
ಮಕ್ಕಳ ಮನಸ್ಥಿತಿ ಮತ್ತು ಚಟುವಟಿಕೆಗಳ ಆಧಾರಿತ ಬೋಧನೆ ನೀಡಿ : ಸುರೇಶ ವಿ.ಕುಲಕರ್ಣಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 9- ನಗರದ ಶ್ರೀ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ ಕೊಪ್ಪಳದಲ್ಲಿ ಶ್ರೀ.ಗ.ವಿ.ವ.ಟ್ರಸ್ಟಿನ ಶ್ರೀಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ.ಮತ್ತು ಅಲ್ಯುಮಿನಿ ಅಸೋಶಿಯನ್ ಸಹಯೋಗದಲ್ಲಿ “ಬೋಧನಾ ತಂತ್ರಗಳು ಹಾಗೂ ವರ್ಗಕೊಣೆಯ ನಿರ್ವಹಣೆ” ಕುರಿತು ನಾಡಿನ ಪ್ರಸಿದ್ದ ಶಿಕ್ಷಣ ತಜ್ಞರಾದ ಶ್ರೀಯುತ ಸುರೇಶ ವಿ.ಕುಲಕರ್ಣಿ ಇವರಿಂದ ವಿಶ್ವವಿದ್ಯಾಲಯ ಮಟ್ಟದ ಒಂದು ದಿನದ ಕಾರ್ಯಗಾರ ನಡೆಯಿತು .
ಸುರೇಶ ವಿ.ಕುಲಕರ್ಣಿ ಪ್ರಸ್ತುತ ದಿನಮಾನಗಳ ಪಾಠ ಬೋಧನೆಯಲ್ಲಿ ಮಕ್ಕಳ ಮನಸ್ಥಿತಿ ಮತ್ತು ಚಟುವಟಿಕೆಗಳ ಆಧಾರಿತ ಬೋಧನೆಗಳ ಕುರಿತು ಸವಿವರವಾಗಿ ವಿವರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಬಿ.ಕಂಬಾರ, ಐ.ಕ್ಯೂ.ಎ.ಸಿ.ಯ ಸಂಯೋಜಕರಾದ ಡಾ.ಕೆ.ಕವಿತಾ ಮಹಾವಿದ್ಯಾಲಯದ ಉಪನ್ಯಾಸಕರು, ಪ್ರಶಿಕ್ಷಣಾರ್ಥಿಗಳು ಬಳ್ಳಾರಿ ಹಾಗೂ ಕೊಪ್ಪಳ ಅಡಿಯಲ್ಲಿ ಬರುವ ವಿವಿದ ಬಿ.ಎಡ್ ಮಹಾವಿದಾಲಯದ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಸೇರಿ ೩೦೦ಕ್ಕು ಅಧಿಕ ಜನರು ಕಾರ್ಯಕ್ರಮದ ನಿರೂಪಣೆಯನ್ನು ಪ್ರಶಿಕ್ಷಣಾರ್ಥಿ ಅಂಭಿಕಾ, ವಂದನಾರ್ಪಣೆಯನ್ನು ಪ್ರಶಿಕ್ಷಣಾರ್ಥಿ ಸೌಮ್ಯರವರು ನಡೆಸಿಕೊಟ್ಟರು.