
ಪ್ರತಿಯೊಬ್ಬರಿಗೆ ಕ್ರೀಡೆಯು ಅತ್ಯವಶ್ಯ : ಬಸವರಾಜ ತೆನ್ನಳ್ಳಿ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, ೨೦- ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ತೊಡಗುವ ಮನೋಭಾವ ಬೆಳೆಸಿಕೊಳ್ಳಲು ಮುಂದಾಗಬೇಕು ಎಂದು ತಹಸೀಲ್ದಾರ್ ಬಸವರಾಜ ತೆನ್ನಳ್ಳಿ ಹೇಳಿದರು.
ತಾಲೂಕಿನ ಬೇವೂರು ಗ್ರಾಮದ ಶ್ರೀ ಕೂಡಲ ಸಂಗಮೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.
ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ ಬಾಲ್ಯದಲ್ಲಿ ಯುವಕರು ಆಟೋಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳು ಕೇವಲ ಪಾಠ ಆಲಿಸಿದರೆ ಸಾಲದು. ಪಾಠದ ಜತಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ತಿಳಿಸಿದರು.
ಸಂಸ್ಥೆಯ ಸದಸ್ಯ ಯಮನಪ್ಪ ಗಡ್ಡದ ಮಾತನಾಡಿ,ವಿದ್ಯಾರ್ಥಿಗಳು ಪ್ರತಿಯೊಂದು ಆಟಗಳಲ್ಲಿ ಪಾಲ್ಗೊಳ್ಳಬೇಕು. ಸೋಲು-ಗೆಲವುನ್ನದೇ ಸಮನಾಗಿ ಸ್ವೀಕರಿಸಬೇಕು ಎಂದರು.
ಸAಸ್ಥೆ ಕಾರ್ಯದರ್ಶಿ ದ್ಯಾಮಣ್ಣ ಗೊಂದಿ ಮಾತನಾಡಿದರು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂದಮ್ಮ ಬಳಿಗಾರ್ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯ ಪೊಲೀಸ್ ಠಾಣೆಯ ಎಎಸ್ಐ ಮಹಾಂತೇಶ ತಮಣ್ಣನವರ್, ಹಿರಿಯ ಮುಖಂಡ ಬುಡ್ಡಪ್ಪ ಹಳ್ಳಿ, ರುದ್ರಪ್ಪ ಕೊಳಜಿ, ಸಿದ್ದಪ್ಪ ತುಪ್ಪದ್, ಸುವರ್ಣಮ್ಮ, ಪ್ರಮುಖರಾದ ದ್ಯಾಮಣ್ಣ ಬಡಿಗೇರ್, ಮುತ್ತಣ್ಣ ಹೊಸಮನಿ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಇನ್ನಿತರರು ಇದ್ದರು.