
ಸಂಡೂರು : ಚುನಾವಣಾ ಅಭ್ಯರ್ಥಿಗಳ ವೆಚ್ಚದ ಲೆಕ್ಕಪತ್ರಗಳ ಪರಿಶೀಲನೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 25- 95-ಸಂಡೂರು (ಪ.ಪಂ) ವಿಧಾನಸಭೆ ಉಪಚುನಾವಣೆ ಅಂಗವಾಗಿ ಚುನಾವಣೆಯಲ್ಲಿರುವ ಅಭ್ಯರ್ಥಿಗಳು ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರಗಳನ್ನು ಚುನಾವಣಾ ವೆಚ್ಚ ವೀಕ್ಷಕರ ಮುಂದೆ ಪರಿಶೀಲನೆಗೆ ಮೂರು ಬಾರಿ ಹಾಜರುಪಡಿಸಲು ದಿನ ಮತ್ತು ಸ್ಥಳ ನಿಗದಿಪಡಿಸಲಾಗಿದೆ.
ನಿಗದಿಪಡಿಸಿದ ದಿನ ಮತ್ತು ಸ್ಥಳ : ಮೊದಲನೇ ಬಾರಿಯ ಪರಿಶೀಲನೆಯು ನ.೦೩ ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೦೫ ಗಂಟೆಯವರೆಗೆ, ಎರಡನೇ ಬಾರಿಯ ಪರಿಶೀಲನೆಯು ನ.೦೭ ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೦೫ ಗಂಟೆಯವರೆಗೆ ಹಾಗೂ ಮೂರನೇ ಬಾರಿಯ ಪರಿಶೀಲನೆಯು ನ.೧೧ ರಂದು ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೦೫ ಗಂಟೆಯವರೆಗೆ ಸಂಡೂರು ತಾಲ್ಲೂಕು ಕಚೇರಿಯ ೯೫-ಸಂಡೂರು (ಪ.ಪಂ) ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಲೆಕ್ಕ ಪತ್ರಗಳ ಪರಿಶೀಲನೆ ನಡೆಸಲಾಗುವುದು.
ಅಭ್ಯರ್ಥಿಗಳು ತಮ್ಮ ಚುನಾವಣಾ ವೆಚ್ಚಗಳ ಲೆಕ್ಕಪತ್ರಗಳನ್ನು ಚುನಾವಣಾ ವೆಚ್ಚ ವೀಕ್ಷಕರ ಮುಂದೆ ಪರಿಶೀಲನೆಗೆ ಮೂರು ಬಾರಿ ಹಾಜರುಪಡಿಸಬೇಕು ಎಂದು ಸಂಡೂರು ವಿಧಾನಸಭೆ ಉಪಚುನಾವಣೆಯ ಚುನಾವಣಾಧಿಕಾರಿ ರಾಜೇಶ್.ಹೆಚ್.ಡಿ ಅವರು ತಿಳಿಸಿದ್ದಾರೆ.