ವಿದ್ಯಾರ್ಥಿ ಹಿತಾಸಕ್ತಿ, ಉತ್ತಮ ಆಡಳಿತ ಮೇಟಿಯವರ ಕೊಡುಗೆ : ಕೆ.ವಿ.ಪ್ರಸಾದ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 31- ಕಾಲೇಜಿನ ಬೋಧಕರ, ಬೋಧಕೇತರರ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಗೆ ಅನುಗುಣವಾಗಿ ಉತ್ತಮ ಆಡಳಿತ ನಿರ್ವಹಿಸಿದ್ದು ಪ್ರೊ.ತಿಮ್ಮಾರಡ್ಡಿ ಮೇಟಿಯವರ ಕಾರ್ಯದಕ್ಷತೆಗೆ ಹಿಡಿದ ಕನ್ನಡಿ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವ ಕೆ.ವಿ.ಪ್ರಸಾದ್ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಒಳ ಆವರಣದಲ್ಲಿ ಬುಧವಾರ ಪ್ರೊ.ತಿಮ್ಮಾರಡ್ಡಿ ಮೇಟಿಯವರ ಸೇವಾನಿವೃತ್ತಿ ಪ್ರಯುಕ್ತ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಹಾಗೂ ಮೇಟಿಯವರ ಕುರಿತ ಅಪ್ಪಟ ಅಪರಂಜಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೊಪ್ಪಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪದವಿ ಮಹಾವಿದ್ಯಾಲಯಗಳಲ್ಲೇ ಅತ್ಯಧಿಕ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೊಂದಿದ ಕಾಲೇಜೇಂದರೆ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಡಳಿತದಲ್ಲಿ ಅತ್ಯಂತ ನಿಪುಣತೆ ಮತ್ತು ಚಾಣಾಕ್ಷತೆಯನ್ನು ಪಡೆದಿದ್ದರು ಕೊಪ್ಪಳ ವಿಶ್ವವಿದ್ಯಾಲಯದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದರು ಎಂದರು.
ವಿಶ್ವವಿದ್ಯಾಲಯ ಮತ್ತು ಆಡಳಿತ ವಿಷಯಕ್ಕೆ ಸಂಬಂಧಪಟ್ಟಂತೆ ಇವರು ನಮಗೆ ಉತ್ತಮ ಸಲಹೆ ಸೂಚನೆ ಮಾರ್ಗದರ್ಶನ ನೀಡುತ್ತಿದ್ದರು. ಇಂಥಹ ಅಪಾರ ಅನುಭವಿ ತಿಮ್ಮಾರಡ್ಡಿ ಮೇಟಿ ಅವರು ವಯೋಸಹಜ ನಿವೃತ್ತಿಯನ್ನು ಹೊಂದುತ್ತಿರುವ ಈ ಸಂದರ್ಭದಲ್ಲಿ ಅವರ ಬದುಕಿನ ಸಾಧನೆಯ ಕುರಿತು ಅಭಿನಂದನ ಗ್ರಂಥವನ್ನು ಹೊರತರುತ್ತಿರುವದು ಅತ್ಯಂತ ಸಂತಸವಾಗಿದೆ. ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಬಿ.ಕೆ.ರವಿ ಅವರು ಅನ್ಯ ಕಾರ್ಯ ನಿಮಿತ್ತ ಹೋಗಿರುವುದರಿಂದ ಅವರ ಪರವಾಗಿ ಕುಲ ಸಚಿವರಾಗಿ ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದು ನನಗೆ ಅತೀವ ಸಂತಸ ತಂದಿದೆ ಎಂದು ತಿಳಿಸಿದರು.
ಅಪ್ಪಟ ಅಪರಂಜಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಹಗರಿಬೊಮನಹಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ವೆಂಕಟೇಶ, ದೇಶಿಯ ಸೊಗಡಿನಿಂದ ಬಂದ ಪ್ರತಿಭೆ ತಿಮ್ಮಾರಡ್ಡಿ ಮೇಟಿ. ಅಪ್ಪಟ ಗ್ರಾಮೀಣ ಕುಟುಂಬದಲ್ಲಿ ಬೆಳೆದು ಬಂದ ಇವರು ಬದುಕಿನಲ್ಲಿ ಬಡತನ, ಅನೇಕ ಕಷ್ಟಕಾರ್ಪಣ್ಯಗಳು, ನೋವು- ನಲಿವುಗಳೆಲ್ಲವನ್ನು ಸಮಾನವಾಗಿ ಹಂಚಿಕೊಂಡಂತವರು ಎಂದು ಶ್ಲಾಘಿಸಿದರು.
ಆ ಕಾರಣಕ್ಕಾಗಿಯೇ ಚೆನ್ನಾಗಿ ಓದಿಕೊಂಡು ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾಗಿ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಕೊಪ್ಪಳದಂತ ಈ ಬೃಹತ್ ವಿದ್ಯಾರ್ಥಿಗಳಿರುವ ಕಾಲೇಜಿನ ಪ್ರಾಂಶುಪಾಲರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಎಲ್ಲರೊಂದಿಗೆ ಪ್ರೀತಿಯಿಂದ ಬೆರೆತುಕೊಳ್ಳುವ ಇವರ ಮನಸ್ಸಿನಲ್ಲಿ ಯಾವುದೇ ಬಗೆಯ ನಂಜಿನ ಗುಣ ಇರಲಿಲ್ಲ. ಸದಾ ಶಿಸ್ತು ಬದ್ಧ ಜೀವನ ಇವರದಾಗಿತ್ತು. ಅನೇಕ ಯುವ ಪ್ರಾಧ್ಯಾಪಕರಿಗೆ ಇವರು ಪ್ರೇರಣೆಯಾಗಿದ್ದಾರೆ. ಇವರ ಸಾಧನೆಯ ನೋಟವನ್ನು ಪರಿಚಯಿಸುವ ದೃಷ್ಟಿಯಿಂದ ಅವರ ಕುರಿತಾಗಿ ಅಭಿನಂದನ ಗ್ರಂಥವನ್ನು ಹೊರ ತರುತ್ತಿರುವುದು ಅತ್ಯಂತ ಶ್ಲಾಘನೀಯವಾದುದು ಮತ್ತು ಆರ್ಹ ವ್ಯಕ್ತಿಗೆ ಸಂದ ಗೌರವವಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಡಾ. ಗವಿಸಿದ್ದಪ್ಪ ಮುತ್ತಾಳ, ಉಮೇಶ್ ಅಂಗಡಿ, ಮಹಾಂತೇಶ್ ಪಾಟೀಲ್ ಮೈನಳ್ಳಿ, ಕೇಶವರಡ್ಡಿ ಮಾದಿನೂರ್, ಬಸವರಡ್ಡಿ ಹಳ್ಳಿಕೇರಿ, ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವ್ಯವಸ್ಥಾಪಕ ಮಹಾಂತೇಶ್, ಸೋಮರಡ್ಡಿ ಅಳವಂಡಿ, . ಶ್ರೀಮತಿ ಸರೋಜಾ ಮೇಟಿ, ಶಂಕರಗೌಡ ಹಿರೇಗೌಡ್ರ, ಡಾಕ್ಟರ್ ಹನುಮಂತ ಕಲ್ಮನಿ, ವಿನೋದ್ ಚಂದ್ ಪೀಟರ್, ಪ್ರಕಾಶಗೌಡ , ಮಂಜುನಾಥ್ ಗೊಂಡವಾಳ, ಮಂಜುನಾಥ್ ಆರೆಂಟನೂರ,
ಮಾರುತೇಶ್, ಪ್ರಕಾಶ್ ಬಳ್ಳಾರಿ, ಶಿವಬಸಪ್ಪ ಮಸ್ಕಿ, ಡಾ.ಕನಕೇಶ ಮೂರ್ತಿ,ಎಂ.ಕೆ.ಇಬ್ರಾಹಿಂ ಮತ್ತಿತರರು ಇದ್ದರು.
ಬಸವರಾಜ ಕರುಗಲ್ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶಗೌಡ ಎಸ್.ಯು. ಆಶಯ ನುಡಿಗಳನ್ನಾಡಿದರು. ಚೈತ್ರಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಗೀತಾ ಬನ್ನಿಕೊಪ್ಪ ಸ್ವಾಗತಿಸಿದರು. ಮಂಜುನಾಥ ಆರೆಂಟನೂರ, ಮಹಾಂತೇಶ ನೆಲಾಗಣಿ ನಿರೂಪಿಸಿದರು.