
ಶ್ರೀ ಕೃಷ್ಣ ಜಗತ್ ವ್ಯಾಪಿ ಶಾಂತಿ ಪ್ರಿಯ : ಎ.ಗಾದಿಲಿಂಗಪ್ಪ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 26- ಶ್ರೀ ಕೃಷ್ಣ ಪರಮಾತ್ಮ ನ ಜನ್ಮದಿನ ನಮ್ಮ ಭಾರತದ ಸಂಸ್ಕೃತಿಯಾಗಿದೆ ನಮ್ಮ ದೇಶದಲ್ಲಿ ವರ್ಷವಿಡಿ ಹಬ್ಬಗಳ ಉತ್ಸವ ಆಚರಣೆಗಳು ಇರುತ್ತವೆ ಅದಕ್ಕಾಗಿ ನಮ್ಮ ದೇಶವನ್ನು ಭರತದೇಶ ಮಹಾಭಾರತ್ ಎಂದು ಕರೆಯಲಾಗಿದೆ.
ಶ್ರೀ ಕೃಷ್ಣ ಎಂದರೆ ಸತ್ಯ ಸುಂದರ ಜಗತ್ ವ್ಯಾಪಿ ಶಾಂತಿ ಪ್ರಿಯ ಮತ್ತು ಸಂಸ್ಕಾರ ಇದ್ದಂತೆ ಸರ್ವರಿಗೂ ಶ್ರೀ ಕೃಷ್ಣ ಜನ್ಮೋತ್ಸವದ ಹಾರ್ದಿಕ ಶುಭಾಶಯಗಳು ಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಎ.ಗಾದಿಲಿಂಗಪ್ಪ ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಸಭಾಭವನದಲ್ಲಿ ಕರ್ನಾಟಕ ಸರ್ಕಾರ ತಾಲೂಕ ಆಡಳಿತ ತಾಲೂಕ ಪಂಚಾಯತ್ ನಗರ ಸಭೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹ ಭಾಗಿತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಭಾವಚಿತ್ರಕ್ಕೆ ಹೂಮಾಲೆ ಪುಷ್ಪ ಅರ್ಪಿಸಿ ಜ್ಯೋತಿ ಬೆಳಗಿಸಿ ನಮನ ಸಲ್ಲಿಸಿ ಸ್ಮರಿಸಲಾಯಿತು.
ನಗರದ ಜ್ಞಾನಭಾರತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರು ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಕಾರ್ಯದರ್ಶಿ ಡಾ ಹರೀಶ್ ಅವರು ಪ್ರಧಾನ ಭಾಷಣಕಾರರಾಗಿ ಆದದ್ದೆಲ್ಲ ಒಳ್ಳೆಯದಕ್ಕೆ ಆಗಿದೆ ಆಗುವುದೆಲ್ಲ ಒಳ್ಳೆಯದೇ ಆಗುತ್ತದೆ ಯಾದವ ಜನಾಂಗ ಹಿಂದುಳಿಯಬಾರದು ಶಿಕ್ಷಣ ಆರ್ಥಿಕ ರಾಜಕೀಯದಲ್ಲಿ ಮುಂದುವರೆಯಬೇಕು ಮುಖ್ಯ ವಾಹಿನಿಗೆ ಬರಬೇಕು ಸರ್ಕಾರದ ವಿವಿಧ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿವರಿಸಿ ಮಾತನಾಡುತ್ತಾ ಭಗವದ್ಗೀತೆಯ ಸಾರವನ್ನು ಉಪನ್ಯಾಸ ನೀಡಿದರು.
ಕರ್ನಾಟಕ ರಾಜ್ಯ ವೈದ್ಯರ ಸಂಘದ ರಾಜ್ಯ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರು ರಾಷ್ಟ್ರ ಪ್ರಶಸ್ತಿ ವಿಜೇತರು ಡಾ ಮಧುಸೂದನ್ ಕಾರಿಗನೂರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಾಕ್ಷರರಾಗಬೇಕು ಸಿರುಗುಪ್ಪ ನಗರದಲ್ಲಿ ಸಮಾಜದವರಿಂದ ಶ್ರೀಕೃಷ್ಣ ಮಂದಿರ ಹಾಗೂ ಸಮುದಾಯ ಭವನ್ ನಿರ್ಮಾಣಕ್ಕೆ ತಹಶೀಲ್ದಾರ್ ಎಚ್ ವಿಶ್ವನಾಥ ಅವರು ಸರ್ಕಾರದಿಂದ ಅನುದಾನ ನೀಡಿದರೆ ಮತ್ತು ಸಮಾಜದವರು ಸಹಕಾರ ನೀಡಿದರೆ ಬಳ್ಳಾರಿ ರಸ್ತೆಗೆ ಶ್ರೀಕೃಷ್ಣ ಮಂದಿರ ಹಾಗೂ ಸಮುದಾಯ ಭವನ್ ಕಟ್ಟಡ ನಿರ್ಮಿಸಲಾಗುವುದು ಎಂದು ವಿನಂತಿಸಿ ಮನವಿ ಮಾಡಿದರು.
ಬಿಸಿಎಂ ಅಧಿಕಾರಿ ಎ.ಗಾದಿಲಿಂಗಪ್ಪ ಅವರು ಮನವಿ ಸ್ವೀಕರಿಸಿ ಶ್ರೀ ಕೃಷ್ಣ ಮಂದಿರ ಹಾಗೂ ಸಮುದಾಯ ಭವನ್ ನಿರ್ಮಿಸಲು ತಾಲೂಕ ಆಡಳಿತದಿಂದ ಅನುದಾನ ಸರ್ಕಾರದಿಂದ ನೀಡಲು ಪ್ರಯತ್ನಿಸಲಾಗುವುದು ಎಂದರು.
ತಾಲೂಕ ಪಂಚಾಯತ್ ವ್ಯವಸ್ಥಾಪಕಿ ಸುಜಾತ ಕೋರಿ, ರಾಷ್ಟ್ರೀಯ ಸಾಕ್ಷರತಾ ಸದಸ್ಯ ಸಮಾಜ ಸುಧಾರಕ ಎ.ಅಬ್ದುಲ್ ನಬಿ, ತಾಲೂಕ ಕಚೇರಿಯ ಅಧಿಕಾರಿ ಶೇಖರ್, ನಗರ ಸಭೆಯ ಅಧಿಕಾರಿ ಅಮರೇಶ್, ಯಾದವ ಸಂಘದ ತಾಲೂಕ ಅಧ್ಯಕ್ಷ ಫಕೀರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಯಾದವ ಸಮಾಜದ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.