ಮೂವರು ಬಾಣಂತಿಯರ ಸಾವಿಗೆ ಕಾರಣವಾದ ವೈದ್ಯರ ಮೇಲೆ ಕ್ರಮ ಕೈಗೊಳ್ಳಿ : ಶ್ರೀನಿವಾಸ್ ಬಂಡಾರಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 22- ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗಿ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಮೂವರು ಜನಬಾಣಂತಿಯರ ಕುಟುಂಬಗಳಿಗೆ ಸರ್ಕಾರವತಿಯಿಂದ ೧೦ ಲಕ್ಷ ರೂಪಾಯಿಗಳ ಪರಿಹಾರ ಮತ್ತು ಆ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಕೆಲಸವನ್ನು ನೀಡಬೇಕು ಹಾಗೂ ನಿರ್ಲಕ್ಷ್ಯವಹಿಸಿದ ವೈದ್ಯಾಧಿಕಾರಿಗಳ ವಿರುದ್ಧಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಶ್ರೀನಿವಾಸ ಭಂಢಾರಿ ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಹೆರಿಗೆಗೆಂದು ದಾಖಲಾದ ಒಟ್ಟು ೯ ಬಾಣಂತಿಯರ ಪೈಕಿ ಬಳ್ಳಾರಿ ಗ್ರಾಮಾಂತರ ಮೋಕ ಗ್ರಾಮದ, ನಂದಿನಿ ೨೪ ವರ್ಷ, ಬಸರಕೋಡು ಗ್ರಾಮದ ಲಲಿತಮ್ಮ ೨೬ ವರ್ಷ ಹಾಗೂ ರೋಜಾ ೧೯ ವರ್ಷದ ಮೂರು ಜನ ಬಾಣಂತಿಯರು ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಈ ವಿಚಾರದಲ್ಲಿ ವೈದ್ಯರು ನಿರ್ಲಕ್ಷ್ಯತನ ತೋರಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಹಾಗೂ ಶಸ್ತ್ರ ಚಿಕಿತ್ಸೆಗೆ ಸಂಬ0ಧಿಸಿದ0ತೆ ಸೂಕ್ತ ವ್ಯವಸ್ಥಿತವಾದ ವೈದ್ಯಕೀಯ ಪರಿಕರಗಳು ಜಿಲ್ಲಾ ಆಸ್ಪತ್ರೆಯಲ್ಲಿ ಇಲ್ಲವೆಂದು ಮೆಲ್ನೋಟಕ್ಕೆ ನಮಗೆ ಕಂಡುಬ0ದಿರುತ್ತದೆ ಆದ್ದರಿಂದ ಜಿಲ್ಲಾ ವೈದ್ಯಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಹಾಗೂ ಮೃತಪಟ್ಟ ಬಾಣಂತಿಯರ ವಿಚಾರದಲ್ಲಿ ವೈದ್ಯರ ನಿರ್ಲಕ್ಷ್ಯತನದಿಂದ ಮೃತಪಟ್ಟಿದ್ದು ಬಾಣಂತಿ ಮಹಿಳೆಯರ ನೊಂದ ಮೃತಕುಟುಂಬಗಳಿಗೆ ಸರ್ಕಾರದ ವತಿಯಿಂದ ಕುಟುಂಬದಲ್ಲೊಬ್ಬರಿಗೆ ಸರ್ಕಾರಿ ನೌಕರಿ ಹಾಗೂ ತಲಾ ೧೦ಲಕ್ಷ ರುಪಾಯಿಗಳನ್ನುಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಅಂದು ಹೆರಿಗ ಎಂದು ದಾಖಲಾದ ಇನ್ನೂ ಇಬ್ಬರು ಮಹಿಳೆಯರು ಸಹ ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದಾರೆ ಇವರಿಗೆ ಸೂಕ್ತ ಚಿಕಿತ್ಸೆನೀಡಬೇಕು ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯಾಗಿ ನಿರ್ಲಕ್ಷ್ಯ ವಹಿಸಬಾರದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಡಾ.ಎನ್.ಮೂರ್ತಿ ಬಣದ ಬಳ್ಳಾರಿ ಜಿಲ್ಲಾಘಟಕದಿಂದ ಜಿಲ್ಲಾಧಿಕಾರಿಗಳಲ್ಲಿ ಮನವಿ ಪತ್ರವನ್ನು ಸಲ್ಲಿಸಿ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಭಂಡಾರಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಹಲವಾರು ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!