
ಆರೋಗ್ಯ ತಪಾಸಣಾ ಶಿಬಿರಕ್ಕೆ ಸಿದ್ದಲಿಂಗಪ್ಪ ಚಾಲನೆ
ಕರುನಾಡ ಬೆಳಗು ಸುದ್ದಿ
ಕುಕನೂರು, 13- ತಾಲೂಕು ಬಾನಾಪುರ ವಲಯದ ಲಕಮಾಪುರ ಕಾರ್ಯ ಕ್ಷೆತ್ರದಲ್ಲಿ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಗ್ರಾ.ಪಂ. ಸದಸ್ಯ ಸಿದ್ದಲಿಂಗಪ್ಪ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಲೂಕಿನ ಯೋಜನಾಧಿಕಾರಿ ಸತೀಶ್ ಟಿ, ಯೋಜನೆ ಮತ್ತು ಜ್ಞಾನವಿಕಾಸ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು.
ಸ್ಥಳೀಯ ಆರೋಗ್ಯ ಇಲಾಖೆ ಮತ್ತು ಒ.ಒ.ಜೋಶಿ ಕಣ್ಣಿನ ಆಸ್ಪತ್ರೆ ಕೊಪ್ಪಳ ಇವರ ಸಹಕಾರದೊಂದಿಗೆ ಬಿಪಿ, ಶುಗರ್ ಮತ್ತು ಕಣ್ಣಿನ ತಪಾಸಣೆ ಮಾಡಿಸಿ ಕನ್ನಡಕ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ರೇಣುಕಾ, ಬಸಯ್ಯ ಹಿರೇಮಠ, ಜ್ಞಾನ ವಿಕಾಸ ಸಮನ್ವಯಧಿಕಾರಿ ಗೀತಾ, ಮೇಲ್ವಿಚಾರಕ ಶಿವಪ್ಪ, ಆರೋಗ್ಯ ಸಹಾಯಕಿ ಸರಸ್ವತಿ, ನಿವೇದಿತಾ, ಸೇವಾ ಪ್ರತಿನಿಧಿ ಲಲಿತಾ, ದೀಪಾ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.