
ಶ್ರೀಗಳ ಜಯಂತೋತ್ಸವ ವೀರಶೈವ ಲಿಂಗಾಯತ ಸಮುದಾಯದ ಪಾದಯಾತ್ರೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 30- ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಹಾನಗಲ್ಲು ಕುಮಾರ ಶಿವಯೋಗಿಗಳ ೧೫೭ ಮತ್ತು ಸಂಗನಬಸವ ಸ್ವಾಮಿಗಳ ೮೬ನೇ ಜಯಂತೋತ್ಸವದ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದರ0ಗವಾಗಿ ನಿನ್ನೆ ಸಂಜೆ ಮಠದ ಶ್ರೀಗಳಾದ ಬಸವಲಿಂಗ ಶ್ರೀಗಳು ನೇತೃತ್ವದಲ್ಲಿ ನಡೆದ. ತಾಲೂಕಿನ ಶ್ರೀಧರಗಡ್ಡೆ ಗ್ರಾಮದಿಂದ ನಗರದ ಮಠದ ವರೆಗೆ ಹಮ್ಮಿಕೊಂಡಿದ ಉಭಯ ಶ್ರೀಗಳ ಭಾವಚಿತ್ರ ಸಾರೋಟದ ಮೆರವಣಿಗೆ ಮತ್ತು ಭಕ್ತರ ಪಾದಯಾತ್ರೆ ವೀರಶೈವ ಲಿಂಗಾಯತ ಸಮುದಾಯದ ಭಕ್ತ ಸಾಗರದಿಂದ ಗಮನ ಸೆಳೆಯಿತು.
ಅಲಂಕೃತ ಸಾರೋಟದ ವಾಹನದಲ್ಲಿ ಸಂಜೆ ಉಭಯ ಶ್ರೀಗಳ ಭಾಚಿತ್ರ ಮತ್ತು ವಿಗ್ರಹವನ್ನು ಇರಿಸಿಕೊಂಡು, ಮಹಿಳೆಯರ ಕುಂಬ ಕಳಸ, ಭಜನೆ ತಂಡಗಳು, ವೀರಗಾಸೆ ಮೊದಲಾದ ತಂಡಗಳ ಮೂಲಕ ಮೆರವಣಿಗೆ ವಿಶೇಷವಾಗಿ ಶ್ರೀದರಗಡ್ಡೆ, ಸೋಮಸಮುದ್ರ ಗ್ರಾಮಗಳ ಭಕ್ತರ ಪಾದಯಾತ್ರೆ ಬಳ್ಳಾರಿಯ ಮಠದ ಕಡೆ ಸಾಗಿ ಬಂತು.
ಮಧ್ಯದಲ್ಲಿ ಬಾಲ ಭಾರತಿ ಶಾಲೆ ಬಳಿ ಉಪಹಾರ ತಂಪು ಪಾನೀಯದ ವ್ಯವಸ್ಥೆ ಮಾಡಿತ್ತು. ಅಲ್ಲಿಂದ ಸಾಗಿದ ಪಾದಯಾತ್ರೆ ತಾಳೂರು ರಸ್ತೆಗೆ ಸಾಗಿ ಬರುತ್ತುದ್ದಂತೆ ನಗರದ ಭಕ್ತ ಸಮೂಹವೂ ಸೇರಿ ವೀರಶೈವ ಲಿಂಗಾಯತ ಸಮುದಾಯದಿಂದ ನಡೆದ ಇತ್ತೀಚಿನ ವರ್ಷಗಳಲ್ಲಿಯೇ ಬೃಹತ್ ಮೆರವಣಿಗೆಯಾಯಿತು.
ವೀರಶೈವ ಧರ್ಮದ ಘೋಷಣೆ ಕೂಗುತ್ತ, ಸಮಾಳದ ನಾದಕ್ಕೆ ಹೆಜ್ಜೆಹಾಕುತ್ತ ಯುವ ಭಕ್ತ ಸಮೂಹ ಪಾದಯಾತ್ರೆಯಲ್ಲಿ ದುರ್ಗಮ್ಮ ದೇವಸ್ಥಾನ, ಗಡಗಿ ಚೆನ್ನಪ್ಪ ಸರ್ಕಲ್, ಬೆಂಗಳೂರು ರಸ್ತೆ, ತೇರು ಬೀದಿ ಮೂಲಕ ಮಠಕ್ಕೆ ಸಾಗಿಬಂತು.
ನಂತರ ವೇದಿಕೆ ಕಾರ್ಯಕ್ರಮ ಪ್ರಸಾದ ವಿತರಣೆ ನಡೆಯಿತು.
ಶ್ರೀಗಳು, ವಿವಿಧ ಶಾಖಾ ಮಠಾಧೀಶರು, ವೀ.ವಿ.ಸಂಘದ ಸದಸ್ಯರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಸದಸ್ಯರು, ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.