
ಎಪಿಎಂಸಿಗೆ ಬರುವ ರೈತರಿಗೆ ತೊಂದರೆ ಆಗದಂತೆ ಕ್ರಮವಹಿಸಿ ಸಂಗನಕಲ್ಲು ಕೃಷ್ಣಪ್ಪ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 21- ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜಿಲ್ಲೆಯ ಮತ್ತು ಗಡಿ ಭಾಗದ ಆಂಧ್ರದಿ0ದ ಬರುವ ರೈತರಿಗೆ ಯಾವುದೇ ಸಮಸ್ಯೆ ಆಗದೆ ಕ್ರಮವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗನಕಲ್ಲು ಕೃಷ್ಣಪ್ಪ ನೇತೃತ್ವದಲ್ಲಿ ಎಪಿಎಂಸಿ ಕಾರ್ಯದರ್ಶಿ ನಂಜು0ಡಸ್ವಾಮಿಯವರಿಗೆ ಮನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಕೃಷ್ಣಪ್ಪ ಮಾತನಾಡುತ್ತಾ ಎಪಿಎಂಸಿಯಲ್ಲಿ ರೈತರ ಬೆಳೆಸಿದ ಮಾಲು ಹೋಗುವುದಕ್ಕೆ ಪ್ರತಿ ರೈತರಿಗೆ ಗೇಟ್ನಲ್ಲಿ ಒಂದು ರಶೀದಿ ನೀಡಬೇಕು ಅದೇ ರೀತಿಯಾಗಿ ಜಿಲ್ಲೆಯಲ್ಲಿ ಈ ವ್ಯವಸ್ಥೆ ಇದೆ ಅದೇ ಮಾದರಿ ನಮ್ಮ ಬಳ್ಳಾರಿಯಲ್ಲಿ ಸಹ ರೈತರಿಗೆ ಅನ್ಯಾಯವಾಗದಂತೆ ಗೇಟ್ನಲ್ಲಿ ಒಂದು ರಸೀದಿ ನೀಡಬೇಕೆಂದು ಮನವಿ ಮಾಡಿದರು.
ಕೆಲವು ಅಂಗಡಿಗಳಲ್ಲಿ ಬಿಳಿಯ ಚೀಟಿಯ ಮೇಲೆ ವ್ಯವಹಾರ ಮಾಡುತ್ತಿದ್ದಾರೆ ರೈತರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ನೀಡುತ್ತಿರುವುದು ಇದು ಏನೆಂದು ರೈತರು ಪ್ರಶ್ನಿಸಿದರೆ ಆಮೇಲೆ ಕೊಡುತ್ತೀವಿ ಎಂದು ಹೇಳುವುದು ಹೊರಗಡೆ ವ್ಯಕ್ತಿಗಳು ಬಂದು ವ್ಯವಹಾರ ಮಾಡಿ ಕಮಿಷನ್ ಮೂಲಕ ಹಣ ಪಡೆಯುತ್ತಿದ್ದಾರೆ.
ಹಿಂದಿನ ವರ್ಷ ಡಿಸೆಂಬರ್‌ನಲ್ಲಿ ಇದೇ ರೀತಿ ಕಡಿಮೆಯಾಗಿದ್ದನ್ನು ಸಹ ಪರಿಶೀಲಿಸಬೇಕು ಈ ವಿಷಯ ಕುರಿತು ಕಾರ್ಯದರ್ಶಿಗಳು ಗಮನಹರಿಸಿ ರೈತರು ಎಪಿಎಂಸಿಯಲ್ಲಿ ಅನನ್ಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಪರಿಸ್ಕಾರಗಕ್ಕೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಅಧ್ಯಕ್ಷರು ರ‍್ರಿಸ್ವಾಮಿ, ಖಜಾಂಜಿ ಮಾರೆಣ್ಣ, ತಿಪ್ಪೇಸ್ವಾಮಿಗಳ ಜೊತಿಗೆ ಹಲವಾರು ಮಂದಿ ರೈತರು ಪಾಲ್ಗೊಂಡಿದ್ದರು.