
ಗಾಯನ ಸ್ಪರ್ಧೆ : ಜೈನ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 13- ನಗರದ ಅಮರಜ್ಯೋತಿ ಗಾರ್ಡನ್‌ನಲ್ಲಿ ಆಗಸ್ಟ್-೧೧ ಭಾನುವಾರ ನಡೆದ ಭಾರತ್ ವಿಕಾಸ್ ಪರಿಷತ್ ಆಯೋಜಿಸಿದ್ದ ಗಾಯನ ಸ್ಪರ್ಧೆಯಲ್ಲಿ ಜೈನ್ ಪಬ್ಲಿಕ್ ಶಾಲೆಯ ಮಕ್ಕಳಾದ ಕುಮಾರಿ ಮಾನಸ, ವಿಸ್ಮಯ, ದೀಕ್ಷಿತ, ಆಶ್ರಿತ, ಸ್ವರ್ಣ ಶ್ರೀ, ಜಸ್ಮಿತಾ, ನೇಹಾ, ಅಶ್ವಿಕ ತಂಡಕ್ಕೆ ಹಿಂದಿ ಹಾಗೂ ಸಂಸ್ಕೃತಿ ಗೀತೆಯಲ್ಲಿ ಪ್ರಥಮ ಸ್ಥಾನ ಲಭಿಸಿದ್ದು ಹಾಗೂ ಕನ್ನಡದಲ್ಲಿ ತೃತೀಯ ಸ್ಥಾನ ಪಡೆದು ಮುಂದಿನ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಅಧಿಕಾರಿಗಳಾದ ಶಶಿಧರ್ ಉಪ್ಪಾರ್, ಶಾಲೆಯ ಪ್ರಾಂಶುಪಾಲರಾದ ಸತೀಶ್ ಕುಮಾರ್, ಸಂಯೋಜಕರಾದ ಸೈದಾ ಫಬಿನ್, ಸಂಗೀತ ಶಿಕ್ಷಕರಾದ ವಿನೋದ್ ಕುಮಾರ್, ತಬಲ ಶಿಕ್ಷಕರಾದ ರಾಘವೇಂದ್ರ ಹಾಗೂ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳೆಲ್ಲರೂ ಅಭಿನಂದನೆಯನ್ನು ಸಲ್ಲಿಸಿದ್ದಾರೆ.