
ದಲಿತ ಯುವಕನ ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಜಾರಿಗೆ ಎಸ್ಎಸ್ ಡಿ ಒತ್ತಾಯ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 23- ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ದಲಿತ ಯುವಕನ ಕೊಲೆ ಮಾಡಿದ ಕ್ಷೌರಿಕನ ಆಸ್ತಿಗಳನ್ನು ಮುಟ್ಟುಗೊಲು ಹಾಕಿಕೊಂಡು ಆತನನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಮತ್ತು ಕಾನೂನಿನ ಪ್ರಕಾರ ಅವನನ್ನು ಕಠಿಣ ಶಿಕ್ಷೆಗೆ ಗಿರಿ ಪಡಿಸಬೇಕು ಸಮತಾ ಸೈನಿಕ ದಳ ಗುಲ್ಬರ್ಗ ವಿಭಾಗೀಯ ಕಾರ್ಯಧ್ಯಕ್ಷ ಕೆ ಪೃಥ್ವಿರಾಜ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ಗೃಹ ಮಂತ್ರಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ದೇಶವು ಸ್ವತಂತ್ರವಾಗಿ 78 ವರ್ಷವಾದರೂ ಅಸ್ಪೃಶ್ಯತೆ ನಿರ್ಮೂಲನೆ ಆಗಿರುವುದಿಲ್ಲ ಎಂಬುದು ಈ ಕೃತ್ಯದಿಂದ ಕಂಡುಬರುತ್ತದೆ. ಹೀಗೆ ಪದೇ ಪದೇ ದೇಶದಲ್ಲಿ ಮತ್ತು ರಾಜ್ಯದಲ್ಲಿ ದಲಿತರ ಮೇಲೆ ಹಲ್ಲೆಗಳು ಆಗುತ್ತಿವೆ ಮತ್ತು ಕೊಲೆಗಳು ನಡೆಯುತ್ತಿವೆ ಇಂಥ ಘಟನೆಗಳು ಮರುಕಳಿಸದಂತೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳು ಹಲ್ಲೇಕೋರರ ಮತ್ತು ಕೊಲೆಗಡುಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಮ್ಮ ಸಂಘಟನೆ ವತಿಯಿಂದ ಆಗ್ರಹಿಸುತ್ತಿದ್ದೇವೆ ಎಂದರು.
ತಂಗನಾಳ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಮೃತಪಟ್ಟ ಕುಟುಂಬದ ಪತ್ನಿ, ಮಕ್ಕಳು ಹಾಗೂ ಅವರ ತಂದೆ ತಾಯಿಯಂದಿರು ಅನಾಥವಾಗಿದ್ದಾರೆ ಆದುದರಿಂದ ಮೃತರ ಕ ಕುಟುಂಬಕ್ಕೆ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡಬೇಕು ಕಾನೂನು ಸೇವೆಗಳ ಪ್ರಕಾರದಿಂದ 50 ಲಕ್ಷಗಳ ಮರಣ ಪರಿಹಾರ ಧನವನ್ನು ಮಂಜೂರು ಮಾಡಬೇಕು ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಪರಿಹಾರ ನಿಧಿಯಿಂದ ಕೂಡ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಒಂದು ವೇಳೆ ವಿಳಂಬವಾದರೆ ನಮ್ಮ ಸಂಘಟನೆಯ ವತಿಯಿಂದ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟವನ್ನು ತೀವ್ರ ಗೊಳಿಸಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಬಳ್ಳಾರಿ ಜಿಲ್ಲಾಧ್ಯಕ್ಷ ಮಾರುತಿ ಬಿಸಿ, ಸುಧೀರ್ ವೆಂಕಟೇಶ್, ಅಂಬರೀಶ್, ಜಾನ್ ಪಾಲ್ ಶ್ರೀನಿವಾಸ್ ಸೇರಿದಂತೆ ಸಮಿತಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.