
ಸರ್ವ ಧರ್ಮಿಯರಲ್ಲಿ ಸಮನ್ವತೆಯನ್ನು ಕಾಯ್ದುಕೊಳ್ಳಿ : ಶರಣಬಸವ ಸ್ವಾಮೀಜಿ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 30- ಪ್ರತಿಯೊಂದು ಧರ್ಮವನ್ನು ಗೌರವಿಸುವುದರಿಂದ ಮತ್ತು ಅಭಿಮಾನ ತೋರುವುದರಿಂದ ಸರ್ವಧರ್ಮೀಯರಲ್ಲಿ ಸಮನ್ವತೆಯನ್ನು ಕಾಯ್ದುಕೊಳ್ಳಲು ಸಾದ್ಯವಾಗುತ್ತದೆ ಎಂದು ಗಜೇಂದ್ರಗಡದ ತಳ್ಳಿಹಾಳ್ ಕೋಡಿ ಸಂಸ್ಥಾನ ಮಠಾಧಿಪತಿ ಶರಣಬಸವ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಸಿರುಗುಪ್ಪ ನಗರದ ಗುರು ಭವನದಲ್ಲಿ ಪುಟ್ಟರಾಜ ಸಾಂಸ್ಕೃತಿಕ ಕಲಾ ಬಳಗದವರಿಂದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಲೋತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗೆ ಸಾಧಕ ಸಾಧಕೀಯರಿಗೆ ಗೌರವಿಸಿ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಸರ್ವರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಗುರುಬಸವ ಮಠಾಧಿಪತಿ ಬಸವಭೂಷಣ ಸ್ವಾಮಿಜಿ ರೇವಣಸಿದ್ದಯ್ಯ ತಾತ ಮೌಲಾಲಿ ಆಶ್ರಮದ ಸೈಯದ್ ಶಾ ರಫೀಯುದ್ದೀನ್ ಖಾದ್ರಿ ಗೋನವರ್ ಗಫೂರ್ ತಾತ ಸರ್ವಧರ್ಮ ಸೇವಾ ಆಶ್ರಮ ಮಸ್ತಾನ್ ವಲಿ ಖಾದ್ರಿ ತಾತ ಪುಟ್ಟರಾಜ ಸಾಂಸ್ಕೃತಿಕ ಕಲಾ ಬಳಗದ ಅಧ್ಯಕ್ಷ ಮಲ್ಕಾಪುರ ಮಹಾದೇವಯ್ಯ ಸ್ವಾಮಿ ಗವಾಯಿಗಳು ಇದ್ದರು.