
ಉದ್ಯೋಗ ಸೃಷ್ಟಿಸುವಲ್ಲಿ ಎಂಎಸ್‌ಎಂಇ ಪಾತ್ರ ಮಹತ್ತರವಾದದ್ದು : ಎಸ್.ಪನ್ನರಾಜ್
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 9- ಐಪಿಓ ಮೂಲಕ ಎಂಎಸ್‌ಎ0ಇಗಳು ಬಂಡವಾಳ ಸಂಗ್ರಹ ಮಾಡಲು ಮತ್ತು ಉದ್ಯಮಗಳ ವಿಸ್ತರಣೆ, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಬಂಡವಾಳ ಹೂಡಿಕೆ ಮಾಡಲು ಅವಕಾಶವಿದೆ ಎಂದು ಹಿರಿಯ ಚಾರ್ಟೆಡ್ ಅಕೌಂಟೆ0ಟ್, ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆ0ಟ್ಸ್ ಆಫ್ ಇಂಡಿಯಾದ ನಿಕಟಪೂರ್ವ ಅಧ್ಯಕ್ಷ ಸಿಎ ಪ್ರಭುದೇವ ಆರಾಧ್ಯ ಎಸ್. ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆAಟ್ಸ್ ಆಫ್ ಇಂಡಿಯಾದ ಬಳ್ಳಾರಿ ಘಟಕದ ಜಂಟಿ ಆಶ್ರಯದಲ್ಲಿ ಬಿಡಿಸಿಸಿಐನ ಸಭಾಂಗಣದಲ್ಲಿ ಶನಿವಾರ ನಡೆದ `ಎಂಎಸ್‌ಎ0ಇಗಳ ಮೂಲಕ ಎಸ್‌ಎಂಸಿ ಐಪಿಓ ಮೂಲಕ ಹೊಸ ಆರ್ಥಿಕ ಅವಕಾಶಗಳು’ ವಿಷಯ ಕುರಿತು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಎಂಎಸ್‌ಎ0ಇಗಳು ಐಪಿಓ ಮೂಲಕ ಅಸ್ತಿತ್ವದಲ್ಲಿರುವ ಉದ್ಯಮಗಳ ಸಾಲಗಳನ್ನು ಕೂಡ ಮರುಪಾವತಿ ಮಾಡಲು ಅವಕಾಶವಿರುತ್ತದೆ. ಎಂಎಸ್ಎ0ಇಗಳು ಐಪಿಓಗೆ ಪ್ರವೇಶ ಪಡೆಯುವುದು ಹೊಸ ಆರ್ಥಿಕ ಮೂಲಗಳನ್ನು ಸೃಷ್ಟಿಸಿಕೊಂಡ0ತೆ ಆಗಲಿದೆ ಎಂದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಉದ್ಯಮಿಗಳು ಮತ್ತು ಉದ್ಯಮದ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆಯಲ್ಲಿ ಉದ್ಯೋಗ ಸೃಷ್ಠಿ, ಕೌಶಲ್ಯ ತರಬೇತಿ, ರೈತರ ಮತ್ತು ಜನಸಾಮಾನ್ಯರ ಹಿತಾಸಕ್ತಿಯನ್ನು ಕಾಪಾಡಲು ಬದ್ಧವಾಗಿದೆ. ಉದ್ಯಮದ ಭಾಗವಾಗಿರುವ ಚಾರ್ಟೆಡ್ ಅಕೌಂಟೆAಟ್‌ಗಳ ಸಂಸ್ಥೆಗೆ ಸದಾ ಬೆಂಬಲ ನೀಡುತ್ತಿದೆ ಎಂದು ಹೇಳಿದ ಅವರು, ಎಂಎಸ್‌ಎ0ಇ ಮತ್ತು ಆರ್ಥಿಕ ಮೂಲಗಳ ಕುರಿತು ಪ್ರಾಸ್ತಾವಿಕ ಭಾಷಣ ಮಾಡಿದರು.
ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆ0ಟ್ಸ್ ಆಫ್ ಇಂಡಿಯಾದ ದಕ್ಷಿಣ ಭಾರತ ಘಟಕದ ನಿಕಟಪೂರ್ವ ಅಧ್ಯಕ್ಷ ಎಸ್. ಪನ್ನರಾಜ್ ಅವರು, ಅತಿಥಿಗಳಾಗಿ, ಕರ್ನಾಟಕದಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ಪ್ರಾರಂಭಕ್ಕೆ ೭೦ ಸ್ಥಳಗಳಲ್ಲಿ `ಕೈಗಾರಿಕಾ ಕ್ಲಸ್ಟರ್’ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ದೇಶದ ಒಟ್ಟು ಜಿಡಿಪಿಯಲ್ಲಿ ಶೇ. ೩೦ ರಷ್ಟು ಕೊಡುಗೆ ನೀಡುತ್ತಿರುವ ಎಂಎಸ್‌ಎ0ಇಗಳು ಕೃಷಿಯೇತರ ಉದ್ಯೋಗ ಸೃಷ್ಠಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿವೆ. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಹೆಚ್ಚಾಗಬೇಕು ಎಂದರು.
ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆAಟ್ಸ್ ಆಫ್ ಇಂಡಿಯಾದ ಬಳ್ಳಾರಿ ಘಟಕದ ಅಧ್ಯಕ್ಷ ಸಿಎ ವೆಂಕಟನಾರಾಯಣ. ಸಿ ಅವರು ಸ್ವಾಗತ ಕೋರಿದರು. ಸಿಎ ವಿಶ್ವನಾಥ ಆಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ಡಾ.ಮರ್ಚೇಡ್ ಮಲ್ಲಿಕಾರ್ಜುನ ಅವರು ವಂದನಾರ್ಪಣೆ ಸಲ್ಲಿಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಬಿ. ಮಹಾರುದ್ರಗೌಡ, ಉಪಾಧ್ಯಕ್ಷ ಎಸ್. ದೊಡ್ಡನಗೌಡ, ಜಂಟಿ ಕಾರ್ಯದರ್ಶಿ ವಿ. ರಾಮಚಂದ್ರ, ಕಾರ್ಯಕಾರಿ ಸಮಿತಿ ಸದಸ್ಯರಾದ ವಿ. ರವಿಕುಮಾರ್, ಟಿ. ಶ್ರೀನಿವಾಸರಾವ್, ಪಿ. ಗಿರೀಶ್, ವಿಶೇಷ ಆಹ್ವಾನಿತ ಸದಸ್ಯರಾದ ಕೆ.ಎಂ. ಶಿವಮೂರ್ತಿ, ಕೆ.ಎಂ. ಭೋಗೇಶ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.