ಸಂಭ್ರಮದಿಂದ ಜರುಗಿದ ಶ್ರೀ ವರಬಸವೇಶ್ವರ ಸ್ವಾಮಿ ರಥೋತ್ಸವ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 2- ಶ್ರಾವಣ ಮಾಸದ ವಿಶೇಷ ನಾಲ್ಕನೇ (ಕಡೆಯ ಸೋಮವಾರ) ಅಂಗವಾಗಿ ನಗರದ ರೂಪನ ಗುಡಿ ರಸ್ತೆಯಲ್ಲಿರುವ ಶ್ರೀ ವರಬಸವೇಶ್ವರ ಸ್ವಾಮಿಯ ಜಾತ್ರೆಯನ್ನು ಭಕ್ತಿ ಶ್ರದ್ಧೆಯಿಂದ ಸಂಭ್ರಮದಿಂದ ನೂತನ ರಥಕ್ಕೆ ಪೂಜೆಯನ್ನು ಸಲ್ಲಿಸಿ ಮಡಿತೇರಿನ ರಥವನ್ನು ದೇವಸ್ಥಾನದ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು ಮತ್ತು ನೂರಾರು ಭಕ್ತರ ಸಮ್ಮುಖದಲ್ಲಿ ಪೂಜೆಯನ್ನು ಸಲ್ಲಿಸಿ ರಥೋತ್ಸವವನ್ನು ಆಚರಿಸಲಾಯಿತು.
ದೇವಸ್ಥಾನದ ಟ್ರಸ್ಟ್ ಸದಸ್ಯ ಪ್ರಭು ಮಾಧ್ಯಮದವರೊಂದಿಗೆ ಮಾತನಾಡಿ, ಶ್ರೀ ವರಬಸವೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ನೂತನ ರಥವನ್ನು ಸರ್ವ ಭಕ್ತರ ಸಹಕಾರದೊಂದಿಗೆ ಮತ್ತು ಟ್ರಸ್ಟ್ ವತಿಯಿಂದ ಸುಮಾರು ೧೮ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹೊಸ ರಥವನ್ನು ನಿರ್ಮಾಣ ಮಾಡಲಾಗಿದೆ, ಇದರಿಂದ ಭಕ್ತರು ತುಂಬಾ ಹರ್ಷ ಮತ್ತು ಸಂತೋಷದಿAದ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದಾರೆ ಎಂದರು.
ದೇವಸ್ಥಾನದ ಧರ್ಮಕರ್ತರಾದ ಬಳ್ಳಾರಿ ಮಂಜು ಮಾತನಾಡಿ, ಕಳೆದ ವರ್ಷಕ್ಕಿಂತ ಈ ವರ್ಷ ಜಾತ್ರೆ ಅದ್ದೂರಿಯಾಗಿ ನಡೆಯುತ್ತದೆ. ಅದಕ್ಕೆ ಎಲ್ಲಾ ಭಕ್ತರ ಭಕ್ತಿಭಾವ ಶ್ರದ್ದೆಯಿಂದ ಜಾತ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ, ಅಲ್ಲದೆ ನೂತನ ರಥವನ್ನು ಸಂಜೆ ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಎಳೆದು ರಥೋತ್ಸವವನ್ನು ಆಚರಿಸಲಾಗುವುದು ಶ್ರೀ ವರಬಸವೇಶ್ವಸ್ವಾಮಿ ಭಕ್ತರಿಗೆ ಜಾತ್ರೆ ಮಹೋತ್ಸವದ ಶುಭಾಶಯಗಳನ್ನು ಕೋರಿದರು.
ಸ್ಥಳೀಯರಾದ ಮತ್ತು ದೇವಸ್ಥಾನದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಎಂ.ರಾಜಕುಮಾರ ಮಾತನಾಡಿ, ನಾವು ಚಿಕ್ಕವರಿರುವಾಗ ನಿಂದಲೂ ವರಬಸಪ್ಪ ಸ್ವಾಮಿಯ ಜಾತ್ರೆಯನ್ನು ನಮ್ಮ ಪೂರ್ವಿಕರು ಯಾವುದೇ ಜಾತಿ ಭೇದ ಭಾವವಿಲ್ಲದೆ ಹಿಂದೂ ಕ್ರೈಸ್ತ ಮುಸ್ಲಿಂ ಎಲ್ಲರೂ ಒಟ್ಟಾಗಿ ರಥೋತ್ಸವದಲ್ಲಿ ಪಾಲ್ಗೊಂಡು ಇದು ನಮ್ಮದೇ ಮನೆಯ ಹಬ್ಬ ಎನ್ನುವಂತೆ ಅತ್ಯಂತ ಸಡಗರ ಸಂಭ್ರಮದಿAದ ಆಚರಿಸುತ್ತಾರೆ, ಈ ದೇವಸ್ಥಾನವು ಇನ್ನಷ್ಟು ಅಭಿವೃದ್ಧಿಯಾಗಬೇಕಾದ ಅವಶ್ಯಕತೆ, ಈ ದೇವಸ್ಥಾನದ ಅಭಿವೃದ್ಧಿಗೆ ಭಕ್ತರು, ಮುಖಂಡರು, ಈ ಭಾಗದ ಹಿರಿಯರು ರಾಜಕಾರಣಿಗಳು ತನುಮನದೊಂದಿಗೆ ಸಹಾಯ ಮಾಡಬೇಕಾದ ಅವಶ್ಯಕತೆ ಇದೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಹಾಲಿಂಗಸ್ವಾಮಿ, ಟ್ರಸ್ಟ್ ಕಾರ್ಯಕಾರಿ ಪ್ರಭು ಉದ್ದಿ, ಶ್ಟಿದರಗಡ್ಡೆ ವರಬಸಪ್ಪ, ಲೋಕರೆಡ್ಡಿ, ಎಂ.ರಾಜ್‌ಕುಮಾರ್, ಮಂಜುನಾಥಸ್ವಾಮಿ, ವೀರೇಶಸ್ವಾಮಿ, ಗಾದಿಲಿಂಗಪ್ಪ, ಮಲ್ಲಿಕಾರ್ಜುನ, ಶೇಖರ್, ತಿಪ್ಪಯ್ಯ, ತಿಪ್ಪೇಸ್ವಾಮಿ, ಗವಿ ಗಂಗಮ್ಮ, ಜಗದೀಶ್, ಹೇಮಾ ರೆಡ್ಡಿ, ನರೇಂದ್ರ, ಪ್ರಸಾದ್, ಬಸವರಾಜ್, ಶಿವರಾಜ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.