ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಪದಾಧಿಕಾರಿಗಳ ಆಯ್ಕೆ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 30- ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿರುವ ಪ್ರತಿಷ್ಠಿತ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಬಳ್ಳಾರಿಯ ನೂತನ ಅಧ್ಯಕ್ಷರಾಗಿ ಕಲ್ಗುಡಿ ಮಂಜುನಾಥ್ ಮತ್ತು ಉಪಾಧ್ಯಕ್ಷರಾಗಿ ಟೆಂಗಿನಕಾಯಿ ಮಹಾಂತೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ನಿರ್ಗಮಿತ ಅಧ್ಯಕ್ಷರಾದ ಕೇಣಿ ಬಸಪ್ಪ ಅವರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿ, ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಶ್ರಮಿಸಲಿದ್ದಾರೆ. ಸರ್ವ ಸದಸ್ಯರು ಮತ್ತು ಪದಾಧಿಕಾರಿಗಳು ಸಂಸ್ಥೆಯ ಅಭಿವೃದ್ಧಿಗೆ ಎಂದಿನ0ತೆ ಸಹಕಾರ ನೀಡಲಿದ್ದಾರೆ ಎಂದರು.

೨೦೧೭ರಲ್ಲಿ ಬಳ್ಳಾರಿಯಲ್ಲಿ ಪ್ರಾರಂಭವಾಗಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆಯು ಸಿರುಗುಪ್ಪ, ಕಂಪ್ಲಿ ಮತ್ತು ಹೂವಿನಹಡಗಲಿಯಲ್ಲಿ ಶಾಖೆಗಳನ್ನು ತೆರೆದು ಕೇವಲ ೮ ವರ್ಷಗಳಲ್ಲೇ ದೊಡ್ಡಮಟ್ಟಕ್ಕೆ ಬೆಳೆದಿದೆ. ಅಲ್ಲದೇ, ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಲ್ಲಿಯೇ ಉತ್ತಮ ವ್ಯವಹಾರ ನಡೆಸಿದ ಕೀರ್ತಿಯನ್ನು ಪಡೆದು ಕರ್ನಾಟಕ ಸರ್ಕಾರ ನೀಡುವ `ಉತ್ತಮ ಸೌಹಾರ್ದ ಸಹಕಾರಿ’ ಗೌರವ ಪುರಸ್ಕಾರವನ್ನು ಸ್ವೀಕರಿಸಿದೆ. ಭವಿಷ್ಯದಲ್ಲಿ ಸಂಸ್ಥೆಯನ್ನು ದೊಡ್ಡಮಟ್ಟಕ್ಕೆ ಬೆಳೆಸಲು ಕ್ರಿಯಾ ಯೋಜನೆಯನ್ನು ರೂಪಿಸಲಾಗದೆ ಎಂದರು.

ನಿರ್ಗಮಿತ ಉಪಾಧ್ಯಕ್ಷ ಬೈಲುವದ್ದಿಗೇರಿ ರ‍್ರಿಸ್ವಾಮಿ ಅವರು, ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದಲ್ಲಿ ಒಟ್ಟು ೫೫೨೪ ಶೇರುದಾರರಿದ್ದು, ಸಂಸ್ಥೆಯು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ಸಂಸ್ಥೆಯಲ್ಲಿ ಲಾಕರ್ ಸೌಲಭ್ಯವಿದ್ದು, ಸಾಕಷ್ಟು ಅಭಿವೃದ್ಧಿಪರ ಯೋಜನೆಗಳು ಜಾರಿಯಲ್ಲಿವೆ ಎಂದರು.

ನೂತನ ಅಧ್ಯಕ್ಷ ಕಲ್ಗುಡಿ ಮಂಜುನಾಥ್ ಮತ್ತು ಉಪಾಧ್ಯಕ್ಷ ಟೆಂಗಿನಕಾಯಿ ಮಹಾಂತೇಶ್ ಅವರು, ಸಂಸ್ಥೆಯ ಎಲ್ಲಾ ನಿರ್ದೇಶಕರು, ಹಿತೈಷಿಗಳು – ಶ್ರೇಯೋಭಿಲಾಷಿಗಳು ಮತ್ತು ಶೇರುದಾರರ ಸಹಕಾರದಿಂದ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಶರಣ ಸಕ್ಕರೆ ಕರಡೀಶ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ನಿರ್ದೇಶಕರುಗಳಾದ ಹಾವಿನಹಾಳು ಬಸವರಾಜ್, ಜಿ.ವೀರೇಶ್, ಕೆ.ಎಂ.ಚನ್ನರಾಮೇಶ್ವರ, ಎಚ್.ಹೇಮಾದ್ರಿ, ಬಾಡದ ಪ್ರಕಾಶ್, ವಂಟೆ ನಾಗರಾಜ್, ಜಿ.ಜಡಿಮೂರ್ತಿ, ಶಿವಾ ರಮೇಶ್, ಹಾವಿನಹಾಳ್ ನೀಲಾವತಿ ಶರಣಬಸಪ್ಪ, ಜಿ.ಉಮಾದೇವಿ ಉಮಾಪತಿ, ಆರ್.ಮಲ್ಲಿಕಾರ್ಜುನಗೌಡ, ಗಾಳಿ ರಾಜಶೇಖರ, ಉಮೇಶ್ ಮಂಡವಾಡ, ಜಾನೆಕುಂಟೆ ತಿಪ್ಪೇರುದ್ರಪ್ಪ, ಶಿಡಗಿನಮೊಳ ಬಿ.ಬಸವರಾಜ್ ಸೇರಿ ಸಂಸ್ಥೆಯ ಹಿತೈಷಿಗಳು ಮತ್ತು ಶ್ರೇಯೋಭಿಲಾಷಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!