
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಎಲ್ಲಾ ಅಧಿಕಾರಿಗಳು ಪಾಲ್ಗೊಳ್ಳಬೇಕು : ಸತ್ಯಮ್ಮ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 78- ನೇ ಸ್ವಾತಂತ್ರ್ಯ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ವಿವಿಧ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ ಕಡ್ಡಾಯವಾಗಿ ನಿಯಮ ಪಾಲಸಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಬೇಕು ಎಂದು ಗ್ರೇಡ್ 2 ತಹಶೀಲ್ದಾರ್ ಸತ್ಯಮ್ಮ ಹೇಳಿದರು.
ಪಟ್ಟಣದಲ್ಲಿ ಇದೇ ಆಗಸ್ಟ್ 15 ರಂದು ತಾಲೂಕ ಕ್ರೀಡಾಂಗಣದಲ್ಲಿ ಆಚರಿಸಲಾಗುವ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿವಿಧ ಇಲಾಖೆಗಳಿಗೆ, ಹಂಚಿಕೆ ಮಾಡಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಮೂಲಕ ವ್ಯವಸ್ಥಿತ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಮುಕ್ತಾಯದ ವರಗೆ ಅಧಿಕಾರಿಗಳು ಯಾರು ಇರುವದಿಲ್ಲ ಕಾರ್ಯಕ್ರಮ ಮುಗಿಯುವ ವರಗೆ ಯಾರು ಹೋಗಬಾರದು ಮತ್ತು ಪಟ್ಟಣ ಪಂಚಾಯತಿಯವರು ಸ್ವಚ್ಛತೆ ಮತ್ತು ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಸಾರಿಗೆ ಇಲಾಖೆಯವರು ಕ್ರೀಡಾಂಗಣದ ಬಳಿ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಮಾಡಬೇಕು.
ಕಿರಾಣಿ ವರ್ತಕರ ಸಂಘದವರು ಮಕ್ಕಳಿಗೆ ಬಾಳೆ ಹಣ್ಣು ಬಿಸ್ಕೇಟ್ ಹಂಚಿಕೆ ಮಾಡಬೇಕು, ಪ್ರಥಮ ದರ್ಜೆ ಕಾಲೇಜ ನವರು ಎನ್,ಸಿ,ಸಿ,ವಿದ್ಯಾರ್ಥಿಗಳನ್ನು ಕರೆ ತರಬೇಕು ಮೋರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಡ್ರಮ್ ಸೇಟ್ ತರಬೇಕು.ತಮ್ಮ ತಮ್ಮ ಕಛೇರಿಯ ಮೇಲೆ ಕಡ್ಡಾಯವಾಗಿ ವಿದ್ಯುತ್ ದ್ವೀಪಗಳ ಅಲಂಕಾರ ಕಡ್ಡಾಯವಾಗಿ ಮಾಡಬೇಕು ತೋಟಗಾರಿಕೆ ಇಲಾಖೆಯವರು ಧ್ವಜಾ ರೋಹಣದ ಕಟ್ಟೆಯ ಬಳಿ ಮತ್ತು ವೇದೀಕೆಗೆ ಅಲಂಕಾರಿಕ ಗಿಡಗಳನ್ನು ಇರಿಸ ಬೇಕು ಮತ್ತು ಪ್ರತಿ ಇಲಾಖೆಯವರು ತಮ್ಮ ಕಛೇರಿಯ ಮುಂಬಾಗದಲ್ಲಿ ಧ್ವಜಾ ರೋಹಣ ನೇರವೇರಿಸಬೇಕೆಂದರು.
ಸಭೆಯಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ರೇವಣಪ್ಪ ಹಿರೇಕುರಬರ, ಹನಮಂತಪ್ಪ ಭಜಂತ್ರಿ, ಬಸಲಿಂಗಪ್ಪ ಕೂತ್ತಲ್, ವಿವಿಧ ಇಲಾಖೆಯ ಅಧಿಕಾರಿಗಳಾದ ನಿಂಗನಗೌಡ ಪಾಟೀಲ್, ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಎಫ್.ಎಂ.ಳ್ಳಿ, ಸಾಮಾಜಿಕ ಅರಣ್ಯ ಇಲಾಖೆಯ ಬಸವರಾಜ ಗೋಗೇರಿ, ಸಂತೋಷ ಧರಣಾ, ಶರಣಪ್ಪ ಅಬ್ಬಿಗೇರಿ, ಅಂಗನವಾಡಿ ಮೇಲ್ವೀಚಾರಕಿ ಮಾಧವಿ ವೈಧ್ಯ, ದೈಹಿಕ ಶಿಕ್ಷಣಾಧಿಕಾರಿ ವಿ.ವಿ.ಅಂಗಡಿ, ರೇಷ್ಮೆ ಇಲಾಖೆಯ ಪ್ರೇಮಾ ಹೆಚ್.ಡಿ, ಕೃಷಿ ಇಲಾಖೆಯ ವಿನೋದ, ದೈಹಿಕ ಶಿಕ್ಷಕ ಹೆಚ್.ಎನ್.ಪೂಜಾರ, ಮಾಹಂತೇಶ ಗಾಣಿಗೇರ, ಪಶು ಇಲಾಖೆಯ ಎಸ್.ಎನ್.ಚಿತ್ರಗಾರ, ಶಿರಸ್ತದಾರ ದೇವರಡ್ಡಿ ಮೂಲಿಮನಿ, ಶರಣ ಬಸವರಾಜ ತಿಪ್ಪಾ, ಹನಮಗೌಡ ಪಾಟೀಲ್ ಸೇರಿದಂತೆ ಮತ್ತು ಇತರರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.