9

ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಶಾಂತಿಸಭೆ : ಕಾನೂನು ಉಲ್ಲಂಘಿಸಿದರೆ ನಿರ್ಧಾಕ್ಷಿಣ್ಯ ಕ್ರಮ

ಕರುನಾಡ ಬೆಳಗು ಸುದ್ದಿ

ಮರಿಯಮ್ಮನಹಳ್ಳಿ, 28- ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತವಾಗಿ ಪಟ್ಟಣದ ಪೊಲೀಸ್ ಠಾಣೆ ವತಿಯಿಂದ ಠಾಣಾ ರಣದಲ್ಲಿ ಗಣೇಶ ಮೂರ್ತಿ ಕೂರಿಸುವವರನ್ನು ಹಾಗೂ ಪಕ್ಕದ ಗ್ರಾಮಗಳ ಸಾರ್ವಜನಿಕರನ್ನು ಶಾಂತಿ ಸಭೆಗೆ ಆಹ್ವಾನಿಸಲಾಗಿತ್ತು.

ಸಭೆಯ ಅಧ್ಯಕ್ಷತೆ ವಹಿಸಿಡ ಡಿಎಸ್‌ಪಿ ಮಲ್ಲೇಶಪ್ಪ ಮಲ್ಲಾಪುರ ಮಾತನಾಡಿ, ಗಣಪತಿ ಕೂರಿಸುವವರು ಸಾರ್ವಜನಿಕ ರಸ್ತೆಯಲ್ಲಿಡಬಾರದು, ಆಯೋಜಕರು ೨೪*೭ ಕಾವಲಿನಲ್ಲಿರಬೇಕು, ಹಬ್ಬವನ್ನು ಭಕ್ತಿಯಿಂದ ಆಚರಣೆ ಮಾಡಬೇಕು, ವಿದ್ಯುತ್ ಅವಘಡ ಜರುಗದಂತೆ ನೋಡಿಕೊಳ್ಳಬೇಕು, ಡಿಜೆ ಬಳಸಲು ಸುಪ್ರೀಮ್ ಕೋರ್ಟ್ ನಿಷೇದ ಹೇರಿದೆ ಹಿರಿಯ ಅಧಿಕಾರಿಗಳ ಆದೇಶ ನೋಡಿಕೊಂಡು ಅನುಮತಿ ಕೊಡಲಾಗುವುದು, ಗಣಪತಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಸಂಯಮವಾಗಿ ಆಚರಿಸಿ ಯಾವುದೇ ಅವಘಡ, ಅಪಾಯ ಜರುಗದಂತೆ, ಗಲಬೆಗಳಾಗದಂತೆ ಎಚ್ಚರ ವಹಿಸಿ ಪೊಲೀಸ್ ಇಲಾಖೆಯ ನಿಯಮಗಳನ್ನು ಪಾಲಿಸಿಕೊಂಡು ಹಬ್ಬವನ್ನು ಶಾಂತಿಯಿಂದ ಆಚರಿಸಿ ಎಂದು ಮನವಿ ಮಾಡಿದರು.

ಹಗರಿಬೊಮ್ಮನಹಳ್ಳಿ ವೃತ್ತ ಸಿಪಿಐ ವಿಕಾಸ್ ಲಮಾಣಿ ಮಾತನಾಡಿ, ಗಣಪತಿಯನ್ನು ೧,೩,೫ನೇ ತಾರೀಕಿನಂದು ವಿಸರ್ಜನೆ ಮಾಡಬೇಕು, ಗಣಪತಿ ಕೂರಿಸುವವರು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕು, ವಿಸರ್ಜಿಸುವ ಸ್ಥಳದಲ್ಲೂ ಇಲಾಖೆಯಿಂದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು, ಹಬ್ಬದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳನ್ನು ಜರಗದಂತೆ ಸಾರ್ವಜನಿಕರೆಲ್ಲರೂ ಸಹಕರಿಸಬೇಕು ಒಂದು ವೇಳೆ ಸಮಾಜದಲ್ಲಿ ಅಶಾಂತಿ ಉಂಟು ಮಾಡಿ ಗಲಭೆಗೆ ಕಾರಣರಾದವರ ಮೇಲೆ ನಿರ್ದಾಕ್ಷಿಣ್ಯವಾಗಿ ಅವರಮೇಲೆ ಮೊಕದ್ದಮೆ ದಾಖಲೆಸಿ ಕ್ರಮ ಕೈಗೊಳ್ಳಲಾಗುವುದು. ಹಬ್ಬದಲ್ಲಿ ಬಂಟಿAಗ್ಸ್ ಮತ್ತು ಬ್ಯಾನರ್ಸ್ ಹಾಕಬೇಕೆಂದರೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಯವರ ಅನುಮತಿ ಪಡೆಯಬೇಕಾಗಿರುವುದು ಖಾಡ್ಡಾಯವಾಗಿದೆ, ಸುಪ್ರೀಮ್ ಕೋರ್ಟ್ ಆದೇಶದಮೇರೆಗೆ ಡಿ.ಜಿ ಹಚ್ಚಲಿಕ್ಕೆ ಅವಕಾಶಇಲ್ಲ ಎಂದರು.

ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮನೇಶ್ ರಾಥೋಡ್ ಮಾತನಾಡಿ ಗಣಪತಿ ಕೂರಿಸುವವರು ಅನುಮತಿ ಪಡೆಯುವಾಗ ಮೆರವಣಿಗೆಯ ಮಾರ್ಗದ ಮಾಹಿತಿ ಕೊಡಬೇಕು, ಗಣೇಶ ಹಬ್ಬದ ಪ್ರಯುಕ್ತ ಯಾರಾದರೂ ದಾರಿಯಲ್ಲಿ ಚಂದಾ ವಸೂಲಿ ಮಾಡುವುದು ಖಾಡ್ಡಾಯವಾಗಿ ನಿಷೇಧಸಲಾಗಿದೆ, ಅಂತಹ ಪ್ರಕ್ರಿಯೆ ಕಂಡುಬAದರೆ ಕಾನೂನು ಕ್ರಮ ಜರುಗಿಸಲಾಗುವುದು ಮನೆಯಲ್ಲಿ ಕೂರಿಸುವವರಿಗೆ ಅನುಮತಿ ಬೇಕಾಗಿಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸುವವರಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕೇಕಾಗಿದೆ. ಕೂರಿಸುವ ಸ್ಥಳದಲ್ಲಿ ಇಸ್ಪೀಟ್, ಜೂಜಾಟ ನಿಷೇದಿಸಲಾಗಿದೆ.

ಅಪ್ಪು ಬಾಯ್ಸ್, ಕಿಚ್ಚಾ ಬಾಯ್ಸ್ ತಂಡದವರು ಯಾವುದೇ ರೀತಿಯ ಗಲಬೆಗಳಲ್ಲಿ ತೊಡಗದಂತೆ ನಡೆದುಕೊಳ್ಳಬೇಕು, ಗಣಪತಿ ಮೆರವಣಿಗೆಯನ್ನು ರಾತ್ರಿ ೧೦.೦೦ ಗಂಟೆಯೊಳಗೆ ಮುಗಿಸಿ ವಿಸರ್ಜಿಸಬೇಕು, ಗಣೇಶನನ್ನು ಕೂರಿಸಲು ಬೇಕಾಗುವ ಅನುಮತಿಗಳನ್ನು ಒಂದೇ ಡೆಸ್ಕ್ ಅಲ್ಲಿ ತರಲಾಗಿದೆ ಹಾಗಾಗಿ ಆಯೋಜಕರು ಠಾಣೆಯಿಂದ ನಿಯಮಗಳ ಪ್ರಕಾರ ಎಲ್ಲಾ ಅನುಮತಿಗಳನ್ನು ಪಡೆಯಬಹು ದಾಗಿದೆ, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ಅಥವಾ ಕಾರಣವಾದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಿ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು, ಗಣಪತಿ ಹಾಗೂ ಈದ್ ಮಿಲಾದ್ ಹಬ್ಬವನ್ನು ಸುಸುತ್ರವಾಗಿ ಶಾಂತಿಯಿಂದ ಮಾಡಲು ಸಭಿಕರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಖಾಜಾ ಮೈನುದ್ದಿನ್, ಕೆಇಬಿ ಇಂಜಿನಿಯರ್ ಶ್ರೀನಿವಾಸ್ ಮತ್ತು ಸ್ಥಳೀಯ ರಾಘವೇಂದ್ರ ಶೆಟ್ರು, ಬುಡನ್ ಸಾಬ್, ಹಂದಿಬಂಡಿ ಸೋಮಣ್ಣ ಇತರರು ಹಬ್ಬದಲ್ಲಿ ಶಾಂತಿ ಕಾಪಾಡುವ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ರಾಘವೇಂದ್ರ, ಈರಣ್ಣ, ಕುಮಾರಸ್ವಾಮಿ, ಶಾರಪ್ಪ, ಮಂಜುನಾಥ, ಅಶೋಕ, ಎಲ್.ಹನುಮಂತ, ರವಿಕಿರಣ, ಸೋಮಣ್ಣ, ನಾಗರಾಜ, ಪರಶುರಾಮ, ದುರ್ಗಪ್ಪ, ವಿಶ್ವ, ಕೊಮಾರಪ್ಪ, ಅಂಜಿನಿ, ಪರಶುರಾಮ ಇತರ ಗ್ರಾಮಗಳಿಂದ ಬಂದಂತಹ ನಾಗರಿಕರು ಇದ್ದರು.

Leave a Reply

Your email address will not be published. Required fields are marked *

error: Content is protected !!