
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;
ಕೊಪ್ಪಳ ಖಾಸಗಿ ಶಾಲೆಗಳ ಒಕ್ಕೂಟ, ಕೊಪ್ಪಳ ತಾಲೂಕ
ಸೆ 14 ರಂದು ಶಿಕ್ಷಕರ ದಿನಾಚರಣೆ
ಶಾಹೀದ್ ತಹಶೀಲ್ದಾರ್ ಅನಧಿಕೃತ ಅಧ್ಯಕ್ಷ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,06- ಖಾಸಗಿ ಶಾಲೆಗಳ ಒಕ್ಕೂಟ ಕೊಪ್ಪಳ ತಾಲೂಕು KPSA (Koppal Private Schools Association, Koppal Taluka) ವತಿಯಿಂದ ಇದೇ ಸೆ 14 ರಂದು ನಗರದ ಮಧುಶ್ರೀ ಗಾರ್ಡನನಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಖಾಸಗಿ ಶಾಲೆಗಳ ಒಕ್ಕೂಟ ಮಾಜಿ ಅಧ್ಯಕ್ಷ ಶಿವಕುಮಾರ ಕುಕನೂರ ಹೇಳಿದರು.
ಅವರು ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಜರುಗಿದ ಸುದ್ದಿ ಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಮೊದಲಿಗೆ ಕುಸ್ಟಾ ಮತ್ತು ಕ್ಯಾಮ್ಸ್ ಎಂಬ ಎರಡು ಸಂಘಟನೆಗಳು ಬೇರೆ ಬೇರೆಯಾಗಿ ಶಿಕ್ಷಕರ ದಿನಾಚರಣೆ ಮಾಡುತ್ತಿದ್ದವು. ಆ ಸಂದರ್ಭದಲ್ಲಿ 2023, ಸೆಪ್ಟೆಂಬರ್ 17 ರಂದು ಅಂದರೆ ಕಳೆದ ವರ್ಷ ಅಮಂತ್ರಣ ಪತ್ರಿಕೆ ಮುದ್ರಣವಾಗಿತ್ತು, ನಂತರ ಸಭೆ ಕರೆದು ಮುಂದಿನ ಬಾರಿ ಅಂದರೆ 2024 ರಿಂದ ಎಲ್ಲರೂ ಸೇರಿ ಶಿಕ್ಷಕರ ದಿನಾಚರಣೆ ಮಾಡೋಣ ಎರಡು ಸಂಘಟನೆಗಳು ಬೇಡ, ಒಂದೇ ಸಂಘಟನೆಯೊಂದಿಗೆ ಕಾರ್ಯಕ್ರಮ ಮಾಡೋಣ ಎಂದು ಎಲ್ಲರ ಸಮ್ಮತದೊಂದಿಗೆ ನಿರ್ಧರಿಸಲಾಗಿತ್ತು.
ಅದರಂತೆ 7ನೇ ಅಕ್ಟೋಬರ್ 2023 ರಂದು ಕೊಪ್ಪಳ ತಾಲೂಕಿನ ಎಲ್ಲಾ ಶಾಲೆಗಳ ಮುಖ್ಯಸ್ಥರುಗಳು ಸೇರಿ ಭಾಗ್ಯನಗರದ ನ್ಯಾಷನಲ್ ಶಾಲೆಯಲ್ಲಿ ಸಭೆ ನಡೆಸಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಲ್ಲರ ಒಮ್ಮತದೊಂದಿಗೆ ಬಸವರಾಜ ತಳಕಲ್ ಇವರನ್ನು ತಾಲೂಕ ಅಧ್ಯಕ್ಷರನ್ನಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಿತೀಶ ಪುಲಸ್ಕರ್ ಇವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷ ಬಸವರಾಜ ತಳಕಲ್‌ರ ಅಧ್ಯಕ್ಷತೆಯಲ್ಲಿ ದಿ. 01-09-2024 ರಂದು ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಸಭೆ ಕರೆದು ಸಭೆಯಲ್ಲಿ ಎರಡೂ ಸಂಘಟನೆಗಳು ಸೇರಿ ಒಂದು ಸಂಘಟನೆಯೊಂದಿಗೆ ಕಾರ್ಯಕ್ರಮ ಮಾಡೋಣ ಎಂದು ಮಹಾಂತಯ್ಯನಮಠ ಶಾಲೆಯ ಮುಖ್ಯಸ್ಥರಾದ ವೀರೇಶ ಮಹಾಂತಯ್ಯನಮಠರು ಹೇಳಿದರು, ನಂತರ 3 ದಿನಗಳಾದರು ಮಹಾಂತಯ್ಯನಮಠರ ದೂರವಾಣಿ ಕರೆಯನ್ನು ಶಾಹೀದ್ ತಹಶೀಲ್ದಾರ್ ಸ್ವೀಕರಿಸದ ಕಾರಣ ನಾವು ಈ ವರ್ಷದ ಶಿಕ್ಷಕರ ದಿನಾಚರಣೆ ಸಿದ್ಧತೆ ನಡೆಸಿದ್ದೇವೆ.
KUSMA ಸಂಘಟನೆ ಹೆಸರು ಹೇಳಿಕೊಂಡು ಅಧ್ಯಕ್ಷನೆಂದು ಓಡಾಡುತ್ತಿರುವ ಶಾಹೀದ್ ತಹಶೀಲ್ದಾರ್‌ರವರು ಎಲ್ಲಾ ಶಾಲೆಗಳಿಗೆ ತೆರಳಿ ಹಣ ವಸೂಲಿ ಮಾಡಿ ಶಿಕ್ಷಕರ ದಿನಾಚರಣೆ ಮಾಡುತ್ತಿದ್ದಾರೆ. ಅನಧಿಕೃತ ವ್ಯಕ್ತಿಯಿಂದ ಈ ದಿನಾಚರಣೆ ನಡೆಯುತ್ತಿದೆ. ಕಾರಣ ಆಡಳಿತ ಮಂಡಳಿಯ ಸದಸ್ಯರುಗಳು ಖಾಸಗಿ ಶಾಲೆಗಳ ಸಂಘಟನೆ ಹೆಸರು ಹೇಳಿಕೊಂಡು ಹಣ ಕೇಳಿದರೆ ನೀಡಬಾರದೆಂದು ಮನವಿ ಮಾಡಿದರು.
ನಮ್ಮ KPSA ಯಿಂದ ನಡೆಯುವ ಶಿಕ್ಷಕರ ದಿನಾಚರಣೆಯನ್ನು ನಾವು ಯಾವ ಆಡಳಿತ ಮಂಡಳಿಯಿಂದಲೂ ದೇಣಿಗೆ, ವಂತಿಗೆ ಪಡೆಯದೇ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ KPSA ಪದಾಧಿಕಾರಿಗಳಾದ ಅಧ್ಯಕ್ಷರಾದ ಬಸವರಾಜ ತಳಕಲ್, ಪ್ರಧಾನ ಕಾರ್ಯದರ್ಶಿ ನಿತೀಶ್ ಪುಲಸ್ಕರ್, ಮಾಜಿ ಕಾರ್ಯದರ್ಶಿ ಆರ್. ಹೆಚ್. ಅತ್ತನೂರ, ಮಾಜಿ ಕಾರ್ಯದರ್ಶಿ ಹುಲಗಪ್ಪ ಕಟ್ಟಿಮನಿ, ಕೃಷ್ಣಾ ಕಬ್ಬೇರ , ಬಸವರಾಜ ಶಿರಗುಂಪಿ ಶೇಟ್ರ ಉಪಸ್ಥಿತರಿದ್ದರು.