1

ಕಲ್ಯಾಣ ಕರ್ನಾಟಕ ಕಪ್ ಕ್ರಿಕೆಟ್ ಟೂರ್ನಿಗೆ ಚಾಲನೆ
ಪ್ರತ್ಯೇಕ ಮೈದಾನದ ಕನಸು ಸಾಕಾರಗೊಳ್ಳಲಿ : ಸಂತೋಷ ದೇಶಪಾಂಡೆ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 26- ಜಿಲ್ಲಾ ಕ್ರೀಡಾಂಗಣದಲ್ಲಿ ವಿವಿಧ ಚಟುವಟಿಕೆಗಳು ನಡೆಯುವುದರಿಂದ ಕ್ರೀಡಾಪಟುಗಳಿಗೆ ಪ್ರತ್ಯೇಕ ಖಾಸಗಿ ಮೈದಾನದ ಅಗತ್ಯವಿದೆ. ನೂರಾರು ಸದಸ್ಯರನ್ನು ಹೊಂದಿರುವ ಕೊಪ್ಪಳ ಕರ್ನಾಟಕ ವಾರಿಯರ್ಸ್ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆಯಿ0ದ ಖಾಸಗಿ ಮೈದಾನ ನಿರ್ಮಿಸುವ ಕನಸು ನನಸಾಗಲಿ ಎಂದು ಕಲ್ಯಾಣ ಕರ್ನಾಟಕದ ಅಭಿವೃದ್ಧಿಪರ ಹೋರಾಟಗಾರ, ಹಿರಿಯ ಪತ್ರಕರ್ತ ಸಂತೋಷ್ ದೇಶಪಾಂಡೆ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಕೊಪ್ಪಳ ಕರ್ನಾಟಕ ವಾರಿಯರ್ಸ್ ಹಾಗೂ ಕ್ರೀಡಾ ಸಂಸ್ಥೆ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಕಪ್ ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ೩೭೧ಜೆ ಜಾರಿ ಮುನ್ನ ಈ ಭಾಗದ ಜನರಿಗೆ ಉದ್ಯೋಗಾವಕಾಶ, ಶಿಕ್ಷಣದ ಕೊರತೆ ಇತ್ತು. ಇದೀಗ ಆ ಸಮಸ್ಯೆ ಬಹುತೇಕ ಇತ್ಯರ್ಥವಾಗಿದ್ದರೂ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಬೇಕಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮುಖಂಡ ರಾಜೇಶ್ ಯಾವಗಲ್ ಮಾತನಾಡಿ, ಆಟದಲ್ಲಿ ಕ್ರೀಡಾಸ್ಫೂರ್ತಿ ಇರಲಿ. ಜೊತೆಗೆ ಆಟದಾಚೆಗೆ ಇರುವ ವೈಯಕ್ತಿಕ ಬದುಕನ್ನು ಕಡೆಗಣಿಸಬಾರದು ಎಂದು ಕರೆ ನೀಡಿದರು.

ಮಹೇಶ್ ಮಾತನಾಡಿ, ಕ್ರಿಕೆಟ್ ಕ್ಲಬ್ ಉಗಮಗೊಂಡು ದಶಕ ಕಳೆದಿರುವುದು ಸಂತಸ. ಸಾಮಾಜಿಕ ಕಾರ್ಯಗಳ ಜೊತೆಗೆ ಸಂಘವು ಕಲ್ಯಾಣ ಕಾರ್ಯಗಳಿಗೂ ಮುಂದಾಗಲಿ ಎಂದು ಆಶಿಸಿದರು.

ಅಮರೇಶ ಹುಬ್ಬಳ್ಳಿ, ಮಲ್ಲನಗೌಡರ, ಗಿರೀಶ್ ಮುಂಡಾದ, ಮಲ್ಲು, ಕನಕಪ್ಪ, ಬಸವರಾಜ ಕರುಗಲ್ ಮತ್ತಿತರರು ಮಾತನಾಡಿದರು. ಶ್ರೀನಿವಾಸ ಗೋಂಧಳಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಗಣ್ಯರನ್ನು ಸತ್ಕರಿಸಿ, ಗೌರವಿಸಲಾಯಿತು.

ಈರಣ್ಣ ಪಗಡಾಲ ನಿರೂಪಿಸಿದರು. ಗಂಗಾಧರ ನೇವಾರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!