8

ಮಹಿಳಾ ಸಬಲಿಕರಣಕ್ಕೆ ಆಧ್ಯತೆ : ಸತೀಶ.ಟಿ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 19- ಧರ್ಮಸ್ಥಳ ಸಂಸ್ಥೆಯಿಂದ ಅನೇಕ ಜನಪರ ಹಾಗೂ ಜನಮುಖಿ ಯೋಜನೆಗಳನ್ನು ಹಾಕಿಕೊಂಡಿದ್ದು ಅದರಲ್ಲಿ ಮಹಿಳಾ ಸಬಲಿಕರಣಕ್ಕೆ ಆಧ್ಯತೆ ನೀಡಲಾಗಿದೆ ಎಂದು ತಾಲೂಕಾ ಯೋಜನಾಧಿಕಾರಿ ಸತೀಶ .ಟಿ ಹೇಳಿದರು.

ತಾಲೂಕಿನ ಮುಧೋಳ ವಲಯದ ಸೋಂಪುರ, ಹೊಸೂರು ಕಾರ್ಯಕ್ಷೆತ್ರದ ಸರಸ್ವತಿ ಜ್ಞಾನ ವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡು ಸಮ್ರದ್ಧಿಗೊಳ್ಳಬೇಕಾದರೆ ಮೊದಲು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕಾಗಿದೆ ಎಂದರು.

ಗ್ರಾಮದ ಹಿರಿಯರು ಮತ್ತು ಗಣ್ಯರಾದ ಶರಣಪ್ಪ ಆರ್ಯರ ಉದ್ಘಾಟನೆ ಮಾಡಿ ಧರ್ಮಸ್ಥಳ ಯೋಜನೆಯ ಕಾರ್ಯಕ್ರಮಗಳ ಸದುಪಯೋಗ ಮಾಡಿಕೊಳ್ಳುವ ಬಗ್ಗೆ ತಿಳಿಸಿದರು.

ಯೋಜನೆಯ ಮಾತೃಶ್ರೀ ಅಮ್ಮನವರ ಜ್ಞಾನ ವಿಕಾಸ ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹಾಲು ಒಕ್ಕೂಟದ ಕಾರ್ಯದರ್ಶಿ ಲಕ್ಷ್ಮಣ ಗೌಡ ಹಿರೇಗೌಡ್ರು, ಒಕ್ಕೂಟದ ಅಧ್ಯಕ್ಷರಾದ ಕಳಕಮ್ಮ ಹಿರೇಗೌಡ್ರ, ಸಭೆಯ ಅಧ್ಯಕ್ಷರಾದ ಶಿವಪುತ್ರಮ್ಮ ಬೆರಗಿ, ಜ್ಞಾನವಿಕಾಸ ಸಮನ್ವಯಧಿಕಾರಿ ಗೀತಾ, ಮೇಲ್ವಿಚಾರಕ ರುದ್ರಪ್ಪ, ಸೇವಾಪ್ರತಿನಿಧಿ ರೇಣುಕಾ ಮತ್ತು ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!