
ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಇಲಾಖೆ ವೈಫಲ್ಯ : ಯಮನೂರಪ್ಪ ಗೊರ್ಲೇಕೊಪ್ಪ
ಕರುನಾಡ ಬೆಳಗು ಸುದ್ದಿ
ಕುಕನೂರ, 21- ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಯಮನೂರಪ್ಪ ಗೊರ್ಲೆಕೊಪ್ಪ ನಾಮ ನಿರ್ದೇಶಕ ಸದಸ್ಯರು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡ ಕಟ್ಟುಗಳ ( ದೌರ್ಜನ್ಯ ಪ್ರತಿಬಂಧ ) ನಿಯಮಗಳು1995ರ ನಿಯಮ17ರೀತ್ಯಾ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ, ಕೊಪ್ಪಳ ಜಿಲ್ಲೆ ಅವರು ಮಾತನಾಡಿ, ಯಮನೂರಪ್ಪ ತಂದೆ ಈರಪ್ಪ ಬಂಡಿಹಾಳ ಕೊಲೆಯಾದ ವ್ಯಕ್ತಿ ಕೊಲೆ ಮಾಡಿದ ವ್ಯಕ್ತಿ ಮುದುಕಪ್ಪ ಹಡಪದ ಇವರ ಊರು ಕರುಮುಡಿ ಸಂಗನಾಳ ಗ್ರಾಮಕ್ಕೆ ಉದ್ಯೋಗಕ್ಕಾಗಿ ಬಂದಿಂದ ಯಮನೂರಪ್ಪ ತಂದೆ ಈರಪ್ಪ ಬಂಡಿಹಾಳ ಮುದಕಪ್ಪ ಹಡಪದ ಎಂಬುವ ಕಟಿಂಗ್ ಶಾಪಿಗೆ ಬಂದಾಗ ಇಬ್ಬರ ನಡುವೆ ಸಂಘರ್ಷ ನಡೆದು ಅದು ಕೊಲೆ ಮಟ್ಟಕ್ಕೆ ಹೋಗಿದ್ದು, ಅದಕ್ಕೆ ಕಾರಣವಾಗಿ ಇದರಲ್ಲಿ ಪೋಲಿಸ್ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ವರ್ಕ್ ಫೇಲಿವರ್ ಆಗುತ್ತಿದ್ದಾರೆ. ಯಾಕೆಂದರೆ ಏನೇ ಜಾಗೃತಿ ಮೂಡಿಸುವುದಿರಲಿ ಅದನ್ನು ಸಾರ್ವಜನಿಕ ಸ್ಥಳದಲ್ಲಿ ಮಾಡಬೇಕೇ ಒರೆತು ಓಣಿಯಲ್ಲಿ ಅಲ್ಲಾ ಅದನ್ನು ಓಣಿಯಲ್ಲಿ ಮಾಡುವುದರಿಂದ ಇಂತಹ ಪ್ರಕರಣಗಳು ಆಗುತ್ತಿವೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಮತ್ತು ಪೋಲಿಸ್ ಇಲಾಖೆ ಈ ಎರಡು ಇಲಾಖೆ ತಂದೆ-ತಾಯಿ ಇದ್ದ ಹಾಗೆ ನಮ್ಮ ಎಸ್ಸಿ ಎಸ್ಟಿ ಸಮಾಜಕ್ಕೆ ಈ ಎರೆಡು ಇಲಾಖೆ ಸೇರಿಕೊಂಡು ಕೆಲಸ ಮಾಡಿದರೆ ಏನು ಬೇಕಾದರೂ ಬದಲಾವಣೆ ಆಗಬಹುದು ಎಂಬುದು ನಮ್ಮ ಅನಿಸಿಕೆ ಇನ್ನು ಮುಂದೆ ಎಸಿಎಸ್ಟಿ ಸಮಾಜದವರಿಗೆ ಏನೇ ಜಾಗೃತಿ ಮಾಡಿದರೆ ಅಸ್ಪೃಶ್ಯತೆ ದಿನಾಚರಣೆ ಮಾಡಿದರೆ ಅದನ್ನು ಸಾರ್ವಜನಿಕ ಸ್ಥಳದಲ್ಲಿ ಮಾಡಬೇಕು . ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗೆ ಒಳಪಡುವ ಎಲ್ಲಾ ಸಾರ್ವಜನಿಕ ಅಂಗಡಿಗಳಿಗೆ ಲೈಸೆನ್ಸ್ ಕೊಡುವ ಅಧಿಕಾರಿಯು ವ್ಯಾಪಾರಸ್ಥರಿಗೆ ಎಲ್ಲಾ ಸಮಾಜದ ಜನರಿಗೆ ಸಮಾನವಾಗಿ ಕಾಣಬೇಕು ಎಂಬ ನಿಯಮವನ್ನು ಕಡ್ಡಾಯವಾಗಿ 20ರೂಪಾಯಿ ಬಾಂಡ್ ಪೇಪರ್ ನಲ್ಲಿ ಬರಸಿಕೊಂಡು ಅಂಗಡಿಗಳ ಲೈಸೆನ್ಸ್ ಕೊಡಬೇಕು ಈ ನಿಯಮ ಉಲ್ಲಂಘಿಸಿದರೆ ಅಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಬೇಕು ಅಂದಾಗ ಮಾತ್ರ ಇಂತಹ ಅವಮಾನದ ಕೃತ್ಯಗಳು ನಡೆಯುವುದು ನಿಲ್ಲುತ್ತವೆ ಎಂದು ಅವರು ಸಲಹೆ ನೀಡಿದರು .
ವೀರೇಶ್ ಸಿದ್ದಾಪುರ ವಕೀಲರು.ನಾಮ ನಿರ್ದೇಶಕ ಸದಸ್ಯರು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುವ ( ದೌರ್ಜನ್ಯ ಪ್ರತಿಬಂಧ ) ನಿಯಮಗಳು1995ರ 17ರೀತ್ಯಾ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ, ಕೊಪ್ಪಳ ಜಿಲ್ಲೆ ಅವರು ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ 78 ವರ್ಷಗಳು ಕಳೆದರೂ ಕೂಡ ದಲಿತರಿಗೆ ಮುಖ್ಯವಾದ ಪ್ರವೇಶಗಳು ಇಲ್ಲ ದಲಿತರಿಗೆ ಸಮಾನವಾದ ಅವಕಾಶಗಳು ಇಲ್ಲ ಇದರ ಸಂಬಂಧವೇ ಅರ್ಟಾ ಸಿಟಿ ಕೇಸ್ ಮಾಡಿರುವುದು 1995ರ ನಿಯಮ ಆದರೂ ಕೂಡ ಸರಿಯಾದ ಇಂಪ್ಲಿಮೆಂಟ್ ಆಗುತ್ತಿಲ್ಲ ಅದಕ್ಕೆ ಜಿಲ್ಲಾ ಆಡಳಿತಕ್ಕೆ ನಾವು ಒತ್ತಾಯ ಮಾಡುತ್ತೇವೆ. ನಮ್ಮ ಕಮೀಟಿಯ ಸದಸ್ಯರಿಂದ 1995ರ ನಿಯಮದ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ ಅದರಲ್ಲಿ 34 ಇಲಾಖೆ ಅಧಿಕಾರಿಗಳು ಬರುತ್ತಾರೆ ಈ ಒಂದು ಮೀಟಿಂಗ್ ನಲ್ಲಿ ಎಷ್ಟೊ ಅಧಿಕಾರಿಗಳು ಬಂದಿರುವುದೇ ಇಲ್ಲ ಅದಕ್ಕಾಗಿ ಮುಂದಿನ ಮೀಟಿಂಗ್ ನಲ್ಲಿ ಎಲ್ಲಾ ಅಧಿಕಾರಿಗಳು ಬಂದು ಈ ಒಂದು 1995ರ ನಿಯಮದ ಬಗ್ಗೆ ತಿಳಿದುಕೊಂಡು ಈ ನಿಯಮದ ಬಗ್ಗೆ ಎಸ್ಸಿ ಎಸ್ಟಿ ಸಮಾಜದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಈ ನಿಯಮದ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸೋಮಣ್ಣ ಕಲಿಕೇರಿ ವಕೀಲರು, ದೇವಪ್ಪ ಮೆಣಸಿ ಇದ್ದರು.