
ಸಣ್ಣ ದುರ್ಗಮ್ಮ ದೇವಸ್ಥಾನದಲ್ಲಿ ಶರನ್ನವರಾತ್ರಿ ವೈಭವದ ಉತ್ಸವಗಳು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 2- ನಗರದ ಪಟೇಲ್ ನಗರ್ ಸಮೀಪ ಇರುವ ದುರ್ಗಾ ಕಾಲೋನಿಯಲ್ಲಿ, ನೆಲೆಸಿದ ಶ್ರೀ ಸಣ್ಣದುರ್ಗಮ್ಮ ದೇವಸ್ಥಾನದಲ್ಲಿ, ಇದೇ ತಿಂಗಳು ೩ನೇ ತಾರೀಕು, ಗುರುವಾರದಿಂದ, (ಅಶ್ವಜ, ಪಾಡ್ಯಮಿ, ಇಂದ ದಶಮಿಯವರೆಗೆ), ೧೦ ದಿನಗಳ ಕಾಲ ದಿ. ೧೨ ರವರೆಗೆ ೯ನೇ ವರ್ಷದ ದಸರಾ ಶರನ್ನ ನವರಾತ್ರಿ ವೈಭವದ ಉತ್ಸವಗಳು, ಅದ್ದೂರಿಯಿಂದ ನಡೆಯಲಿವೆ ಎಂದು ಶ್ರೀ ದುರ್ಗಾದೇವಿ ಟ್ರಸ್ಟ್ ಅಧ್ಯಕ್ಷ ಮೀನಳ್ಳಿ ತಾಯಣ್ಣ ಗೌರವಾಧ್ಯಕ್ಷ ಸಿ ಎಸ್ ಸತ್ಯನಾರಾಯಣ ತಿಳಿಸಿದರು.
ದೇವಸ್ಥಾನ ಆವರಣದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ದಸರಾ ವೈಭವ ಆಚರಣೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ದಸರಾ ಉತ್ಸವಗಳಲ್ಲಿ ಮೊದಲನೆಯ ದಿನ ಅಮ್ಮನವರಿಗೆ ಶ್ರೀ ಬಾಲ ತ್ರಿಪುರ ಸುಂದರಿ ದೇವಿ ಅಲಂಕಾರಗಳಿAದ ಮೊದಲಾದಗಿ, ಪ್ರತಿದಿನ ವಿಶೇಷ ಅಲಂಕಾರಗಳು ನಡೆಯುತ್ತವೆ ಎಂದು ತಿಳಿಸಿದರು.
ಉತ್ಸವದ ಮೊದಲನೇ ದಿನ ಈ ಬಾರಿ ೧೦೦೮, ಮಂದಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಇರುತ್ತದೆಯೆಂದು ವಿಶೇಷವಾಗಿ ಇದೇ ತಿಂಗಳು ೭ನೇ ತಾರೀಕು ಸೋಮವಾರ ಸಂಜೆ ೪ಕ್ಕೆ ಶ್ರೀಶೈಲ ದೇವಸ್ಥಾನದ ಅರ್ಚಕರ ಬೃಂದದಿAದ ಲೋಕಕಲ್ಯಾಣಾರ್ಥವಾಗಿ ಶ್ರೀ ಶ್ರೀಶೈಲ ಭ್ರಮರಾಂಬಿಕ ಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣೋತ್ಸವವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಇದೇ ತಿಂಗಳು ೧೦ನೇ ತಾರೀಕು ಗುರುವಾರ ದುರ್ಗಾಷ್ಟಮಿ ಅಂಗವಾಗಿ ಬೆಳಿಗ್ಗೆ ೮:೦೦ಗೆ ದೇವಸ್ಥಾನದಲ್ಲಿ ವಿಪ್ರರಿಂದ ಮಹಾ ಚಂಡಿ ಯಾಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೋಮದ ಪೂರ್ಣಾಹುತಿ ನಂತರ ಮಧ್ಯಾಹ್ನ ೧೨:೩೦ ಗಂಟೆಗೆ ೫೦೦೦ಕ್ಕೂ ಹೆಚ್ಚು ಅನ್ನದಾನ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ತಿಳಿಸಿದರು.
ಈ ಹತ್ತು ದಿನ ದಸರಾ ಉತ್ಸವಗಳಲ್ಲಿ ಭಕ್ತಾದಿಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಮ್ಮನವರ ಕೃಪಗೆ ಪಾತ್ರರಾಗಬೇಕೆಂದು ಕೇಳಿದರು.
ದಸರಾ ಉತ್ಸವಗಳ ಅಂಗವಾಗಿ ಆಧ್ಯಾತ್ಮಿಕ, ಸಾಂಸ್ಕೃತಿಕಗಳ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ, ದೇವಸ್ಥಾನದ ಪ್ರಧಾನ ಅರ್ಚಕರು ಸಂತೋಷ ಸ್ವಾಮಿ, ಕಮಿಟಿ ಸದಸ್ಯರು ರಾಧಮ್ಮ, ನಗರ ಪಾಲಿಕೆ ಸದಸ್ಯ ಕೃಷ್ಣ, ಹನುಮಂತಪ್ಪ, ತಿಪ್ಪಣ್ಣ, ರ‍್ರಿಸ್ವಾಮಿ, ರಾಜು, ಬಾಬು ಉಪಸ್ಥಿತರಿದ್ದರು.