1

ಸಿರಗುಪ್ಪ: ಜೀವನ ದರ್ಶನ

ಜೀವನದ ಆದರ್ಶಗಳನ್ನು ‌ತಿಳಿದು ಸಾಗೋಣ 

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ , 18-0 ಈ ಅಶಾಶ್ವತ ಜೀವನದಲ್ಲಿ ಎಲ್ಲರೂ ಗುರಿ ಇಲ್ಲದ ಓಟದಲ್ಲಿದ್ದೇವೆ. ನಾವು ನಮ್ಮ ಜೀವನದ ಉದ್ದೇಶವನ್ನು ಮರೆತಿದ್ದೇವೆ. ಪ್ರಕೃತಿಯು ತನ್ನ ಕರ್ತವ್ಯ ಮಾಡುತ್ತದೆ. ಕಾರಣ ನಾವು ಸಹ ಜೀವನದ ಆದರ್ಶಗಳನ್ನು ‌ತಿಳಿದು ಸಾಗೋಣ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ವೀಣಾ ಅಕ್ಕನವರು ಹೇಳಿದರು.

ನಗರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಲಾಣ ಮಂಟಪದಲ್ಲಿ ಜೀವನ ದರ್ಶನ ಕಾರ್ಯಕ್ರಮವನ್ನು ಪ್ರಜಾಪಿತ ಬ್ರಕ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಿರುಗುಪ್ಪ ಕೇಂದ್ರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಕಾರ್ಯಕ್ರಮವು ಗುರುಬಸವ ಮಠದ ಬಸವಭೂಷಣ ಸ್ವಾಮಿ ಮತ್ತು ಮಾಜಿ ಶಾಸಕ ಟಿ.ಎಂ.ಚಂದ್ರಶೇಖರ ಸ್ವಾಮಿ ಸೇರಿದಂತೆ ವೇದಿಕೆ ಗಣ್ಯರಿಂದ ದೀಪ ಪ್ರಜ್ವಲಿಸುವ ಮೂಲಕ ಚಾಲನೆಗೊಂಡಿತು. ಸಿರುಗುಪ್ಪ ‌ಕೇಂದ್ದದ ಮುಖ್ಯಸ್ಥೆ ಪೂರ್ಣಿಮಾ ಅಕ್ಕನವರು ಎಲ್ಲರಿಗೂ ಶಾಲು ಹೊದಿಸಿ ಮಾಲೆ ಹಾಕಿ ಆತ್ಮೀಯ ಸ್ವಾಗತ ಕೋರಿದರು. ವಿವಿಧ ಚಟುವಟಿಕೆಗಳಲ್ಲಿ ಪಾಲ್ಗೊಂಡ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವೆದಿಕೆ ಮೇಲೆ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು

ನಮ್ಮ ದೇಶದಲ್ಲಿ ಅನೇಕ ಮಹಾನುಭಾವರು ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಆದರೆ ಅವಲ್ಲವೂ ಪುಸ್ತಕ ರೂಪದಲ್ಲಿವೆ. ಅವುಗಳನ್ನು ‌ನಾವು ಮಸ್ತಕದಲ್ಲಿ ತೆಗೆದುಕೊಂಡಾಗ ಜೀವನ ಸಾರ್ಥಕತೆಯಾಗುತ್ತದೆ. ಜೀವನದ ದರ್ಶನವನ್ನು ನಮ್ಮನ್ನು ನಾವು ಒಳಗಿನಿಂದ ತಿಳಿದುಕೊಳ್ಳಬೇಕು. ಉತ್ತಮ ಚಿಂತನೆಗಳ‌ ಮೂಲಕ ಜೀವನ ಸುಂದರವಾಗಿಸಿ ಕೊಳ್ಳಬಹುದು ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಸಹಕಾರಿ ಧುರೀಣ ಚೊಕ್ಕ ಬಸವನಗೌಡ, ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್. ಜಿ. ಬಸವರಾಜ, ಮುಖಂಡರಾದ ದರಪ್ಲ‌ನಾಯಕ, ಮುತ್ಯಾಲ ಶೆಟ್ಟಿ, ಯು.ಸಿ. ರಾಮಾಂಜನೇಯ ಶೆಟ್ಟಿ ನಗರಸಭೆ ಸದಸ್ಯ ಕಾಯಿಪಲ್ಯ ನಾಗರಾಜ, ಚಾಗಿ ಸುಬ್ಬಯ್ಯ ಶೆಟ್ಟಿ, ಹಿರಿಯ ವಕೀಲರಾದ ಜಿ.ಬಿ. ಗುಂಡಳ್ಳಿ ಕಲ್ಲಾಣ ಮಂಟಪದ ಶ್ರೀರಾಮುಲು ಸೇರಿದಂತೆ ಮಹಿಳೆಯರು ಹಾಗೂ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!