
ಎಸ್ಇಎಸ್ ಶಾಲಾ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 7- ನಗರದ ಎಸ್ಇಎಸ್ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳನ್ನು ರಾಜ್ಯಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿದ್ದಕ್ಕೆ ಸನ್ಮಾನಿಸಲಾಯಿತು.
ಮುಖ್ಯ ಗುರುಗಳು ಲಿಲ್ಲಿ ಥಾಮಸ್ ಅವರು ಮಾತನಾಡುತ್ತಾ ಉದ್ದ ಜಿಗಿತದಲ್ಲಿ ಪ್ರತಿಕ್ಷ ಸಾಕ್ಷಿ ಚದುರಂಗದಲ್ಲಿ ಮೈತ್ರಿ ಪ್ರೌಢ ಶಾಲೆಯ ವಿಭಾಗದಲ್ಲಿ ಜಾವೆಲಿನ್ ಥ್ರೋ ಹಾಗೂ ಎತ್ತರ ಜಿಗಿತ ನೀರುಪಾದಿ ಉದ್ದ ಜಿಗಿತ ಹಾಗೂ ಹರ್ಡಲ್ಸ್ನಲ್ಲಿ ಮಹೇಶ ೪೫ ಕೆಜಿ ಗುಂಡು ಎಸೆತ ವೈಹಾರಿಕ ಎತ್ತರ ಜಿಗಿತ ವಿಭಾಗದಲ್ಲಿ ಅಪೂರ್ವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು.
ಎಸ್ಇಎಸ್ ಕಾರ್ಯದರ್ಶಿ ಬಿಇ ಅವಿನಾಶ, ದೈಹಿಕ ಶಿಕ್ಷಣ ಶಿಕ್ಷಕ ವೈ.ಡಿ.ವೆಂಕಟೇಶ, ಖಾದರ್ ಬಾಷಾ, ಶಿಕ್ಷಕ ಸುಬ್ರಮಣ್ಯಂ ರಾಜು, ರಾಮಲಿಂಗಪ್ಪ, ಅನ್ನಪೂರ್ಣ, ಸುರೇಶ ರೆಡ್ಡಿ ಇದ್ದರು.