
ಜಾನಕಿ ಕಾರ್ಪ್ ಇಂಡಸ್ಟ್ರೀಸ್ ನಿಂದ ಸುತ್ತಮುತ್ತಲ ಹಳ್ಳಿಗಳು ಅಭಿವೃದ್ಧಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 30- ತಾಲೂಕಿನ ಸಿಡಿಗಿನಮಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಜಾನಕಿ ಕಾರ್ಪ್ ಕಾರ್ಖಾನೆಯಿಂದ ಆ ಪ್ರದೇಶದ ಸುತ್ತಮುತ್ತಲ ಹಳ್ಳಿಗಳಿಗೆ ಕೆಲವು ಮೂಲಭೂತ ಸೌಕರ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಿವೆ, ಯಾರೋ,ಇಬ್ಬರು ಮೂವರು ಕಿಡಿಗೇಡಿಗಳು ಸೇರಿಕೊಂಡು ಕಾರ್ಖಾನೆಯ ಅಧಿಕಾರಿಗಳಿಂದ ಹಣಕ್ಕೆ ಬೇಡಿಕೆ ಇಟ್ಟು ಅವರಿಂದ ಹಣ ಸಿಗದಿದ್ದಾಗ ಇಲ್ಲಸಲ್ಲದ, ಕಾರ್ಖಾನೆ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತ ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸಿ ಕಾರ್ಖಾನೆಯ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಸುಳ್ಳು ದೂರ ನೀಡಿರುತ್ತಾರೆ, ಅವರ ದೂರಿನಲ್ಲಿ ಯಾವುದೇ ನಂಬತಕ್ಕAತ ವಿಷಯ ಇರುವುದಿಲ್ಲ. ಕಾರಣ ಅವರ ದೂರಿಗೆ ಮಾನ್ಯತೆ ನೀಡಬಾರದು ಎಂದು ಹಗರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಂಬರೀಶ್, ಹಾಲಿ ಅಧ್ಯಕ್ಷರು ಮತ್ತು ಸಿಡಿಗಿನ ಮೊಳ ಗ್ರಾಮ ಪಂಚಾಯತಿ ಸದಸ್ಯರುಗಳು ಹಾಗೂ ಮೀನಳ್ಳಿಯ ಹಲವಾರು ಗ್ರಾಮಸ್ಥರು ಇಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್ ಅವರಿಗೆ ಮನವಿ ಪತ್ರ ನೀಡಿ ವಿನಂತಿಸಿದರು.
ಜಾನಕಿ ಕಾರ್ಖಾನೆ ತನ್ನ ಸುತ್ತಮುತ್ತಲ ಹಳ್ಳಿಗಳಾದ ಮೀನಹಳ್ಳಿ, ಸಿಡಿಗಿನ ಮೊಳ, ಪಿಡಿಹಳ್ಳಿ, ಕೆ ವೀರಾಪುರ ಸೇರಿದಂತೆ ಹಲವು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಘಟಕ, ವೈಯಕ್ತಿಕ ಶೌಚಾಲಯ, ಶಾಲಾ ಕಟ್ಟಡ, ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿಗಳು ನೀಡುವುದು, ಹಬ್ಬ ಹರಿ ದಿನಗಳಿಗೆ ಗ್ರಾಮದಲ್ಲಿ ಇರುವ ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಗ್ರಾಮಕ್ಕೆ ಆ ಕಾರ್ಖಾನೆಯಿಂದ ಸಹಾಯವಾಗುತ್ತದೆ ಹೊರತು ಯಾವುದೇ ತೊಂದರೆ ಆಗಿರುವುದಿಲ್ಲ. ಕಾರಣ ಕೆಲವು ಕಿಡಿಗೇಡಿಗಳು ನೀಡಿರುವ ದೂರನ್ನು ಯಾವುದೇ ಕಾರಣಕ್ಕೂ ಪರಿಗಣಿಸಿ ಕಾರ್ಖಾನೆಯ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಬಾರದು ಎಂದು ಜಿಲ್ಲಾಡಳಿತವನ್ನು ಮನವಿ ಮಾಡಿದ್ದಾರೆ.
ಪಿ.ಡಿ. ಹಳ್ಳಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಂಬರೀಷ್ ಮಾತನಾಡಿ, ಕಾರ್ಖಾನೆಯೂ ತನ್ನ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಯಾರಾದರೂ ನಿಧನ ಹೊಂದಿದರೆ,ತಕ್ಷಣಕ್ಕೆ ಅವರ ಮನೆಗೆ ಐದು ಸಾವಿರ ರೂಪಾಯಿಗಳ ಸಹಾಯಧನ ಮತ್ತು ಶವ ಸಂಸ್ಕಾರಕ್ಕೆ ಆಂಬುಲೆನ್ಸ್ ಸಹ ಒದಗಿಸುತ್ತಾರೆ, ವಿಕಲಚೇತನರಿಗೆ ಬೇಕಾಗುವ ಪರಿಕರಗಳನ್ನು ನೀಡುವುದು, ಬಡ ಜನರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವುದು ಆಹಾರದ ಕಿಟ್ ನೀಡುವುದು ಸೇರಿದಂತೆ ಹಲವಾರು ಇತಿಹಾಸ ಪುರುಷ, ಧಾರ್ಮಿಕರು ಮತ್ತು ಹೋರಾಟಗಾರರ ಜಯಂತಿಗಳನ್ನು ಆಚರಿಸಲು ಧನಸಹಾಯ ನೀಡಿ ಪ್ರೋತ್ಸಹಿಸುತ್ತಾರೆ. ಇಂತಹ ಕಾರ್ಖಾನೆಯ ವಿರುದ್ಧ ತಮ್ಮ ವೈಯಕ್ತಿಕ, ದ್ವೇಷವನ್ನು ಇಟ್ಟುಕೊಂಡು,ಸುಳ್ಳು ದೂರ ನೀಡಿ ಕಾರ್ಖಾನೆಯ ಅಧಿಕಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಇವರು ತಮ್ಮ ಸ್ವಜನ ಪಕ್ಷಪಾತ ಇಟ್ಟುಕೊಂಡು ಹೀಗೆ ದೂರಗಳನ್ನು ಸಲ್ಲಿಸುತ್ತಾರೆ, ಇವರಿಗೆ ಗ್ರಾಮ ಅಭಿವೃದ್ಧಿಗಿಂತ ತಮ್ಮ ಹಿತಾಸಕ್ತಿ ಮುಖ್ಯವಾಗಿರುತ್ತದೆ.
ಆದಕಾರಣ ಇವರ ದೂರಿಗೆ ಯಾವುದೇ ಮಾನ್ಯತೆ ನೀಡದೆ ಕಾರ್ಖಾನೆ ಇನ್ನಷ್ಟು ವಿಸ್ತರಣೆಗೆ ಮತ್ತು ಇತರೆ ಕೈಗಾರಿಕೆ ಸ್ಥಾಪನೆಗೆ ಜಿಲ್ಲಾ ಆಡಳಿತದಿಂದ ಅನುಮತಿ ನೀಡಿ ಸಹಕರಿಸಬೇಕೆಂದು, ಗ್ರಾಮ ಪಂಚಾಯತಿ ಸದಸ್ಯರು, ಬಿ.ಶಿವಾಜಿ, ರ‍್ರಿಸ್ವಾಮಿ, ನಾಗರಾಜ, ಸುಂಕಪ್ಪ, ಕೆ.ರಾಮಪ್ಪ ಶಾಶವಲಿ, ಮಹಾನಂದಿ, ಬಿ.ಚನ್ನಬಸವನಗೌಡ, ಶಿವರಾಜ, ಕೆ.ಎಸ್.ಸ್ವಾಮಿ ಸೇರಿದಂತೆ ಸುಮಾರು ೭೧ ಜನರು ಸಹಿ ಮಾಡಿರುವ ಮನವಿ ಪತ್ರವನ್ನು ಇಂದು ಜಿಲ್ಲಾಡಳಿತಕ್ಕೆ ನೀಡಿ ಮನವಿ ಮಾಡಿದರು.