
ಶ್ರೀ ತುರುಮಂದೆ ಲಿಂಗೇಶ್ವರ ಮತ್ತು ಶ್ರೀ ರೇಣುಕಾ ಯಲ್ಲಮ್ಮ ದೇವಿ ನೂತನ ಶೀಲಾ ದೇವಸ್ಥಾನ ಲೋಕಾರ್ಪಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 19- ತಾಲೂಕು ಹಳೆಕೋಟೆ ಗ್ರಾಮದಲ್ಲಿ ಶ್ರೀ ತುರುಮಂದೆ ಲಿಂಗೇಶ್ವರ ಮತ್ತು ಶ್ರೀ ರೇಣುಕಾ ಯಲ್ಲಮ್ಮ ದೇವಿಯ ನೂತನ ಶಿಲಾ ದೇವಸ್ಥಾನ ಲೋಕಾರ್ಪಣೆ ನೂತನ ಗೋಪುರದ ಕಳಸ ರೋಹಣ ಮತ್ತು ಶ್ರೀ ನಂದೀಶ್ವರ ನಾಗದೇವತೆ ವಿಗ್ರಹಗಳ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರು ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಸಿರುಗುಪ್ಪ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕರಿಬಸಪ್ಪ, ದಮ್ಮೂರು ಸೋಮಪ್ಪ ಗವಿಸಿದ್ದಪ್ಪ, ಹಳೆಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷ ವೀರೇಶ, ಉಪಾಧ್ಯಕ್ಷ ಮರಿಸ್ವಾಮಿ, ಗ್ರಾಮ ಪಂಚಾಯತ್ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಬಿ ಕೆ ರಘು ಭೀಮಣ್ಣ, ಗೊರವರ ಶ್ರೀನಿವಾಸ್, ಬಿ ಉಮೇಶ್ ಗೌಡ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.