ವೀಣಾ ಪಾಟೀಲ್

ನಾಗರ ಪಂಚಮಿಯ ಕಥೆ : ವೀಣಾ ಪಾಟೀಲ್

ಕರುನಾಡ ಬೆಳಗು ಸುದ್ದಿ

ಪಾಂಡವರಲ್ಲಿ ಒಬ್ಬರಾದ ಅರ್ಜುನನ ಮಗ ಅಭಿಮನ್ಯು ವಿನ ಪುತ್ರ ಪರೀಕ್ಷಿತ ಮಹಾರಾಜ. ಈ ಪರೀಕ್ಷಿತ ಮಹಾರಾಜನಿಗೆ ಜ್ಯೋತಿಷಿಗಳು ತಿಳಿಸಿದಂತೆ ರಕ್ಷಕ ಎಂಬ ಸರ್ಪವು ಕಚ್ಚಿ ಆತನ ಸಾವಾಯಿತು. ಇದರಿಂದ ದುಃಖಕ್ಕೀ ಡಾದ ಪರೀಕ್ಷಿತ ಮಹಾರಾಜನ ಪುತ್ರ ಜನಮೇಜಯ ಮಹಾರಾಜನು ಹಾವುಗಳನ್ನೇ ಸರ್ವ ನಾಶ ಮಾಡುವೆನೆಂದು ಪಣತೊಟ್ಟನು.

ಹಾವುಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಆತನು ಸರ್ಪ ಯಜ್ಞ ಆರಂಭಿಸಿದನು. ಯಜ್ಞವನ್ನು ನೆರವೇರಿಸುತ್ತಿದ್ದ ಮುನಿಗಳು ನಾಗಗಳ ಹೆಸರನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಎಲ್ಲಾ ಕಡೆಯಿಂದಲೂ ಸರ್ವಗಳು ತಾನೇ ತಾನಾಗಿ ಆತನ ಯಜ್ಞ ಕುಂಡಕ್ಕೆ ಬಂದು ಆಹುತಿಯಾಗತೊಡಗಿದವು..

ತಪೋನಿರತನಾಗಿದ್ದ ಆಸ್ತಿಕ ಎಂಬ ಮುನಿವರನಿಗೆ ಆತನ ಶಿಷ್ಯರು ಈ ವಿಷಯವನ್ನು ಅರುಹಿದರು. ಹಾವುಗಳು ಮನುಷ್ಯನಿಗೆ ಶತ್ರುಗಳಲ್ಲ ನಿರುಪದ್ರವ ಜೀವಿಗಳು.. ಅವುಗಳ ಕುಲ ವಿನಾಶ ಮಾಡುವುದರಿಂದ ಸಾಕಷ್ಟು ಅನಾಹುತಗಳಾಗುತ್ತವೆ ಎಂಬುದನ್ನು ಮನಗಂಡ ಆಸ್ತಿಕ ಮುನಿಯ ಯಜ್ಞ ನಡೆಯುತ್ತಿರುವ ಸ್ಥಳಕ್ಕೆ ಧಾವಿಸಿ ಬಂದನು. ಮುನಿಗಳ ಮೇಲೆ ಅಪಾರ ಭಯ ಭಕ್ತಿಯನ್ನು ಹೊಂದಿದ್ದ ಜನಮೇಜಯ ಮಹಾರಾಜನು ಮುನಿಗಳಿಗೆ ನಮಸ್ಕರಿಸಿ ಸೂಕ್ತ ಉಪಚಾರ ನೆರವೇರಿಸಿದನು. ನಂತರ ಮುನಿಗಳ ಆಗಮನದ ಕಾರಣವನ್ನು ಕೇಳಲು ಆಸ್ತಿಕ ಮುನಿಯ ಆತನಿಗೆ ಸರ್ಪ ಯಜ್ಞ ಮಾಡುವುದರಿಂದ ಉಂಟಾಗುವ ಅನಾಹುತಗಳನ್ನು ತಿಳಿ ಹೇಳಿ ಯಜ್ಞವನ್ನು ನಿಲ್ಲಿಸಲು ಕೇಳಿಕೊಂಡನು ಋಷಿ ಮುನಿಗಳ ಮೇಲೆ ಅಪಾರ ಗೌರವವನ್ನು ಹೊಂದಿದ್ದ ಜನಮೇಜಯರಾಜನು ಋಷಿಗಳ ಮಾತಿನಂತೆ ತನ್ನ ಯಜ್ಞವನ್ನು ನಿಲ್ಲಿಸಿದನು.

ಇನ್ನೂ ಹಲವಾರು ಸರ್ಪಗಳು ಯಜ್ಞದ ಉರಿಯಲ್ಲಿ ಬೆಂದು ಹೋಗುತ್ತಿದ್ದವು. ಆಗ ಆಸ್ತಿಕನು ಹಾವುಗಳನ್ನು ಯಜ್ಞ ಕುಂಡದಿಂದ ಹೊರತೆಗೆದು ಅವುಗಳ ಮೇಲೆ ಪನ್ನೀರಿನ ಮತ್ತು ಹಾಲಿನ ಸಿಂಚನ ಮಾಡಿದನು.ಗುರುವನ್ನು ಅನುಕರಿಸಿದ ಆತನ ಸಹಚರರು ಉಳಿದೆಲ್ಲ ಹಾವುಗಳ ತಾಪ ಶಮನ ಮಾಡಲು ಅವುಗಳ ಮೇಲೆ ತಮ್ಮ ಗುರುಗಳನ್ನು ಅನುಸರಿಸಿ ತೆಂಗಿನ ತಿಳಿನೀರು ಮತ್ತು ಹಾಲಿನ ಅಭಿಷೇಕ ಮಾಡಿದರು. ಆ ದಿನ ಶ್ರಾವಣ ಮಾಸದ ಪಂಚಮಿಯ ದಿನವಾಗಿತ್ತು. ಅಂದಿನಿಂದ ಪ್ರತಿ ವರ್ಷವೂ ನಾಗಗಳನ್ನು ರಕ್ಷಿಸುವ ಸಲುವಾಗಿ, ನಾಗ ಸಂತತಿಯು ಮನುಷ್ಯ ಕುಲಕ್ಕೆ ಮಾಡುವ ಉಪಕಾರ ಸ್ಮರಣೆಯ ದಿನವಾಗಿ ನಾಗರ ಪಂಚಮಿಯ ಹಬ್ಬವನ್ನು ಆಚರಿಸಲಾಗುತ್ತದೆ.

ವೀಣಾ ಹೇಮಂತ್ ಗೌಡ ಪಾಟೀಲ್

ಮುಂಡರಗಿ, ಗದಗ್

Leave a Reply

Your email address will not be published. Required fields are marked *

error: Content is protected !!