ಬಯಲಾಟ ಕಲಾವಿದ ರಾಜಶೇಖರ ದೊಡ್ಡಮನಿಗೆ
ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೩- ನಗರದ ಶ್ರೀ ಬಸವೇಶ್ವರ ನಗರದ ಹಿರಿಯ ಬಯಲಾಟ ಕಲಾವಿದ ರಾಜಶೇಖರ ದೊಡ್ಡಮನಿ ಅವರಿಗೆ ೨೦೨೪ – ೨೫ ನೇ ಸಾಲಿನ ಪ್ರಶಸ್ತಿ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ಲಭಿಸಿದೆ.
ಕೊಪ್ಪಳ ನಗರದಲ್ಲಿ ಮಾದಿಗ ಸಮಾಜದಿಂದ ಶ್ರೀ ಸಂಪೂರ್ಣ ರಾಮಾಯಣ ಬಯಲಾಟ ಸೇರಿದಂತೆ ಇತರ( ದೊಡ್ಡಟ) ದ ಹಿರಿಯ ಕಲಾವಿದರು ಮತ್ತು ಕಲಾವಿದರಿಗೆ ಮಾರ್ಗದರ್ಶನ ಮಾಡುವ ರಾಜಶೇಖರ ದೊಡ್ಡಮನಿ ಅವರಿಗೆ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಇವರಿಂದ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ೨೦೨೪ – ೨೫ ನೇ ಸಾಲಿನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಅಭಿನಂದನೆ : ಪ್ರಶಸ್ತಿ ಪುರಸ್ಕೃತರಿಗೆ ಕೊಪ್ಪಳದ ಸಂಪೂರ್ಣ ರಾಮಾಯಣ ದೊಡ್ಡಟದ ಕಲಾ ತಂಡ ಸೇರಿದಂತೆ ಕಲಾವಿದರು ಅಬಿನಂದಿಸಿದ್ದಾರೆ.