WhatsApp Image 2024-07-21 at 3.02.33 PM

ಅಪ್ಪಣ್ಣನವರ ನಡೆ ನುಡಿ ನಿಷ್ಠೆಯ ಕಾಯಕ : ಸಿದ್ದಾರ್ಥ ಕಾರಂಜಿ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 21- ನಡೆ ನುಡಿ ನಿಷ್ಠೆ ಕಾಯಕ ಆತ್ಮ ಶುದ್ಧಿಯ ಪಥ ದರ್ಶಕ ಶಿವಶರಣ ಹಡಪದ ಅಪ್ಪಣ್ಣ ಎಂದು ಉಪ ತಹಸಿಲ್ದಾರ್ ಸಿದ್ದಾರ್ಥ ಕಾರಂಜಿ ಅವರು ಅಭಿಪ್ರಾಯಪಟ್ಟರು.

ಸಿರುಗುಪ್ಪ ನಗರದ ತಾಲೂಕ ಕಚೇರಿ ಸಭಾಭವನದಲ್ಲಿ ಕರ್ನಾಟಕ ಸರ್ಕಾರ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ ತಾಲೂಕ ಆಡಳಿತ ತಾಲೂಕು ಪಂಚಾಯತ್ ಸಿರುಗುಪ್ಪ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಗರ ಸಭೆ ಸರ್ವರ ಸಹಭಾಗಿತ್ವದಲ್ಲಿ ವಚನಕಾರರು ಶಿವಶರಣರು ಶ್ರೀ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅಪ್ಪಣ್ಣನವರ ಭಾವಚಿತ್ರಕ್ಕೆ ಹೂ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಅರ್ಪಿಸಿ ಗೌರವಿಸಿ ನಮನ ಸಲ್ಲಿಸಿ ಸ್ಮರಿಸಿ ಅವರು ಮಾತನಾಡುತ್ತಾ ಇಲ್ಲಿ ಎಲ್ಲರೂ ಸಮಾನರು ಹುಟ್ಟಿನಿಂದ ಇಲ್ಲಿ ಯಾರು ಶ್ರೇಷ್ಠರಲ್ಲ ನಡತೆ ನೋಟ ನುಡಿಯಿಂದ ಭಕ್ತಿಯಿಂದ ಶ್ರೇಷ್ಠರಾದ ಹಡಪದ ಅಪ್ಪಣ್ಣ ಹಡಪದ ಎಂದರೆ ಕ್ಷೌರಿಕ ವೃತ್ತಿಯವರು ಬಳಸುವ ಪರಿಕರಗಳನ್ನು ಇಡುವ ಪೆಟ್ಟಿಗೆ ಅಥವಾ ಚೀಲ ಅಪ್ಪಣ್ಣನವರು ಕಲ್ಯಾಣದಲ್ಲಿ ಬಸವಣ್ಣನವರಿಗೆ ಆಪ್ತ ಕಾರ್ಯದರ್ಶಿಯಾಗಿದ್ದರು ಬಸವ ಪ್ರಿಯ ಚೆನ್ನಬಸವಣ್ಣ ಎಂಬುದು ಇವರ ವಚನಗಳ ಅಂಕಿತ ನಾಮ 250 ವಚನಗಳನ್ನು ರಚಿಸಿದ್ದಾರೆ ಅಪ್ಪಣ್ಣನವರದು ಹಡಪದ ಕಾಯಕ ಆದ್ದರಿಂದ ಹಡಪದ ಅಪ್ಪಣ್ಣ ಎಂದು ಕರೆದರು.

ರಾಷ್ಟ್ರೀಯ ಸಾಕ್ಷರತಾ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಸದಸ್ಯರು ಸಮಾಜ ಸುಧಾರಕ ಎ ಅಬ್ದುಲ್ ನಬಿ ಅವರು ಮಾತನಾಡಿ ಕರ್ನಾಟಕದಲ್ಲಿ 12ನೇ ಶತಮಾನದಲ್ಲಿ ಶರಣರ ಅನುಭವ ಮಂಟಪ ಕಲ್ಯಾಣ ಎಂದೆಂದಿಗೂ ಇಂದಿಗೂ ಅಜರಾಮರ, ಅಲ್ಲಮ, ಬಸವಣ್ಣ, ಅಕ್ಕಮಹಾದೇವಿ, ಚನ್ನಬಸವಣ್ಣ, ಸಿದ್ದರಾಮೇಶ್ವರ, ಮಾದರ ಚೆನ್ನಯ್ಯ, ಡೊಕರ ಕಕ್ಕಯ್ಯ, ಆಯ್ದಕ್ಕ, ಲಕ್ಕಮ್ಮ, ಕೂಗು ಮಾರಿನ ತಂದೆ , ದುಗ್ಗಳ್ಳಿ, ಗೊಗ್ಗವ್ವೆ, ಹಡಪದ ಅಪ್ಪಣ್ಣ, ಹೀಗೆ 196000 ಶರಣರು 770 ವಚನಕಾರರು ಆಗ ಕಲ್ಯಾಣದಲ್ಲಿ ಧಾರ್ಮಿಕ ಶೈಕ್ಷಣಿಕ ಸಮಾನತೆಯ ಕ್ರಾಂತಿಯನ್ನೇ ಸೃಷ್ಟಿ ಮಾಡಿದ್ದರು ಹಡಪದ ಅಪ್ಪಣ್ಣ ಅವರ ನಿಜವಾದ ಹೆಸರು ಜೀವಣ್ಣ ಬಸವಣ್ಣ ಎಂದು ನುಡಿದರು.

ತಾಲೂಕ ಕಚೇರಿಯ ಹೆಚ್ ಶೇಕರ್, ಗುಡುದೇಶ್ , ಹನುಮೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸುರೇಶ್, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ , ತಹಸಿಲ್ದಾರ್ ಕಚೇರಿಯ ಬಿಸಿಎಂ ಕಚೇರಿಯ ಸಿಬ್ಬಂದಿ ವರ್ಗದವರು ಸಮಾಜದ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!