ಕೊಪ್ಪಳ ನಗರಸಭೆಯಲ್ಲಿ ಆರೋಗ್ಯ ತಪಾಸಣೆ (2)

ಕೊಪ್ಪಳ ನಗರಸಭೆಯಲ್ಲಿ ಆರೋಗ್ಯ ತಪಾಸಣೆ : ಪೌರಕಾರ್ಮಿಕರಿಗೆ ವಿಶೇಷ ಅರಿವು

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 6- ಕೊಪ್ಪಳ ನಗರಸಭೆಯಲ್ಲಿ ಸೋಮವಾರದಂದು ಆರೋಗ್ಯ ತಪಾಸಣೆ ಶಿಬಿರ ಹಾಗೂ ತಂಬಾಕು ಪದಾರ್ಥಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಪೌರಕಾರ್ಮಿಕರಿಗೆ ವಿಶೇಷ ಅರಿವು ಕಾರ್ಯಕ್ರಮವು ನಡೆಯಿತು.

ಕೊಪ್ಪಳ ನಗರಸಭೆ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದ ಅಹಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾರ್ಯಕ್ರಮ ಎನ್.ಸಿ.ಡಿ ಮತ್ತು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಎನ್.ಟಿ.ಸಿ.ಪಿ ಮತ್ತು ರಾಷ್ಟ್ರೀಯ ಬಾಯಿ ಆರೋಗ್ಯ (ಓರಲ್ ಹೆಲ್ತ್) ಕಾರ್ಯಕ್ರಮದ ದಂತ ವೈದ್ಯರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ್ ಅವರು ಮಾತನಾಡಿ, ದಿರ್ಘಕಾಲದಿಂದ ತಂಬಾಕು ಗುಟಕ, ಮಧ್ಯಸೇವನೆ, ಎಲೆ ಅಡಿಕೆ ತಿನ್ನವುದು ಸೇರಿದಂತೆ ಸಾಮಾನ್ಯ ವ್ಯಾಸನಗಳಿಂದ ಕ್ಯಾನ್ಸರ್ ಬರುವ ಸಾಧ್ಯಾತೆ ಇರುತ್ತದೆ. ದೇಹದ ಉತ್ತಮ ಆರೋಗ್ಯಕ್ಕೆ ವ್ಯಸನಗಳಿಂದ ಮುಕ್ತವಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯ ದಂತ ವೈದ್ಯಾಧಿಕಾರಿಗಳಾದ ಡಾ ಸವಿತಾ ಕೆ ಗೌಡರೆಡ್ಡಿ, ಮುನಿರಾಬಾದ್ ಸಿ.ಹೆಚ್.ಎ ಡಾ ಶ್ರುತಿ. ಎಸ್ ಲಕ್ಕುಂಡಿ, ಎನ್.ಸಿ.ಡಿ ವಿಭಾಗದ ಡಾ.ಜಯಶ್ರೀ, ಎನ್.ಸಿ.ಡಿ ವಿಭಾಗದ ಸಿಬ್ಬಂದಿ ಶಿವಪುತ್ರಪ್ಪ, ಪ್ರಯೋಗಾಲಯ ತಜ್ಞರಾದ ರೇಖಾ ಗುಡ್ಡಿ ಸೇರಿದಂತೆ ನಗರಸಭೆಯ ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ಹಾಗೂ ಸಿಬ್ಬಂದಿ ಮತ್ತು ಜಿಲ್ಲಾ ತಂಬಾಕು ವೆಸನ್ ಮುಕ್ತ ಕೇಂದ್ರದ ಸೈಕಾಲಾಜಿಸ್ಟ್ ಮತ್ತಿತರರಿದ್ದರು.

ಕಾರ್ಯಕ್ರಮದಲ್ಲಿ ತಂಬಾಕು ಪದಾರ್ಥಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಟಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಮತ್ತು ಓರಲ್ ಹೆಲ್ತ್ (ಕ್ಯಾನ್ಸರ್) ತಪಾಸಣೆಯನ್ನು ಕೈಗೊಳ್ಳಲಾಯಿತು.

Leave a Reply

Your email address will not be published. Required fields are marked *

error: Content is protected !!