
ಕೃಷಿ ಕ್ಷೇತ್ರ ಪ್ರೋತ್ಸಾಹಕ್ಕಾಗಿ ಸರ್ಕಾರ ಮುಂದಾಗಬೇಕು : ಸಂಗನಕಲ್ಲು ಕೃಷ್ಣಪ್ಪ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 8- ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಪ್ರೋತ್ಸಾಹಿಸಲು, ಅನ್ನದಾದ ರನ್ನು ರಕ್ಷಿಸಲು, ಕೂಡಲೇ ಮುಂದಾಗ ಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಅಧ್ಯಕ್ಷರು, ಸಂಗನಕಲ್ಲು ಕೃಷ್ಣಪ್ಪ, ತಮ್ಮ ಸಂಘದ ಪದಾಧಿಕಾರಿಗಳೊಂದಿಗೆ ಬಳ್ಳಾರಿ ಅಪರ ಜಿಲ್ಲಾಧಿಕಾರಿಗಳಾದ, ಮಹಮ್ಮದ್ ಜುಬೇರ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೃಷ್ಣಪ್ಪ ಮಾತನಾಡುತ್ತಾ, ಸರ್ಕಾರಗಳು ರೈತರ ಬೆಳೆಗಳಿಗೆ ಪ್ರೋತ್ಸಾಹಕ ಧನವನ್ನು ಹೆಚ್ಚಿಸಲು ಮುಂದಾಗಬೇಕು ಎಂದರು. ಪ್ರತಿ ವರ್ಷ ರೈತರಿಗೆ ಬೇಸಾಯದ ಖರ್ಚುಗಳು ವಿಪರೀತವಾಗಿ ಬೆಳೆಯುತ್ತಿರುವುದರಿಂದ ಕೃಷಿ ಮಾಡಲು ಕಷ್ಟಕರವಾಗಿದೆ ಎಂದರು.
ಮೆಣಸಿನಕಾಯಿ ಬೆಳೆ 2020ರಲ್ಲಿ 21 ಸಾವಿರ ಬ್ಯಾಡಗಿಕಾಯಿ ಐವತ್ತು ಸಾವಿರ ಇತ್ತು 5531 ತಳಿ ಮೆಣಸಿನಕಾಯಿ 21,000 ಇವತ್ತಿನ ಬೆಲೆ 2024ರಲ್ಲಿ ಬ್ಯಾಡಗಿಕಾಯಿ 20 ರಿಂದ 23 ಸಾವಿರ, 55 311 ರಿಂದ 12,000 ಕ್ಕೆ ಇದೆ ಎಂದು ಮತ್ತು ತೊಗರಿ ಕ್ವಿಂಟಲ್ ಗೆ ಇವತ್ತಿನ ಸರ್ಕಾರ ದರ 12 ಸಾವಿರ ರೂಪಾಯಿಗಳು ಮಾಡಬೇಕು ಎಂದು ಕಡಲೆ ಕ್ವಿಂಟಲ್ ಗೆ ಸರ್ಕಾರಿ ದರ ರೂ.10,000 ಕ್ವಿಂಟಲ್ ಗೆ ನಿಗದಿ ಮಾಡಬೇಕೆಂದು ಒತ್ತಾಯ ಮಾಡಿದರು.ಮತ್ತು ಜೋಳ 4000 3000 ಸರ್ಕಾರದ ಪ್ರೋತ್ಸಾಹ ಧನ ಮಾಡಬೇಕೆಂದು ಮನು ಮಾಡಿದರು. ಬೇಸಾಯ ಕ್ಷೇತ್ರದಲ್ಲಿ ಕೂಲಿ ದರ ಹೆಚ್ಚುತ್ತಿರುವುದಾಗಿ ಬೇಸಾಯ ಮಾಡುವ ರೈತರು ನಷ್ಟದ ಪಾಲಾಗುತ್ತಿರುವುದಾಗಿ ಅಧಿಕಾರಿಗೆ ತಿಳಿಸಿದರು.
ರಾಜ್ಯಾದ್ಯಂತ ರೈತರು ಕಷ್ಟಪಟ್ಟಿ ಬೆಳೆಸುವ ಬೆಳೆಗಳಿಗೆ ನಾಯಿಯುತವಾದ ಬೆಲೆಯನ್ನು ನಿಗದಿ ಮಾಡಲು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ತಿಮ್ಮಪ್ಪ, ಖಜೇಂಜಿ ಮಾರೆಣ್ಣ, ಮುಖಂಡರು ರಾಧಾಕೃಷ್ಣ ವಿಶ್ವನಾಥ ಬೇವಿನ ಗಿಡದ ಯರಿಸ್ವಾಮಿ ಶ್ರೀರಾಮುಲು ಈರಣ್ಣ ಬಸವರಾಜ್ ಲಿಂಗನಗೌಡ ಹನುಮಂತ ಗಳ ಜೊತೆ ಹಲವಾರು ರೈತ ಮುಖಂಡರು ಪಾಲ್ಗೊಂಡಿದ್ದರು.