WhatsApp Image 2024-09-20 at 4.55.37 PM

ನಿಗಮ ಮಂಡಳಿಗಳ ಸದಸ್ಯರ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಪಾಲಿಸಿ : ಪಂಪಾಪತಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 20- ರಾಜ್ಯ ಸರ್ಕಾರ ನಿಗಮ ಮಂಡಳಿಗಳಿಗೆ ಸದಸ್ಯರ ನೇಮಕಾತಿಯಲ್ಲಿ, ಸಾಮಾಜಿಕ ನ್ಯಾಯ ಪದ್ದತಿಯನ್ನು ಪಾಲಿಸುವುದರ ಬಗ್ಗೆ, ಪಕ್ಷಕ್ಕಾಗಿ ದುಡಿದ ಹಿರಿಯ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಬೇಕೆಂದು, ಕಾಂಗ್ರೆಸ್ ಹಿರಿಯ ಮುಖಂಡ ಕಲ್ಲುಕಂಬ ಪಂಪಾಪತಿ ಹೇಳಿದರು. ಇಂದು ಮುಂಡ್ಲೂರು ರಾಮಪ್ಪ ಸಭಾಂಗಣ ( ಸ್ನೇಹ ಸಂಪುಟ ) ದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ಸರ್ಕಾರ ನಿಗಮ ಮಂಡಳಿಗಳಿಗೆ ಸದಸ್ಯರ ನೇಮಕಾತಿ ಉದ್ದೇಶದಲ್ಲಿ, ತಮ್ಮ ಕಡೆಯಿಂದ ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗೆ ಶ್ರಮಿಸಿದ ಹಿರಿಯ ಕಾರ್ಯಕರ್ತರಿಗೆ ಆದ್ಯತೆ ನೀಡುವುದರ ಜೊತೆಗೆ ಸಾಮಾಜಿಕ ನ್ಯಾಯ ಪಾಲಿಸಬೇಕೆಂದು ಇದಕ್ಕೆ ಸಂಬಂಧಿಸಿದ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಕಳುಹಿಸಲಾಗಿದೆ ಎಂದು ತಿಳಿಸಿದರು.

ಸದಸ್ಯರ ನೇಮಕಾತಿಯಲ್ಲಿ ಒಂದು ಎಸ್ ಸಿ ಮತ್ತು ಒಂದು ಎಸ್ ಟಿಓ ಬಿಸಿ ಮೈನಾರಿಟಿ ಒಂದು ಜನರಲ್ ಸದಸ್ಯರಿಗೆ ಪ್ರಾತಿನಿತ್ಯ ಪಾಲಿಸುವುದು ಜೊತೆಗೆ ಒಬ್ಬ ಮಹಿಳಾ, ಒಬ್ಬ ವಕೀಲ ಅಥವಾ ಒಬ್ಬ ಪದವೀಧರ ಕಡ್ಡಾಯವಾಗಿರುವಂತೆ ನಿಗಾ ವಹಿಸಬೇಕೆಂದು ವಿನಂತಿಸಿದ್ದಾರೆ.

ಇವರಿಗೆ ಮಾನ್ಯ ಮುಖ್ಯಮಂತ್ರಿಗಳ ಫೋಟೋ ಜೊತೆಗೆ ಪಕ್ಷದ ಚಿಹ್ನೆ ನೇಮಕಾತಿ ಸದಸ್ಯರ ಇತ್ತೀಚಿನ ಫೋಟೋಕ್ಕೆ ಪಕ್ಷದ್ವಜದ ತ್ರಿವರ್ಣ ಗಾಡಿ ಇರುವಂತೆ ಐಡಿ ಕಾರ್ಡ್ ಪ್ರಿಂಟ್ ಮಾಡಿಸಿ, ಅದರ ಬೆಲೆ ಅಂದಾಜು ರೂ.250 ಸರ್ಕಾರ ಅಥವಾ ಪಕ್ಷದ ಮೇಲೆ ದಯವಿಟ್ಟು ಹಾಕದೆ ಸ್ವತಹ ನೇಮಕಾತಿ ಸದಸ್ಯರ ಆದೇಶ ಪತ್ರ ಪಡೆಯುವಾಗಲೇ ಆಯಾ ಕ್ಷೇತ್ರದ ನಮ್ಮ ಶಾಸಕರ ಮೂಲಕ ಸಂಬಂಧಪಟ್ಟವರಿಗೆ ತಲುಪಿಸಬೇಕೆಂದು ಮನವಿ ಮಾಡಿದರು.

ಇನ್ನು 2016 17 ರಲ್ಲಿ ಕರ್ನಾಟಕ ಪ್ರದೇಶ್ ದೇವರಾಜ್ ಅರಸು ವೇದಿಕೆ ವತಿಯಿಂದ ರಾಜ್ಯದ ಹಿಂದುಳಿದ ವರ್ಗಗಳ ಬಹು ನಿರೀಕ್ಷೆ ಮತ್ತು ಭರವಸೆಯೊಂದಿಗೆ ಬಳ್ಳಾರಿ ಜಿಲ್ಲಾ ಕೇಂದ್ರದಲ್ಲಿ ಸಾಮಾಜಿಕ ಸಮುಚ್ಚಯ ಕೇಂದ್ರವನ್ನು ಮಾದರಿಯಾಗಿ ಸ್ಥಾಪನೆ ಮಾಡಿ ಇಲ್ಲಿಯವರೆಗೆ ಸರ್ಕಾರದ ನಿವೇಶನ ಅನುದಾನ ಪಡೆಯದಿರುವ ಜಿಲ್ಲಾ ಮಡಿವಾಳ ಸಂಘ, ಜಿಲ್ಲಾ ವಿಶ್ವಕರ್ಮ ಸಂಘ, ಜಿಲ್ಲಾ ಉಪ್ಪಾರ ಸಂಘ, ಇನ್ನೂ ಇತರ ಆರು ವರ್ಗಗಳಂತೆ ಒಂದೇ ರೀತಿಯ ಇತರೆ ಹಿಂದೆ ವರ್ಗಗಳ ಜಿಲ್ಲಾ ಸಂಘಗಳು ಇರುವಂತೆ ಬಳ್ಳಾರಿ ಜಿಲ್ಲೆ ಸಾಮಾಜಿಕ ಸಮಚಯವನ್ನು ಸಾಮೂಹಿಕ ವೇದಿಕೆಯನ್ನು ನಿರ್ಮಿಸಲು ಮನವಿ ಮಾಡಲಾಯಿತು.

ಸಾಮಾಜಿಕ ಸಮುಚ್ಚಾಯವನ್ನು ಕೇವಲ ಎರಡರಿಂದ ಎರಡುವರೆ ಎಕರೆ ನಿವೇಶದಲ್ಲಿ ವಿಸ್ತರಿಸಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಲಾಗಿದೆ ಎಂದು ಕಲ್ಲು ಕಂಬ ಪಂಪಾಪತಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ, ಮುಖಂಡರು, ಡಿ ವೆಂಕಟರಮಣ, ಶಾನ್ವಿ ಜಕ್ರಿಯ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!