
ಅಹಿಂದ ಯುವ ಘಟಕದ ಜಿಲ್ಲಾ ಖಜಾಂಚಿಯಾಗಿ ಎಸ್.ಕೆ ಚಂದ್ರಶೇಖರ್, ಉಪಾಧ್ಯಕ್ಷರಾಗಿ ಬಿ.ಆರ್. ಪ್ರಕಾಶ್ ನೇಮಕ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 20- ಕರ್ನಾಟಕ ಅಹಿಂದ ಜನ ಸಂಘದ ಯುವ ಘಟಕದ ಜಿಲ್ಲಾ ಖಜಾಂಚಿಯಾಗಿ ಎಸ್.ಕೆ.ಚಂದ್ರಶೇಖರ್ ಅವರನ್ನು ಹಾಗೂ ಉಪಾಧ್ಯಕ್ಷರಾಗಿ ಬಿ.ಆರ್.ಪ್ರಕಾಶ್ ಅವರನ್ನು ನೇಮಕಗೊಂಡಿದ್ದಾರೆ.
ಕರ್ನಾಟಕ ಅಹಿಂದ ಜನ ಸಂಘದ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಸೂಚನೆ ಮೇರೆಗೆ ಅಹಿಂದ ಯುವ ಘಟಕದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಎಂ.ಜಿ ಕನಕ ಅವರು ಈ ನೇಮಕಮಾಡಿ ಅಹಿಂದ ಜನರ ಶ್ರೇಯೋಭಿವೃದ್ಧಿಗಾಗಿ, ಸಾಮಾಜಿಕವಾಗಿ, ಶೈಕ್ಷಣಕವಾಗಿ ಮತ್ತು ಆರ್ಥಿಕವಾಗಿ ಅಹಿಂದ ಜನ ಸಮುದಾಯದ ಮುಖ್ಯವಾಹಿನಿಗೆ ತರುವ ಹಾಗೂ ಸಂಘಟನೆಯ ಮತ್ತು ಬಲವರ್ಧನೆಗಾಗಿ ದುಡಿಯುತ್ತೀರೆಂದು ನಂಬಿ ನಾನು ತಮಗೆ ಈ ಜವಾಬ್ದಾರಿಯನ್ನು ವಹಿಸಿರುತ್ತೇನೆ ಎಂದು ಎಂ.ಜಿ ಕನಕ ಹೇಳಿದರು.
ಇದೇ ವೇಳೆ ನೇಮಕಾತಿ ಆದೇಶ ಪತ್ರಗಳನ್ನು ಯುವ ಘಟಕದ ಬಳ್ಳಾರಿ ಜಿಲ್ಲಾಧ್ಯಕ್ಷರು ಎಂ.ಜಿ ಕನಕ ಅವರು ವಿತರಿಸುವ ಮೂಲಕ ಶುಭ ಕೋರಿದರು.
ಅಹಿಂದ ಯುವ ಘಟಕದ ಜವಾಬ್ದಾರಿ ವಹಿಸಿಕೊಂಡ ಎಸ್.ಕೆ ಚಂದ್ರಶೇಖರ್ ಅವರು, ನನ್ನ ಸಮಾಜಿಕ ಸೇವೆ ಪರಿಗಣಿಸಿ ಈ ಸ್ಥಾನ ಕಲ್ಪಿಸಿರುವ ಅಹಿಂದ ಯುವ ಘಟಕದ ಜಿಲ್ಲಾಧ್ಯಕ್ಷರು ಎಂ.ಜಿ ಕನಕ ಹಾಗೂ ಅಹಿಂದದ ಎಲ್ಲಾ ಪದಾಧಿಕಾರಿಗಳ ಸಹಕಾರದಿಂದ ಸಮುದಾಯವನ್ನು ಒಟ್ಟುಗೂಡಿಸಿ ಅದರ ಬೆಳವಣಿಗೆಗಾಗಿ ದುಡಿಯುತ್ತೇನೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಅಹಿಂದ ಜನ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಗೋನಾಳ್ ಎಂ. ತಿಮ್ಮಪ್ಪ, ಮಹಿಳಾ ಘಟಕ ಬಳ್ಳಾರಿ ಜಿಲ್ಲಾಧ್ಯಕ್ಷರು ಕೆ.ಯಶೋದಮ್ಮ, ಉಪಾಧ್ಯಕ್ಷರಾದ ಚಂದ್ರಕಲಾ, ಖಜಾಂಚಿ ತಿಮ್ಮಪ್ಪ, ಹಿರಿಯ ಉಪಾಧ್ಯಕ್ಷರಾದ ಚಂದ್ರಶೇಖರ್, ಯುವ ಘಟಕದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮಾರ್ ಫಾರೂಕ್, ನಗರಾಧ್ಯಕ್ಷರಾದ ಕಿರಣ್ ಕುಮಾರ್ ಅವರು ಹಾಗೂ ಮಹಿಳಾ ಪದಾಧಿಕಾರಿಗಳಾದ ಸುನೀತ, ಮಮತಾ, ಗೀತಾ, ಶಕುಂತಲಾ, ಮಾಧುರಿ ಸೇರಿದಂತೆ ಉಪಸ್ಥಿತರಿದ್ದರು.