ಸಿರಿಗೇರಿ : 200 ಜನರಿಗೆ ಉಚಿತ ಕಣ್ಣಿನ ತಪಾಸಣೆ ಶಿಬಿರ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 31- ತಾಲೂಕು ಸಿರಿಗೆರಿ ಗ್ರಾಮದಲ್ಲಿ ಬಳ್ಳಾರಿ ತಾಲೂಕು ವೈದ್ಯಾಧಿಕಾರಿಗಳ ಕಚೇರಿ ಪಿ ಎಚ್ ಸಿ ಶಂಕರ ಕಣ್ಣಿನ ಶಿವಮೊಗ್ಗ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಸೊಸೈಟಿ ಸಹಯೋಗದೊಂದಿಗೆ ಭಾನುವಾರ ಕಣ್ಣಿನ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.
ತಾಲೂಕಿನ ಸಿರಿಗೇರಿ, ದಾಸಪುರ, ಕೊಂಚಿಗೇರಿ, ಗುಂಡಿಗನೂರು, ನಡವಿ, ಹಾವಿನಾಳು, ಮುದ್ದಟನೂರು ಗ್ರಾಮಗಳಿಂದ 200ಕ್ಕೂ ಹೆಚ್ಚು ಜನರ ಕಣ್ಣಿನ ತಪಾಸಣೆ ಮಾಡಲಾಯಿತು.
ನೇತ್ರ ತಜ್ಞೆ ಶ್ರೀನಿ ಸಾಗರ್ ಪರೀಕ್ಷಿಸಿದರು ಹಲವರಿಗೆ ಸ್ಥಳದಲ್ಲಿ ಔಷಧ ಕನ್ನಡಕ ವಿತರಿಸಲಾಯಿತು.
74 ಜನರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಶಿಫಾರಸ್ಸು ಮಾಡಲಾಯಿತು.
ವೈದ್ಯಾಧಿಕಾರಿಗಳಾದ ಡಾ ದಾನೇಶ್ವರಿ. ಡಾ ಎಚ್ ತಿಪ್ಪೇಸ್ವಾಮಿ. ಡಾ ಪೂಜಾರ್ ನಾಗರಾಜ್. ಪ್ರಮುಖರಾದ ಶಿವಪ್ರಸಾದ್. ತ್ಯಾಗರಾಜ್. ಚಿದಾನಂದ. ಸತೀಶ್. ನಬಿಸಾಬ್ ಮತ್ತು ಇತರರು ಇದ್ದರು.