
ರಸ್ತೆ ಮಧ್ಯದಲ್ಲಿ ಅಡ್ಡನಿಂತು ಗಣೇಶನ ಪಟ್ಟಿ ಸಂಗ್ರಹ ಅಪಾಯಕಾರಿ
ಕರುನಾಡ ಬೆಳಗು ಸುದ್ದಿ
ತಾವರಗೇರಾ, 28- ಗಣೇಶನ ಹಬ್ಬ ಹತ್ತಿರ ಆಗುತ್ತಿದ್ದಂತೆ ಪಟ್ಟಣದ ಎಲ್ಲ ಮುಖ್ಯ ರಸ್ತೆಗಳಲ್ಲಿ ಯುವಕರು ರಸ್ತೆ ಮಧ್ಯ ದಲ್ಲಿ ನಿಂತು, ಗ್ರಾಮದ ಯುವಕರು, ಶಾಲಾ ಮಕ್ಕಳು ಗಣೇಶನ ಪ್ರತಿಷ್ಟಾಪನೆಗೆ ಹಣ ಸಗ್ರಹಿಸುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ.
ತಾವರಗೇರಾ ಪಟ್ಟಣದಿದಂದ ಕುಷ್ಟಗಿ ಸಂಪರ್ಕ ರಸ್ತೆ, ನವಲಹಳ್ಳಿ, ಹಂಚಿನಾಳ, ಹಿರೆಮನ್ನಪೂರ, ಮುದಗಲ್ಲ ರಸ್ತೆಯಲ್ಲಿ ಕಿಲಾರಟ್ಟಿ , ಕಿಲಾರಟ್ಟಿ ತಾಂಡಾಗಳಲ್ಲಿ ತಾವರಗೇರಾ ಪಟ್ಟಣ ಸೇರಿದಂತೆ ಇಂತಹ ದೃಶ್ಯಗಳು ಕಂಡುಬರುತ್ತಿವೆ. ಇದರಿಂದ ರಸ್ತೆಗಳಲ್ಲಿ ಓಡಾಡುವ ವಾಹನ ಚಾಲಕರಿಗೆ ಬಹಳ ತೊಂದರೆ ಉಂಟಾಗುತ್ತಿದೆ, ವಾಹನ ವೆಗವಾಗಿ ಚೆಲಿಸುತ್ತಿದ್ದಾಗ ಯುವಕರು ಮಕ್ಕಳು ರಸ್ತೆಗೆ ಅಡ್ಡ ಓಡಿ ಬಂದು ದೇಣಿಗೆ ಕೇಳುತ್ತಾರೆ, ವಾಹನ ಸಂಚರಿಸುವಾಗ ಆಯ ತಪ್ಪದರೆ ಅಥವಾ ಬ್ರೆಕ್ ಫೆಲಾದರೆ ಅನಾಹೂತ, ಅಫಘಾತ ಸಂಬವಿಸು ಸಾದ್ಯತೆ ಇರುತ್ತದೆ.
ಆದ್ದರಿಂದ ಸಂಬಂದ ಪಟ್ಟ ಪೋಲಿಸ ಇಲಾಖೆ ಹಾಗು ಇಲಾಖೆ ಅಧಿಕಾರಿಗಳು ಇಂತಹ ದೇಣಿಗೆ ಸಂಗ್ರಹ ಸ್ಥಳಗಳನ್ನು ಗುರುತಿಸಿ ಚಾಲಕರಿಗೆ ಆಗುವ ತೊಂದರೆ ಹಾಗು ಅಫಘಾತಗಳನ್ನು ತಪ್ಪಿಸಲು ಮುಂದಾಗ ಬೇಕೆಂದು ಸಾರ್ವಜನಿಕರು ವಿನಂತಿಸಿಕೊಂಡಿದ್ದಾರೆ.