
ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ : ಸಂಪೂರ್ಣ ಮಹಿಳಾ ಶಾಖೆ ಪ್ರಕ್ರಿಯೆಗೆ ಪ್ರಾರಂಭಕ್ಕೆ ಚಾಲನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 11- ನಗರದ ಪ್ರತಿಷ್ಠಿತ ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಸಂಪೂರ್ಣ ಮಹಿಳಾ ಶಾಖೆ ಪ್ರಕ್ರಿಯೆ ಪ್ರಾರಂಭಕ್ಕೆ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಬುಧವಾರದಂದು ಪುಟ್ಟ ಬಾಲಕಿಯಿಂದ ಚಾಲನೆ ನೀಡಿಸಿದರು.
ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಈಗ ಮತ್ತೊಂದು ದಾಖಲೆಯ ಹೆಜ್ಜೆನಿಟ್ಟು ಕೊಪ್ಪಳ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಸಂಪೂರ್ಣ ಮಹಿಳೆಯ ಸಿಬ್ಬಂದಿಗಳು,ಮಹಿಳಾ ಗ್ರಾಹಕರಿಂದ ಕೂಡಿದ್ದು ಈ ಶಾಖೆಯು ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಶ್ರೀ ಗವಿಸಿದ್ದೇಶ್ವರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ರಾಜಶೇಖರ್ ಗೌಡ ಆಡೂರು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕರಾದ ವಿಶ್ವನಾಥ ಅಗಡಿ, ಬಸವರಾಜ್ ಶಹಪೂರು, ರಾಜೇಂದ್ರಕುಮಾರ ಶೆಟ್ಟರ್, ಶಿವಕುಮಾರ ಪಾವಲಿಶೆಟ್ಟರ್, ಶಿವರಡ್ಡಿ ಭೂಮಕ್ಕನವರ್, ಗವಿಸಿದ್ದಪ್ಪ ತಳಕಲ್, ರಮೇಶ ಕವಲೂರು, ನಾಗರಾಜ್ ಅರಕೇರಿ, ಸುಮಂಗಲಾ ಸೋಮಲಾಪೂರ, ಸೈಯದಾ ಶೈನಾಜಬೇಗಂ, ಜಯಶ್ರೀ ಬಬಲಿ ಪ್ರಧಾನ ವ್ಯವಸ್ಥಾಪಕ ಪ್ರಭಾಕರ ಜೋಷಿ,ಬ್ಯಾಂಕಿನ ವ್ಯವಸ್ಥಾಪಕ ಮಲ್ಲಿಕಾರ್ಜುನ ಸಿದ್ನೆಕೊಪ್ಪ, ಲೆಕ್ಕಿಗ ಶ್ರೀಮತಿ ವೀರಮ್ಮ ನರಗುಂದ ಅಧಿಕಾರಿ ರಾಘವೇಂದ್ರ ಜಮಖಂಡಿಕರ್, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.