ್ಲಿ ಕುಳಿತುಕೊಂಡು ಕೈಯಿಂದ ತಳ್ಳಿಕೊಂಡು ಚಲಾಯಿಸುತ್ತಾ ರಸ್ತೆಯಲ್ಲಿನ ಸಗಣಿಯನ್ನು ಬಳಿದು ರೈತರಿಗೆ ಮಾರಾಟ ಮಾಡಿ ತನ್ನ ತುತ್ತಿನ ಚೀಲವನ್ನು ತುಂಬಿಸಿಕೊಳ್ಳುತ್ತಿದ್ದ ಸಗಣಿ ಬಸ್ಯಾ ಎಂಬ ವ್ಯಕ್ತಿ ರಸ್ತೆಯಲ್ಲಿ ತನ್ನ ಬೇರಿಂಗ್ ತಳ್ಳು ವಾಹನದಲ್ಲಿ ಸಂಬAಧಿಕರ ಮನೆಗೆ ಹೋಗುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಾವಿಗೆ ಈಡಾಗಿದ್ದಾನೆ.

ರಸ್ತೆಯಲ್ಲಿ ಹೋಗುವಾಗ ಟಾಟಾ ಏಸ್ ಗೂಡ್ಸ್ ಗಾಡಿಯು ಡಿಕ್ಕಿ ಹೊಡೆದಿದ್ದರಿಂದ ಸಗಣಿ ಬಸ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ತನ್ನ ತುತ್ತಿನ ಚೀಲ ತುಂಬಿಸಿಕೊಳ್ಳಲು ತಳ್ಳುವ ಗಾಡಿಯಲ್ಲಿಯೇ ರಸ್ತೆಯಲ್ಲಿ ಬಿದ್ದಿದ್ದ ಸಗಣಿಯನ್ನು ಬಾಚಿಕೊಂಡು ಒಂದಡೆ ಸಂಗ್ರಹಿಸಿ ಅದನ್ನು ಮಾರಿ ಜೀವನ ಸಾಗಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡು ಸಗಣಿ ಬಸ್ಯಾ ಎಂದೆ ಸುತ್ತಮುತ್ತಲ ಜನರಿಗೆ ಪರಿಚಯವಾಗಿದ್ದ. ಕಳೆದ ವರ್ಷ ಇದ್ದ ಒಬ್ಬ ತಾಯಿಯನ್ನು ಕಳೆದುಕೊಂಡಿದ್ದ ಸಗಣಿ ಬಸ್ಯಾ ಊಟಕ್ಕಾಗಿ ಸಮೀಪದ ಬೂದನೂರಿನ ಸಂಬAಧಿಕರ ಮನೆಗೆ ತೆರಳುತ್ತಿದ್ದ.

ಹಾನಗಲ್ಲ ತಾಲೂಕಿನ ವೀರಾಪುರ ಗ್ರಾಮದ ಟಾಟ ಎಸ್ ಗಾಡಿಯು ಎತ್ತುಗಳನ್ನು ಹೇರಿಕೊಂಡು ಹೂವಿನಹಡಗಲಿ ಹೋಗುತ್ತಿತ್ತು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಗಾಡಿಯು ರಸ್ತೆಬದಿಯಲ್ಲಿ ಪ್ರಯಾಣಿಸುತ್ತಿದ್ದ ಅಂಗವಿಕಲ ಬಸ್ಯಾನ ಮೈಮೇಲೆ ಹರಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಸಗಣಿ ಬಸ್ಯಾನನ್ನು ಹೊಳಲು ಪೊಲೀಸ್ ಉಪಠಾಣೆ ಎಎಸ್‌ಐ ಮಲ್ಲಿಕಾರ್ಜುನ ನಾಯ್ಕ್ ಹಾಗೂ ಸಿಬ್ಬಂದಿ ಚಿಕಿತ್ಸೆಗೆಂದು ಹೊಳಲು ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯದಲ್ಲಿಯೇ ಬಸವ ಅಸುನೀಗಿದ್ದಾನೆ. ಪೊಲೀಸ್ ಸಿಬ್ಬಂದಿ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.

ವಿಷಯ ತಿಳಿದ ಅಕ್ಕಪಕ್ಕದ ಊರಿನ ಜನರು ಮತ್ತು ಹೊಳಲು ಗ್ರಾಮದ ಜನರು ಸೆಗಣಿ ಬಸ್ಯನ ಸಾವಿನ ಸುದ್ದಿ ಕೇಳಿ ಮಮ್ಮಲ ಮರುಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!