4

ಸಿರುಗುಪ್ಪ : ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ಸಂಪನ್ನ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 23- ಶ್ರೀ ಕ್ಷೇತ್ರ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸಿರುಗುಪ್ಪ ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಇದ್ದು ಪ್ರತಿ ವರ್ಷ ಇಲ್ಲಿಯೂ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಗುರುವಾರ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನಾ ಕಾರ್ಯಕ್ರಮಗಳು ಸಂಪನ್ನಗೊಂಡವು.

ಆರಾಧನಾ ಮಹೋತ್ಸವದ ಅಂಗವಾಗಿ ಪಂಚಾಮೃತ ಹಸ್ತೋದಕ ಮತ್ತು ಅರ್ಚನ ಸೇವೆ, ಸರ್ವ ಸೇವೆ, ಅಲಂಕಾರ ಬ್ರಾಹ್ಮಣರ ಸೇವೆ, ಹೂವಿನ ಅಲಂಕಾರ ಸೇವೆ ಅನ್ನಸಂತರ್ಪಣ ಸೇವಾ ಕಾರ್ಯ ಕಾರ್ಯಗಳನ್ನು ಮಾಡಲಾಗಿದ್ದು ಬೆಳಿಗ್ಗೆ ಏಳರಂದು ಶ್ರೀರಾಯರ ಅಷ್ಟೋತ್ತರ ಪಾರಾಯಣ ಹಮ್ಮಿಕೊಳ್ಳಲಾಗಿತ್ತು.

ಸ್ಥಳೀಯ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸ್ವಸ್ತಿ ವಾಚನ, ಪಲ್ಲಕ್ಕಿ, ತೊಟ್ಟಿಲ ಸೇವೆ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು.

ಈ ಎಲ್ಲಾ ಕಾರ್ಯಕ್ರಮಗಳನ್ನು ಶ್ರೀ ವೇಣುಗೋಪಾಲ ಸ್ವಾಮಿ ಅಭಿವೃದ್ಧಿ ಹಾಗೂ ಆಡಳಿತ ಟ್ರಸ್ಟ್, ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿಧಾನ ತಾಲೂಕು ಬ್ರಾಹ್ಮಣ ಸಂಘ ಇವರುಗಳಿಂದ ಆಯೋಜಿಸಲ್ಪಟ್ಟಿತ್ತು.

ಉತ್ತರಾಧನಾ ಅಂಗವಾಗಿ ನಗರದ ಹೆದ್ದಾರಿ ರಸ್ತೆಯಲ್ಲಿ ದೇವಸ್ಥಾನದ ಪ್ರಾಂಗಣದಿಂದ ಬಸ್ ನಿಲ್ದಾಣ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದವರಿಗೂ ಸಾಗಿ ಮತ್ತೆ ಸ್ವಸ್ಥಾನದವರೆಗೂ ರಥೋತ್ಸವ ನಡೆಸಲಾಯಿತು.
ಈ ಸಂದರ್ಭದಲ್ಲಿ ಅನೇಕ ಮಂಗಳವಾದ್ಯಗಳು ಹಾಗೂ ಭಜನಾ ಮಂಡಳಿಗಳವರಿಂದ ಭಜನೆ ಕೋಲಾಟ ನೃತ್ಯ ಪ್ರದರ್ಶನ ಗಳು ಆಕರ್ಷಕವಾಗಿ ಭಕ್ತಿ ಪ್ರಧಾನವಾಗಿ ನಡೆಸಲಾಯಿತು ಪೊಲೀಸ್ ಇಲಾಖೆ ಅಧಿಕಾರಿಗಳು ಸೂಕ್ತ ಬಂದೋಬಸ್ತು ನೀಡಿದ್ದರು.

ನಂತರ ದೇವಸ್ಥಾನದಲ್ಲಿ ಎಲ್ಲರಿಗೂ ತೀರ್ಥ ಪ್ರಸಾದಗಳು ವಿನಿಯೋಗಗೊಂಡವು ನಗರದ ವಿಪ್ರ ಸಮಾಜದವರು ಸೇರಿದಂತೆ ಅನೇಕ ಭಕ್ತರು ರಾಘವೇಂದ್ರ ಸ್ವಾಮಿಗಳ ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

error: Content is protected !!