
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಅಕ್ಷತಾ ಸಂಸ್ಥೆಯ ಹೆಮ್ಮೆ : ಶರಣಯ್ಯ ಇಟಗಿ
ಕರುನಾಡ ಬೆಳಗು ಸುದ್ದಿ
ಕುಕನೂರು, 23- ಗ್ರಾಮೀಣ ಪ್ರದೇಶಗಳಲ್ಲಿ ಅಕ್ಷತಾ ಭೀಮಪ್ಪ ಗೊಲ್ಲರ ಅಂತಹ ವಿದ್ಯಾರ್ಥಿಗಳು ಹಲವಾರು ಸಂಖ್ಯೆಯಲ್ಲಿ ಇದ್ದರೆ. ಅವರಿಗೆ ಉಪನ್ಯಾಸಕರು ಸಕಾಲದಲ್ಲಿ ಸರಿಯಾದ ಮಾರ್ಗದರ್ಶನ ನೀಡಿಬೇಕು ಮತ್ತು ವಿದ್ಯಾರ್ಥಿಗಳ ಉಪನ್ಯಾಸಕರ ಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಂಡು ಮೇಲ್ಮಟ್ಟಕ್ಕೆರಬೇಕೆಂದು ಅಂತರರಾಷ್ಟ್ರೀಯ ಜಾನಪಕಲಾವಿದ ಗೊರ್ಲೆಕೊಪ್ಪದ ಶರಣಯ್ಯ ನೂರಂದಯ್ಯ ಇಟಗಿ ಹೇಳಿದರು.
ಕರ್ನಾಟಕ ರಾಜ್ಯಸಹಕಾರ ಮಹಾಮಂಡಳ ನಿ, ಕೊಪ್ಪಳಜಿಲ್ಲಾ ಸಹಕಾರ ಯೂನಿಯನ್ ನಿ, ಸಹಕಾರ ಇಲಾಖೆ ಕೊಪ್ಪಳ ಹಾಗೂ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಕೊಪ್ಪಳ ಇವುಗಳ ಸಹಯೋಗದಲ್ಲಿ ನಡೆದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಚರ್ಚಾ ಸ್ಪರ್ಧೆಯ ಯುವ ನಾಯಕತ್ವದಿಂದ ಮಾತ್ರವೇ ಸಹಕಾರಿ ವ್ಯವಸ್ಥೆ ಬಲಾಢ್ಯ ಗೊಳ್ಳಬಲ್ಲದು ಎನ್ನುವ ವಿಷಯದ ಪರವಾಗಿ ವಿಷಯವನ್ನು ಮಂಡಿಸಿದ ಅಕ್ಷತಾ ಕೊಪ್ಪಳ ಜಿಲ್ಲೆಗೆ ಪ್ರಥಮಸ್ಥಾನ ಪಡೆದಿದ್ದಳು.
ಈ ವಿದ್ಯಾರ್ಥಿನಿಗೆ ತಳಕಲ್ಲ ಸರಕಾರಿ ಪದವಿ ಪೂರ್ವ ಕಾಲೇಜಿನ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಅಭಿನಂದನಾ ನುಡಿಗಳನ್ನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಫಕೀರಪ್ಪ ವಜ್ರಬಂಡಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಸರಕಾರಿ ಶಾಲಾ ಕಾಲೇಜುಗಳಲ್ಲಿಯೂ ಪ್ರತಿಭಾವಂತ ಮಕ್ಕಳು ಪ್ರವೇಶಪಡೆದಿರುತ್ತಾರೆ. ಅವರು ಆರ್ಥಿಕವಾಗಿ ಬಡವರಾಗಿರಬಹುದು ಆದರೆ ಜ್ಞಾನ ಮತ್ತು ಸಂಸ್ಕೃತಿಗಳಿ0ದ ಶ್ರೀಮಂತರು. ಎಲ್ಲಾ ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಬರಲು ತಿಳಿಹೇಳಿದರು.
ಬೌದ್ಧಿಕ ಸಂಪತ್ತು ಭೌದ್ಧಿಕ ಸಂಪತ್ತಿಗಿAತ ಶ್ರೇಷ್ಠ ಹಾಗೂ ಶಾಶ್ವತವಾದದ್ದು. ಅಂತಹ ಸಂಪತ್ತಿನ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಕರೆನಿಡಿದರು.
ಪ್ರಾರಂಭದಲ್ಲಿ ಶ್ರೀಮತಿ ಫಾತಿಮಾ ಮುಯೀಝ ಸ್ವಾಗತಿಸಿದರು. ಸಾಂಸ್ಕೃತಿಕ ವೇದಿಕೆಯ ಸಂಚಾಲಕರಾದ ಶ್ರೀಮತಿ ಶಿವಲೀಲಾ ಹಿರೇಮಠ ಕಾರ್ಯಕ್ರಮ ಸಂಯೋಜನೆ ಮಾಡಿ ನಿರೂಪಿಸಿದರು. ಉಪನ್ಯಾಸಕರಾದ ಮುನಾಫ್ ಪಾಷ, ಮಂಜುನಾಥ ತಟ್ಟಿ, ಈರಣ್ಣ ಹುರಕಡ್ಲಿ ಹಾಗೂ ಅಪಾರ ವಿದ್ಯಾರ್ಥಿಗಳು ಹಾಜರಿದ್ದು ಸಂತೋಷ ವ್ಯಕ್ತಪಡಿಸಿದರು.