
ಕ್ಯೂಆರ್‌ಕೋಡ್ ಬಳಸಿ ಬೇಡಿಕೆ ಸಲ್ಲಿಸಿ : ಸೋಮನಾಥ ಗೌಡರ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ನರೇಗಾ ಯೋಜನೆಯಡಿ ಕಾಮಗಾರಿಗಳ ಬೇಡಿಕೆ ಸಲ್ಲಿಸಲು ಆನ್‌ಲೈನ್‌ನಲ್ಲಿ ಕ್ಯೂಆರ್‌ಕೋಡ್ ಬಳಸಿ ಬೇಡಿಕೆ ಸಲ್ಲಿಸಿ ಎಂದು ತಾ.ಪಂ ಐಇಸಿ ಸಂಯೋಜಕ ಸೋಮನಾಥ ಗೌಡರ್ ಹೇಳಿದರು.
ತಾಲೂಕಿನ ಚಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಳ್ಳೂರು ಕ್ಯಾಂಪ್ ನಲ್ಲಿ ಮಂಗಳವಾರದAದು ಆಯೋಜಿಸಲಾದ ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
2025-26ನೇ ಸಾಲಿನ ನರೇಗಾ ಯೋಜನೆಯ ಕಾರ್ಮಿಕ ಆಯವ್ಯಯ ತಯಾರಿಕೆಯ ಸಂಬ0ಧಿಸಿದ0ತೆ ಅಕ್ಟೋಬರ್-3 ರಿಂದ ನವೆಂಬರ್-30 ರವರೆಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ನಡಿಗೆ, ಸಬಲತೆಯಡೆಗೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ನರೇಗಾದಡಿ ಅರ್ಹ ಕುಟುಂಬಗಳಿಗೆ ವರ್ಷದಲ್ಲಿ 100 ದಿನ ಕೆಲಸ ಒದಗಿಸಲಾಗಿದ್ದು, ಪ್ರತಿ ದಿನಕ್ಕೆ 349 ರೂ. ಕೂಲಿ ಪಾವತಿಸಲಾಗುತ್ತಿದೆ ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಸಾರ್ವಜನಿಕರು ತಮಗೆ ಬೇಕಾದ ಕಾಮಗಾರಿಗಳನ್ನು ಕ್ಯೂ ಆರ್ ಕೋಡ್ ಬಳಸಿ ನೋಂದಣಿ ಮಾಡುವಂತೆ ತಿಳಿಸಿದರು.
ಗ್ರಾಮದ ಕಿರಾಣಿ ಅಂಗಡಿ, ಹಾಲಿನ ಕೇಂದ್ರ ಇನ್ನಿತರ ಸಾರ್ವಜನಿಕರ ಸ್ಥಳಗಳಲ್ಲಿ ಬೇಡಿಕೆ ಸಲ್ಲಿಸಲು ಕ್ಯೂ ಆರ್ ಕೋಡ್ ಮುದ್ರಣದ ಕರಪತ್ರ ಅಂಟಿಸಿ ಜಾಗೃತಿ ಮೂಡಿಸಿದರು. ಗ್ರಾಮದ ಮನೆ ಮನೆಗೆ ತೆರಳಿ ನರೇಗಾ ಮಾಹಿತಿಯುಳ್ಳ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಿ ಕಾಮಗಾರಿಗಳ ಬೇಡಿಕೆ ಸ್ವೀಕರಿಸಿದರು.
ಈ ವೇಳೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಹನುಮಂತಪ್ಪ ತಳವಾರ, ವೆಂಕಟೇಶ ಎಸ್, ಷಹನಾಜ್ ಬೇಗಂ, ಗ್ರಾಮಸ್ಥರಾದ ಅನಿಲ್ ಕುಮಾರ್, ರಾಘವೇಂದ್ರ, ಹರಿಕೃಷ್ಣ ಸೇರಿದಂತೆ ಇನ್ನಿತರರು ಇದ್ದರು.