
ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು : ಶಂಕ್ರಪ್ಪ ತೊದ್ಲ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 18- ವಿದ್ಯಾರ್ಥಿಗಳು ಜೀವನದಲ್ಲಿ ಕ್ರೀಡೆಯಲ್ಲಿ ತೊಡಗುವ ಮನೋಭಾವ ಬೆಳೆಸಿಕೊಳ್ಳಲು ಮುಂದಾಗಬೇಕು ಎಂದು ಎಸ್‌ಡಿಎಂಸಿ ಅಧ್ಯಕ್ಷ ಶಂಕ್ರಪ್ಪ ತೊದ್ಲ ಹೇಳಿದರು.
ಸಮೀಪದ ಮಂಗಳೂರು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದು, ಯಲಬುರ್ಗಾ-ಕುಕನೂರು ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಭಾಗವಹಿಸಿ ಬುಧವಾರ ಮಾತನಾಡಿದರು.
ಮಕ್ಕಳು ಪಾಠದ ಮೂಲಕ ಆಟೋಟದಲ್ಲಿ ತೊಡಗುವ ಮೂಲಕ ಕ್ರೀಡಾಭಿಮಾನಿಗಳಿಗೆ ಪ್ರೋತ್ಸಾಹಿಸುವ ಕೆಲಸವಾಗಬೇಕು.ಗ್ರಾಮೀಣ ಭಾಗದಲ್ಲಿ ಕ್ರೀಡಾಪಟುಗಳಿಗೆ ಪಾಲಕರು, ಶಿಕ್ಷಕರು ಸಹಕರಿಸಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಕ್ರಪ್ಪ ಚಿನ್ನೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಪಿಡಿಒ ನೀಲಂ ಚಳಗೇರಿ, ಎನ್‌ಜಿಒ ಉಪಾಧ್ಯಕ್ಷ ಸುರೇಶ ಮಡಿವಾಳರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅನ್ನಪೂರ್ಣ ಸುರೇಶ ಮ್ಯಾಗಳೇಶಿ, ಟಿಪಿಒ ಈರಣ್ಣ ಅಂಗಡಿ, ನಿವೃತ್ತ ಪ್ರಾಚಾರ್ಯ ಮಂಗಳೇಶಪ್ಪ ಜನಾದ್ರಿ, ಪ್ರಮುಖರಾದ ಹನುಮಂತಪ್ಪ ಮುತ್ತಾಳ್,ಬಸವರಾಜ ಮೇಟಿ, ಸೋಮಪ್ಪ ನಾಯಕ್, ಶರಣಪ್ಪ ವೀರಾಪೂರ,ಬಸವರಾಜ ಬೆಲ್ಲದ್,ಯಮನೂರಪ್ಪ ಭಜಂತ್ರಿ, ರಾಘವೇಂದ್ರ ಹಳ್ಳಿ,ಶರಣಪ್ಪ ಎಮ್ಮಿ,ಯಂಕಣ್ಣ ಕವಳಕೇರಿ, ಶಕುಂತಲಾ ಮಾ.ಪಾಟೀಲ್, ರವಿ ಮಳಗಿ, ಮಾರುತಿ ಹಾದಿಮನಿ, ಬಸವರಾಜ ಸಾರಂಗಮಠ ಸೇರಿದಂತೆ ಇನ್ನಿತರರು ಇದ್ದರು.