
ವಿಧ್ಯಾರ್ಥಿಗಳು ವಿಧ್ಯಾಬ್ಯಾಸದ ಕಡೆ ಹೆಚ್ಚು ಗಮನ ನೀಡಿ : ಸಜಿದ್ ಪಾಷಾ
ಕರುನಾಡ ಬೆಳಗು ಸುದ್ದಿ
ತಾವರಗೇರಾ, 2- ಪ್ರತಿಯೊಬ್ಬ ಶಾಲಾ ಕಾಲೇಜ ವಿಧ್ಯಾರ್ಥಿಗಳು ಆರಂಭದ ದಿನಗಳಿಂದಲೂ ವಿಧ್ಯಾಬ್ಯಾಸದ ಕಡೆ ಹೆಚ್ಚು ಗಮನ ಹರಿಸುವದರ ಮೂಲಕ ಹಚ್ಚಿನ ಜ್ಞಾನ ಪಡೆಯಲು ಸಾಧ್ಯ ಎಂದು ಉರ್ದು ಶಾಲೆ ಉಪನ್ಯಾಸಕ ಸಜಿದ್ ಪಾಷಾ ಹೇಳಿದರು.
ಪಟ್ಟಣದ ಸರಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ನಡೆದ ಪ್ರಥಮ ವರ್ಷದ ವಿಧ್ಯರ್ಥಿಗಳ ಸ್ವಾಗತ ಮತ್ತು ನೂತನ ಎಸ್‌ಡಿಎಂಸಿ ಪದಾದಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಚಾರ್ಯ ಎಸ್.ಎಸ್.ಪೋರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಬದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಚೆನ್ನಪ್ಪ ನಾರಿನಾಳ, ವೆಂಕಟೇಶ ಬಿಂಗಿ, ಅಮರೇಶ ಗಾಂಜಿ, ಶ್ಯಾಮಿದಸಾಬ ಮರಕಟ್, ಭೀಮವ್ವ, ಕರಿಯಮ್ಮ, ಗೀತಾ ಮತ್ತು ಕಾಲೇಜ ಸಿಬ್ಬಂದಿ ಇದ್ದರು.
ಉಪನ್ಯಾಸಕ ಮಹಂತೇಶ ಗದಿಗೇರಿ ನಿರುಪಿಸಿ ವಂದಿಸಿದರು.