2c136fae-be38-4577-97e1-318669006cc9

ನಾಳೆ ವಿಹೆಚ್‌ಪಿಯಿಂದ ಷಷ್ಟಿಪೂರ್ತಿ ಸಮಾರಂಭ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 4- ರಾಷ್ಟ್ರರಕ್ಷಣೆಗಾಗಿ ಸತ್ಸಂಗ, ಭಜನೆ ಮುಂತಾದ ಕಾರ್ಯಕ್ರಮಗಳೊಂದಿಗೆ ಸರ್ವ ಹಿಂದು ಒಂದುಗೂಡಿಸುವ ನಿಟ್ಟಿನಲ್ಲಿ ಪ್ರಾರಂಭವಾಗಿರುವ ವಿಶ್ವ ಹಿಂದೂ ಪರಿಷತ್ ಸಂಘಟನೆಗೆ ಈಗ ೬೦ ವರ್ಷ ಪೂರ್ಣಗೊಳ್ಳುತ್ತಿದೆ. ನಗರದಲ್ಲಿ ಸೆ.೫ ರಂದು ಸಂಜೆ ಶ್ರೀಕೃಷ್ಣನ ಆರಾಧನೆ ಮತ್ತು ವಿಶೇಷ ಬೌದ್ಧಿಕ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ವಿನಯ ಪಾಟೀಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ೬೦ ವರ್ಷ ಪೂರೈಸಿರುವ ನಿಮಿತ್ಯ ವಿಹೆಚ್‌ಪಿ ರಾಜ್ಯದ ೧೫೩ ತಾಲೂಕುಗಳಲ್ಲಿ ವಿವಿಧ ಸಾಮಾಜಿಕ, ಸೇವಾ, ಧಾರ್ಮಿಕಗಳನ್ನು ಹಮ್ಮಿಕೊಂಡಿದೆ.

ಜಿಲ್ಲೆಯ ೭ ಪ್ರಕಂಡಗಳು ಅಂದರೆ ಕೊಪ್ಪಳ, ಯಲಬುರ್ಗಾ, ಕನಕಗಿರಿ, ಕುಕನೂರು, ಕಾರಟಗಿ ಮತ್ತು ಗಂಗಾವತಿಯಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸೆ.೫ ರಂದು ಸಂಜೆ ೫.೦೦ಗಂಟೆಗೆ ಗಂಗಾವತಿ ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಶ್ರೀಕೃಷ್ಣನ ಆರಾಧನೆಯನ್ನು ಸರ್ವ ಹಿಂದೂ ಬಾಂಧವರಿAದ ನಡೆಸಲಾಗುತ್ತಿದೆ.
ಈ ಸಮಯದಲ್ಲಿ ವಿಹೆಚ್‌ಪಿ ಪ್ರಾಂತ ಕಾರ್ಯದರ್ಶಿ ವಿನಾಯಕ ತಲಿಗೇರಿ ಅವರು ವಿಶೇಷ ಭಾಷಣ ಮಾಡಲಿದ್ದಾರೆ. ಹಿಂದು ಧರ್ಮದ ಸಕಲ ಸಮಾಜದ ಬಾಂಧವರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ಆರ್‌ಎಸ್‌ಎಸ್ ನಗರ ಸೇವಾ ಪ್ರಮುಖ ರವೀಂದ್ರ ಹೂಲಗೇರಿ ಮಾತನಾಡಿ, ಹಿಂದೂ ಧರ್ಮವನ್ನು ಜಾಗೃತಿಗೊಳಿಸಿ ಜಾತಿ, ಬೇಧಗಳನ್ನು ಹೊಡೆದು ಹಾಕಿ ದೇಶ, ಧರ್ಮ, ಸನಾತನ ಸಂಸ್ಕೃತಿಯ ರಕ್ಷಣೆ ಉದ್ದೇಶವನ್ನಿಟ್ಟುಕೊಂಡು ವಿಶ್ವ ಹಿಂದೂ ಪರಿಷತ್ ಸಂಘಟನೆ ಪ್ರಾರಂಭವಾಗಿದೆ.

ಸAಘಟನೆ ಪ್ರಾರಂಭವಾಗಿ ೬೦ ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಂದು ತಾಲೂಕಿನಲ್ಲಿ ಧರ್ಮ ಜಾಗೃತಿ, ಸೇವಾ ಕಾರ್ಯ, ದೇವಸ್ಥಾನ ಸ್ವಚ್ಚತೆ, ಅಸ್ಪಶೃತೆ ಆಚರಣೆ ನಿವಾರಣೆ ಸೇರಿದಂತೆ ಹತ್ತಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ವಿಹೆಚ್‌ಪಿ ಪ್ರಾರಂಭವಾಗಿದ್ದು, ಈ ನಿಮಿತ್ಯ ಶ್ರೀಕೃಷ್ಣ ಜನ್ಮಾಷ್ಟಮಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ವಿಹೆಚ್‌ಪಿ ಜಿಲ್ಲಾ ಕೋಶಾಧ್ಯಕ್ಷ ವಿಠ್ಠಲ್ ನಾವಡೆ ಮಾತನಾಡಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಪರ್ವತದ ಅಭಿವೃದ್ಧಿಗೆ ಸರಕಾರ ವಿಶೇಷ ಯೋಜನೆ ರೂಪಿಸುವಂತೆ ನಾವು ಪ್ರತಿ ವರ್ಷ ನಡೆಯುವ ಹನುಮಮಾಲೆಯಲ್ಲಿ ಒತ್ತಾಯಿಸುತ್ತಾ ಬಂದಿದ್ದೇವೆ. ನಗರದ ರಸ್ತೆಯಲ್ಲಿ ಹಾಕಿರುವ ವಿದ್ಯುತ್ ಕಂಬಗಳನ್ನು ತೆರವು ಮಾಡುವ ವಿಚಾರದಲ್ಲಿ ತಹಶೀಲ್ದಾರರು ತಪ್ಪಿನ ಅರಿವಾಗಿ ದಿಡೀರ್ ಆದೇಶವನ್ನು ವಾಪಸ್ ಪಡೆದರು.

ಹಿಂದೂ ಧರ್ಮಕ್ಕೆ ಅನ್ಯಾಯವಾದರೆ ಪ್ರತಿಭಟನೆ ವಿಹೆಚ್‌ಪಿ ನಡೆಸುತ್ತದೆ ಎಂದರು.

ಸಮಾಜ ಜಾಗೃತಿ ಮೂಡಿಸುವ ಕೆಲಸ ವಿಹೆಚ್‌ಪಿ ಮಾಡುತ್ತಿದೆ ಎಂದರು.

ವಿಹೆಚ್‌ಪಿ ಜಿಲ್ಲಾ ಮಾಧ್ಯಮ ಪ್ರತಿನಿಧಿ ಶಿವನಗೌಡ, ಮಾಜಿ ತಾಲೂಕು ಅಧ್ಯಕ್ಷ ಡಾ.ವಿಶ್ವನಾಥ ಕುಷ್ಟಗಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!