
20, 21 ರಂದು ಶ್ರೀ ಶಿವ ಚಿದಂಬರೇಶ್ವರ ಜಯಂತೋತ್ಸವ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 7- ಜಿಲ್ಲೆಯ ಯಲಬುರ್ಗಾ ತಾಲೂಕಿನ ವಣಗೇರಿ ಗ್ರಾಮದಲ್ಲಿ ಶ್ರೀ ಶಿವ ಚಿದಂಬರೇಶ್ವರರ ೨೬೬ನೇ ಜಯಂತೋತ್ಸವ ನ.20 ಹಾಗೂ 21 ರಂದು ಜರುಗಲಿದ್ದು ಸರ್ವರು ಆಗಮಿಸಿ ಯಶಸ್ವಿಗೊಳಿಸುವಂತೆ ಪಂಡಿತ ಶೇಷಾಚಲ ಭಟ್ ಜೋಶಿ ಇವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನಿಡಿದ್ದು ವಣಗೇರಿ ಗ್ರಾಮದ ಶ್ರೀ ಮಾರುತೇಶ್ವರ ದೆವಸ್ಥಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಬುಧವಾರ 20 ರಂದು ಬೆಳಿಗ್ಗೆ 8ಕ್ಕೆ ಧ್ವಜಾರೋಹಣ ಜರುಗಲಿದ್ದು ಪ.ಪೂ ವಿಶ್ವನಾಥ ದಿಕ್ಷೀತ್ ದಂಪತಿಗಳು ನೆರವೆರಿಸಲಿದ್ದು, ನಂತರ ಶ್ರೀ ಶಿವ ಚಿದಂಬರೇಶ್ವರ ಉತ್ಸವ ಮೂರ್ತಿ ಮೇರವಣಿಗೆ ನಂತರ ಶ್ರೀ ಲಕ್ಷಿö್ಮÃ ನಾರಾಯಣ ಹೃದಯ ಹವನ ಸುಮಂಗಲೇಯರಿ0ದ ಕುಂಕುಮಾರ್ಚನೆ ಪುರ್ಣಾಹುತಿ ಜರುಗಲಿದೆ.
ಸಂಗೀತ : ಸಂಜೆ ಹಿರೇವಡ್ಡರಕಲ್ ಪ್ರಭಾಕರ ಪಟವಾರಿ, ಶ್ರೀಮತಿ ಚೈತ್ರಾ ನಾಯಕ್, ಮಾರ್ತಾಂಡ ದೇಶಪಾಂಡೆ ಇವರಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಜರುಗಲಿದೆ.
ಜನ್ಮೋತ್ಸವ : ಗುರುವಾರ 21 ರಂದು ಶ್ರೀ ಶಿವ ಚಿದಂಬರೇಶ್ವರ ಜಯಂತೋತ್ಸವ ಜರುಗಲಿದ್ದು ಬೆಳಿಗ್ಗೆ ಸುಪ್ರಭಾತ, ಕಾಕಡಾರತಿ, ಪಂಚಾಮೃತ ಹಾಗೂ ರುದ್ರಾಭೀಷೆಕ, ಪಾದಪೂಜೆ ಕಾರ್ಯಕ್ರಮಗಳು ಹೋಸಪೆಟೆಯ ವೇ.ಬ್ರ. ಪಾರ್ಥ ಸಾರತಿ ಜೋಶಿ ಇವರ ನೇತೃತ್ವದಲ್ಲಿ ಜರುಗಲಿದೆ ಸರ್ವರು ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗುವಂತೆ ಶ್ರೀ ಶೀವ ಚಿದಂಬರೇಶ್ವರ ಸೇವಾ ಸಮಿತಿ ವಣಗೇರಿ ಇವರು ತಿಳಿಸಿದ್ದಾರೆ.